ಉಡುಪಿ: ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ, ಇದರ ಪ್ರಾಣಿ ಶಾಸ್ತ್ರ ವಿಭಾಗ ಹಾಗೂ ಎಕೋ ಕ್ಲಬ್‌ನ ಸಂಯೋಜನೆಯಲ್ಲಿ "ಬಯೋ ಮಿಮಿಕ್ರಿ ಹಾಗೂ ಸ್ನೇಕ್ ಬೈಟ್" ವಿಷಯದ ಮೇಲೆ ಉಪನ್ಯಾಸ ಏರ್ಪಡಿಸಲಾಗಿತ್ತು.
ಇಸಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕರಾದ ಡಾ. ಪ್ರಭಾಕರ್ ಶಾಸ್ತ್ರಿ ಅವರು ಬಯೋ ಮಿಮಿಕ್ರಿಯ ಬಗ್ಗೆ ಉಪನ್ಯಾಸವನ್ನು ನೀಡಿದರು.
ಡಾ. ವೃಂದಾ ಲತ್ ಡಿಪಾರ್ಟ್ಮೆಂಟ್ ಆಫ್ ಎಮರ್ಜೆನ್ಸಿ ಮೆಡಿಸಿನ್ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲ ಹಾಗೂ ಫ್ರೆಸ್ಟಂನ್ ಮಾರ್ಕ್ ಸಿರೂರ್ ಸಹಾಯಕ ಪ್ರಾಧ್ಯಾಪಕರು ಡಿಪಾರ್ಟ್ಮೆಂಟ್ ಆಫ್ ಎಮರ್ಜೆನ್ಸಿ ಮೆಡಿಸಿನ್ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲ ಇವರಿಂದ ಸ್ನೇಕ್ ಬೈಟ್ ಹಾಗೂ ಪ್ರಥಮ ಚಿಕಿತ್ಸೆಯ ವಿಷಯದ ಬಗ್ಗೆ ಜಾಗೃತಿ ಮೂಡಿಸುವ ಉಪನ್ಯಾಸ ಮಾಡಿದರು.
ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್ ನಾಯಕ್, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆಯಾದ ಡಾ. ಮನೀತಾ ಟಿ. ಕೆ, ಸಹಾಯಕ ಪ್ರಾಧ್ಯಾಪಕಿ ಯಶಸ್ವಿನಿ.ಬಿ, ಡಾ. ವಿಜಯಕುಮಾರ್ ಕೆ. ಎಂ., ಕಾಲೇಜಿನ ಐ. ಕ್ಯು, ಎ. ಸಿ ಸಂಯೋಜಕರಾದ ಅರುಣ್ ಕುಮಾರ್ ಬಿ, ಹಾಗೂ ಇತರ ವಿಭಾಗಗಳ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಸಾಕ್ಷ ಮೂರನೇ ವರುಷ ಬಿ.ಎಸ್ಸಿ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ