ಕಸಾಪ ಉಳ್ಳಾಲ ಘಟಕದ ಮೊದಲ ಸಮಾಲೋಚನಾ ಸಭೆ
ಮುಡಿಪು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಳ್ಳಾಲ ತಾಲೂಕು ಘಟಕದ ಚಟುವಟಿಕೆಗಳನ್ನು ಈ ವರ್ಷ ‘ಸಾಮರಸ್ಯಕ್ಕಾಗಿ ಸಾಹಿತ್ಯ’ ಎಂಬ ಪರಿಕಲ್ಪನೆಯಡಿ ನಡೆಸಲಾಗುವುದು. ಒಂದು ವರ್ಷದ ಅವಧಿಯೊಳಗಡೆ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಕನಿಷ್ಟ ಒಂದಾದರೂ ಕಾರ್ಯಕ್ರಮ ನಡೆಸಲಾಗುವುದು ಎಂದು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ.
ಅವರು ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಉಳ್ಳಾಲ ಘಟಕದ ಮೊದಲ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಹೊಸತಾಗಿ ರೂಪುಗೊಂಡ ಸಾಹಿತ್ಯ ಪರಿಷತ್ತಿನ ಉಳ್ಳಾಲ ಘಟಕದ ಪದಾಧಿಕಾರಿಗಳ ಆಯ್ಕೆ, ಪದಗ್ರಹಣ ಸಮಾರಂಭದ ಕುರಿತು ಚರ್ಚೆ ಹಾಗೂ ಕಸಾಪ ಘಟಕದ ಮುಂದಿನ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಗುಣಾಜೆ ರಾಮಚಂದ್ರ ಭಟ್, ಡಾ. ಅರುಣ್ ಉಳ್ಳಾಲ, ರವೀಂದ್ರ ರೈ ಕಲ್ಲಿಮಾರು, ಚಂದ್ರಹಾಸ ಶೆಟ್ಟಿ ದೇರಳಕಟ್ಟೆ, ಆನಂದ ಕೆ ಅಸೈಗೋಳಿ, ಎಡ್ವರ್ಡ್ ಲೋಬೋ, ಮಂಜುಳಾ ಜಿ ರಾವ್ ಇರಾ, ರವಿಕುಮಾರ್ ಕೋಡಿ, ರಮೇಶ್ ಬಿ, ಅಮರನಾಥ ಪೂಪಾಡಿಕಲ್ಲು, ಅಶ್ವಿನಿ ಕೂರ್ನಾಡು ಮೊದಲಾದವರು ಮಾತನಾಡಿ ಮುಂದಿನ ಚಟುವಟಿಕೆಗಳಿಗೆ ಸಲಹೆಗಳನ್ನು ನೀಡಿದರು.
ಕಸಾಪ ಉಳ್ಳಾಲ ಘಟಕದ ನೂತನ ಪದಾಧಿಕಾರಿಗಳು:
ಅಧ್ಯಕ್ಷರಾಗಿ ಡಾ. ಧನಂಜಯ ಕುಂಬ್ಳೆ, ಗೌರವ ಕಾರ್ಯದರ್ಶಿಗಳಾಗಿ ರವೀಂದ್ರ ರೈ ಕಲ್ಲಿಮಾರು ಮತ್ತು ಎಡ್ವರ್ಡ್ ಲೋಬೋ, ತೊಕ್ಕೊಟ್ಟು, ಕೋಶಾಧಿಕಾರಿಗಳಾಗಿ ಉದ್ಯಮಿ ಲಯನ್ ಚಂದ್ರಹಾಸ ಶೆಟ್ಟಿ, ದೇರಳಕಟ್ಟೆ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಆನಂದ ಕೆ. ಅಸೈಗೋಳಿ, ಮಹಿಳಾ ಪ್ರತಿನಿಧಿಗಳಾಗಿ ಡಾ. ಸುಧಾಕುಮಾರಿ ಪೆರ್ಮನ್ನೂರು, ತೊಕ್ಕೊಟ್ಟು ಹಾಗೂ ಅಮಿತ ಆಳ್ವ , ಬೆಳ್ಮ, ದೇರಳೆಕಟ್ಟೆ, ಪದನಿಮಿತ್ತ ಸದಸ್ಯರಾಗಿ ಮಂಗಳೂರು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಕೆ. ಎಸ್ ಇವರನ್ನು ಆರಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಗುಣಾಜೆ ರಾಮಚಂದ್ರ ಭಟ್, ಚಂದ್ರಶೇಖರ ಪಾತೂರು, ಅಬೂಬಕ್ಕರ್ ಕೈರಂಗಳ, ಜಯಶ್ರೀದೇವಿ ಎಸ್.ಜಿ ಮಂಗಳಗಂಗೋತ್ರಿ, ಮಾಧವ ಉಳ್ಳಾಲ, ಎನ್ ಟಿ ರಾಮಕೃಷ್ಣ ನಾಯ್ಕ್ ಬಬ್ಬುಕಟ್ಟೆ, ರವಿಕುಮಾರ್ ಕೋಡಿ, ರಮೇಶ್ ಬಿ. ತೊಕ್ಕೊಟ್ಟು ಆಯ್ಕೆಯಾದರು.
ಪ್ರೊ. ಅಮೃತ ಸೋಮೇಶ್ವರ, ಪ್ರೊ. ಕೆ ಚಿನ್ನಪ್ಪಗೌಡ ಹಾಗೂ ಪದ್ಮಶ್ರೀ ಹರೇಕಳ ಹಾಜಬ್ಬ ಇವರನ್ನೊಳಗೊಂಡ ಮಾರ್ಗದರ್ಶನ ಮಂಡಳಿ ರೂಪಿಸಲಾಯಿತು. ಉಳ್ಳಾಲ ಭಾಗದಲ್ಲಿ ನೂತನವಾಗಿ ಘಟಕ ಉದ್ಘಾಟನೆಗೊಳ್ಳುತ್ತಿರುವುದರಿಂದ ಪ್ರತಿ ಗ್ರಾಮದಲ್ಲಿ ಕನ್ನಡ ಭಾಷೆ ಸಾಹಿತ್ಯದ ಕಾರ್ಯಕ್ರಮಗಳನ್ನು ಸಂಘಟಿಸುವ ಉದ್ದೇಶದಿಂದ ಆಯಾ ಪ್ರದೇಶದ ಸಾಹಿತಿಗಳನ್ನು ಸಂಘಟನಾ ಸಮಿತಿಯ ಸಂಚಾಲಕರಾಗಿ ಆಯ್ಕೆ ಮಾಡಲಾಯಿತು. ಉಳ್ಳಾಲ ನಗರಸಭೆ- ಡಾ. ಅರುಣ್ ಉಳ್ಳಾಲ, ಸೋಮೇಶ್ವರ ಪುರಸಭೆ: ತೋನ್ಸೆ ಪುಷ್ಕಳಕುಮಾರ್, ಕೋಟೆಕಾರ್ ಪಟ್ಟಣ ಪಂಚಾಯತು: ವಸುಂಧರ ಹರೀಶ್, ಕೊಣಾಜೆ: ಡಾ. ನವೀನ್ ಗಟ್ಟಿ, ಪಾವೂರು: ರಾಧಾಕೃಷ್ಣ ರಾವ್ ಟಿ.ಡಿ, ಹರೇಕಳ: ತ್ಯಾಗಂ ಹರೇಕಳ, ಮಂಜನಾಡಿ: ಎಂ. ಅಶೀರುದ್ದೀನ್ ಆಲಿಯಾ ಸಾರ್ತಬೈಲು, ಇರಾ: ಮಂಜುಳಾ ಜಿ. ರಾವ್ ಇರಾ, ಪೆರ್ಮನ್ನೂರು: ವಿಜಯಲಕ್ಷ್ಮಿ ಕಟೀಲು, ಕುರ್ನಾಡ್: ಅಶ್ವಿನಿ ಎಸ್ ಕುರ್ನಾಡ್, ಕೈರಂಗಳ: ಹೇಮಚಂದ್ರ ಕೈರಂಗಳ, ಅಂಬ್ಲಮೊಗರು: ಕುಸುಮ ಪ್ರಶಾಂತ್ ಉಡುಪ, ತಲಪಾಡಿ: ರಮೇಶ್ ಆಳ್ವ ದೇವಿಪುರ, ಮುನ್ನೂರು: ಸೈಫ್ ಕುತ್ತಾರ್, ಪಜೀರು: ರೇಷ್ಮಾ ನಿರ್ಮಲ್ ಭಟ್, ಬೆಳ್ಮ: ರಾಜೀವ ಮಾಸ್ತರ್, ಕಿನ್ಯಾ: ಮೇಘಶ್ರೀ ಕಜೆ ಕಿನ್ಯಾ, ಬಾಳೇಪುಣಿ: ಅಮರನಾಥ ಪೂಪಾಡಿಕಲ್ಲು, ಸಜಿಪ: ಶಾಂತಪ್ಪ ಬಾಬು, ಬೊಳಿಯಾರು: ಕೃಷ್ಣಕುಮಾರ್ ಕಮ್ಮಾಜೆ, ನರಿಂಗಾನ: ಆನಂದ ಪೂಜಾರಿ ಸರ್ಕುಡೆಲ್ ಇವರನ್ನು ಆಯ್ಕೆ ಮಾಡಲಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ