ಡಿವಿಜಿ ಎಂಬ ಮೂರಕ್ಷರದ ಧೀಮಂತ್ರ! ಮಹಾಮಂತ್ರ!!

Upayuktha
0

(ಇಂದು ಡಿವಿಜಿ ಅವರ ಜನ್ಮದಿನ. ವಾಸ್ತವವಾಗಿ ಅವರು ಹುಟ್ಟಿದ ದಿನ ಯಾವುದೆಂದು ಖಚಿತವಾಗಿ ಹೇಳಲಾಗದು. ಯಾವುದೋ ಒಂದು ಸಂದರ್ಭದಲ್ಲಿ ಅವರು ತಮ್ಮ ಜಾತಕವನ್ನೇ ಹರಿದು ಎಸೆದರು! ಆದರೂ ಮಾರ್ಚ್ 17ರಂದು ಅವರ ಜನ್ಮದಿನವನ್ನು ಆಚರಿಸಲಾಗುತ್ತದೆ.) 


ಕಗ್ಗ ಎಂದರೆ ಕೆಲಸಕ್ಕೆ ಬಾರದ್ದು, ಕಸ ಎಂಬ ಅರ್ಥಗಳಿವೆ. ತಮ್ಮ ಕೃತಿಗೆ ಕಗ್ಗ ಎಂದು ಹೆಸರಿಟ್ಟು ಅದರ ಅರ್ಥವನ್ನೇ ತಿರುವು- ಮುರುವು ಮಾಡುವಂತೆ ಬರೆದವರು ನಮ್ಮ ಡಿವಿಜಿ. ಈಗ ಕಗ್ಗಕ್ಕೆ ಮಹತ್ತ್ವದ್ದು, ರಸಮಯ ಕಾವ್ಯ ಎಂಬ. ಅರ್ಥಗಳು ಸ್ಫುರಿಸಿವೆ. ಅವರು ಸೃಜಿಸಿದ ಮಂಕುತಿಮ್ಮ, ಮರುಳ ಮುನಿಯ ವಾಸ್ತವವಾಗಿ ನಮ್ಮ ನಡುವೆ ಇಲ್ಲದೆಯೇ ದಂತಕತೆಗಳಾಗಿದ್ದಾರೆ!


ಡಿವಿಜಿ ಅವರು ಕೋಲಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ, ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಧೀರೋದಾತ್ತವಾಗಿ ಫೇಲಾದವರು! ಹಾಗೆಂದರೇನು ಎಂದಿರಾ? ಕನ್ನಡದಲ್ಲಿ ಒಂದೇ ಒಂದು ಅಂಕ ಕಡಿಮೆ ಬಂದಿತ್ತು  ಉತ್ತೀರ್ಣರಾಗಲು! ಈ ಪುಣ್ಯಾತ್ಮ ಅನಂತರ ಭಗವದ್ಗೀತೆಗೆ ಕನ್ನಡದಲ್ಲಿ ನ ಭೂತೋ ಎಂಬಂತೆ ತಾತ್ಪರ್ಯ ಬರೆದರು ಎಂಬುದನ್ನು ನೆನೆದಾಗ ಬೆರಗು ಬೆಳಕಾದಂತಹ ಅನುಭವ.


ಅವರ ಅತಿ ದೊಡ್ಡ ಕೊಡುಗೆ ಅವರ ಮಗ ಲೇಖಕ-ಸಸ್ಯಶಾಸ್ತ್ರಜ್ಞ ಬಿಜಿಎಲ್ ಸ್ವಾಮಿ. (ತಮಿಳು ತಲೆಗಳಲ್ಲಿ, ಬಾಯಲ್ಲಿ ಬಿಚಿಲ ಚಾಮಿ)!


ಡಿವಿಜಿ ಮುತ್ಸದ್ದಿ, ದ್ರಷ್ಟಾರ, ಕವಿ, ಪತ್ರಕರ್ತ. ಗೋಖಲೆ ಸಾರ್ವಜನಿಕ ಸಂಸ್ಥೆಗೆ ತಮ್ಮ ಅಷ್ಟೂ ಪುಸ್ತಕಗಳನ್ನು, ಸಮಸ್ತವನ್ನೂ  ದಾನಮಾಡಿದವರು ಡಿವಿಜಿ.


ಅವರಿಗೆ ಜ್ಞಾನಪೀಠ ಪ್ರಶಸ್ತಿ ನಿಕ್ಕಿಯಾಗಿತ್ತು. ಆದರೆ ಅನ್ಯಾಯವಾಯಿತು. ಡಿವಿಜಿ ಹಾಗೂ ಮತ್ತೊಬ್ಬರಿಗೆ ಸಮಾನ ಮತಗಳು ಬಂದಿದ್ದವು. ಆಯ್ಕೆ ಸಮಿತಿಯ ಅಧ್ಯಕ್ಷರು ತಮ್ಮ ಮತವನ್ನು ಉತ್ತರದವರ ಪರ ಚಲಾಯಿಸಿದರು. ಉತ್ತರದ ಸಾಮ್ರಾಜ್ಯಶಾಹಿಯಿಂದಾಗಿ ಕನ್ನಡ ಈ ಪುರಸ್ಕಾರದಿಂದ ವಂಚಿತವಾಯಿತು. ಡಿವಿಜಿಯವರು ಈ ಪ್ರಶಸ್ತಿ, ಪುರಸ್ಕಾರಗಳಿಗಾಗಿ ಕದ ಬಡಿದವರಲ್ಲ. ಅವರು ತ್ಯಾಗರಾಜರ ಎಂದುರೋ ಮಹಾನುಭಾವರಲ್ಲಿ ಒಬ್ಬರಲ್ಲ. ಕೊಂದರೇ ಮಹಾನುಭಾವರಲ್ಲಿ ಒಬ್ಬರು! ಅಂದರೇ ಕೆಲವೇ ಕೆಲವು ಮಹಾನುಭಾವರಲ್ಲಿ ಒಬ್ಬರು. ಅವರು ಸರಸಿ, ರಸಿಕ, ಉದಾರಿ, ನಿಸ್ಪೃಹ ಏನೆಲ್ಲ. ಎಷ್ಟೆಲ್ಲ. ಬಡತನದ ಕೆಸರಿನಲ್ಲಿ ಬಿರಿದ ಕಮಲ!


ಅವರು ನಮಗೆ ಮೂರಕ್ಷರದ ಧೀಮಂತ್ರ, ಮಹಾಮಂತ್ರ.

-ಕೆ. ರಾಜಕುಮಾರ್


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top