ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರೊ. ವಿ.ಬಿ. ಅರ್ತಿಕಜೆ ಜೊತೆ ವಿಶೇಷ ಸಂವಾದ

Upayuktha
0


 

ಪುತ್ತೂರು: ನಿವೃತ್ತ ಪ್ರಾಧ್ಯಾಪಕ ಪ್ರೊ. ವಿ.ಬಿ. ಅರ್ತಿಕಜೆ ಅವರ ಜೊತೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿಗಳು ಅವರ ಮನೆಗೆ ತೆರಳಿ ಸಂದರ್ಶಿಸಿ ವಿಶೇಷ ಸಂವಾದ ನಡೆಸಿದರು.


ಈ ಸಂದರ್ಭದಲ್ಲಿ ವಿ.ಬಿ. ಅರ್ತಿಕಜೆ ಆಶಯದ ಶುಭ ನುಡಿಗಳನ್ನಾಡಿ ಆತ್ಮ ವಿಶ್ವಾಸ ಮತ್ತು ದೃಢವಾದ ನಿರ್ಧಾರ ಕೈಗೊಳ್ಳುವುದು ಒಂದಕ್ಕೊಂದು ಪೂರಕವಾಗಿರುತ್ತದೆ. ಯಾರಲ್ಲಿ ಹೆಚ್ಚು ಆತ್ಮವಿಶ್ವಾಸ ಇರುತ್ತದೆಯೋ ಅವರಲ್ಲಿ ದೃಢ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಮನೋಭಾವ ಇರುತ್ತದೆ. ಅಂತವರು ತಮ್ಮ ಗುರಿಗಳನ್ನು ಬೇಗ ಮುಟ್ಟುತ್ತಾರೆ. ಆದ್ದರಿಂದ ತಮ್ಮ ಯೋಚನೆಗೆ ತಕ್ಕಂತೆ, ಬುದ್ದಿವಂತಿಕೆಗೆ ಅನುಗುಣವಾಗಿ ಕೆಲಸವನ್ನು ಹಿಡಿಯುವಲ್ಲಿ ಕಾರ್ಯನಿರತರಾಗುವುದು ಉತ್ತಮ. ಹಾಗೆಯೇ ದೊಡ್ಡವರಾದ ನಂತರ ತಮಗೆ ಬೇಕಾದ ವಸ್ತುಗಳನ್ನು ತಾವೇ ನಿರ್ಧರಿಸಿ ಸರಿಯಾದ ದಾರಿಯಲ್ಲಿ ಹೋಗುವುದು ಪ್ರತಿಯೊಬ್ಬನ ಕರ್ತವ್ಯ. ಅಲ್ಲದೆ ಶಿಕ್ಷಣದಲ್ಲಿ ಸಂಸ್ಕಾರವನ್ನು ಕಲಿತುಕೊಂಡು ಮನುಷ್ಯತ್ವವನ್ನು ಬೆಳೆಸುವುದು. ಈ ಮೂಲಕ ಸುಪ್ತ ಪ್ರತಿಭೆಯನ್ನು ಪ್ರಕಾಶಿಸಬೇಕು ಎಂದು ಹೇಳಿದರು.


ಸಂವಾದವನ್ನು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳಾದ ವಸುದೇವ ತಿಲಕ್, ದಿಶಾ, ವರ್ಷ, ವೈಷ್ಣವಿ ಶೆಟ್ಟಿ ಮತ್ತು ದೇವಯಾನಿ ನಡೆಸಿದರು. ಉಪನ್ಯಾಸಕಿಯರಾದ ಸಾಯಿಸುಧಾ ಮತ್ತು ಕವಿತಾ  ಸಂವಾದದಲ್ಲಿ ಭಾಗಿಯಾಗಿದ್ದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top