||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಿಲಿಕಾನ್ ಸಿಟಿಯಲ್ಲಿ ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನಾಚರಣೆ

ಸಿಲಿಕಾನ್ ಸಿಟಿಯಲ್ಲಿ ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನಾಚರಣೆ

ಪೂಜಾ ಕುಣಿತ | ಅನ್ನದಾನ | ರಕ್ತದಾನ | ಕರ್ನಾಟಕ ರತ್ನ ಪ್ರಶಸ್ತಿ ಬೆಂಗಳೂರು: ನಗರದ ಬನಶಂಕರಿಯ ಕತ್ತರಿಗುಪ್ಪೆ ಸಮೀಪ ಇರುವ ಚೆನ್ನಮ್ಮನ ಕೆರೆ ಅಚ್ಚಕಟ್ಟುವಿನಲ್ಲಿ ಇರುವ ವೃತ್ತದಲ್ಲಿ ಪವರ್ ಸ್ಟಾರ್ ಡಾ.ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನಾಚರಣೆ ಅಂಗವಾಗಿ ಅಪ್ಪು ಅಭಿಮಾನಿಗಳಾದ ಗ್ರೀನ್ ಬಾಯ್ಸ್ ತಂಡದ ಆನಂದ್, ಮಧು, ಹರೀಶ್, ರಾಜು, ರವಿ ಲಕ್ಕಿ, ದರ್ಶನ್, ಮೋಹನ್ ಗೌಡ, ಮರಿ ಸ್ವಾಮಿ ಇನ್ನೂ ಮೊದಲಾದವರು ರಕ್ತದಾನ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಅನ್ನದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.   


ಪೂಜಾ ಕುಣಿತ:

ಚನ್ನಪಟ್ಟಣದ ಆದಿಶಕ್ತಿ ದೇವತೆಯ ಪೂಜಾ ಕುಣಿತದ ಜೊತೆಗೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಾದ ಗ್ರೀನ್ ಬಾಯ್ಸ್ ತಂಡದವರ ಕೋರಿಕೆಯಂತೆ ಪುನೀತ್ ರಾಜ್ ಕುಮಾರ್ ಭಾವಚಿತ್ರವನ್ನು ದೇವಿಯ   ಹಿಂಭಾಗದಲ್ಲಿ ಕಾಣುವಂತೆ ಚನ್ನಪಟ್ಟಣದ ಸುಭಾಷ್, ನಾಗೇಶ್ ಅವರು ಪೂಜಾ ಕುಣಿತ ನಡೆಸಿಕೊಟ್ಟರು.  


ನವಚೈತನ್ಯ ಕನ್ನಡ ಗೆಳಯರ ಬಳಗದಿಂದ ಅನ್ನದಾನ:

ನಗರದ ಬನಶಂಕರಿ ಮೂರನೇ ಹಂತದ ಹೊಸಕೆರೆಹಳ್ಳಿಯ ದತ್ತಾತ್ರೆಯ ನಗರದಲ್ಲಿ ಇರುವ "ನವಚೈತನ್ಯ ಕನ್ನಡ ಗೆಳಯರ  ಬಳಗದಿಂದ ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರ 47ನೇ ಜನ್ಮದಿನ  ಆಚರಣೆ ಪ್ರಯುಕ್ತ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಗರದಾದ್ಯಂತ, ಸಂಗೀತ ಕಾರ್ಯಕ್ರಮ, ವಸ್ತು ಪ್ರದರ್ಶನ ಸೇರಿದಂತೆ ಅಪ್ಪು ಸ್ಮರಣೆಗಾಗಿ ಹಲವಾರು ಕಾರ್ಯಕ್ರಮಗಳು ಏರ್ಪಡಿಸಲಾಗಿತ್ತು.


"ಜೇಮ್ಸ್"- ಪವರ್ ಸ್ಟಾರ್  ಪುನೀತ್ ಅವರ ಕೊನೆಯ ಚಿತ್ರ:

ಪವರ್ ಸ್ಟಾರ್  ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನಾಚರಣೆ ಅಂಗವಾಗಿ ಅವರ ಕೊನೆಯ ಚಿತ್ರ ಜೇಮ್ಸ್ ಚಲನಚಿತ್ರವು ಜಗತ್ತಿನಾದ್ಯಂತ 5 ಭಾಷೆಗಳಲ್ಲಿ 4 ಸಾವಿರ ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. 


ಪುನೀತ್ ರಾಜ್‍ಕುಮಾರ್ ಅವರಿಗೆ "ಕರ್ನಾಟಕ ರತ್ನ ಪ್ರಶಸ್ತಿ" ಅಭಿಮಾನಿಗಳು ಸಂತಸ:  

ಸದ್ಯದಲ್ಲೇ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದು ಅದಕ್ಕೆ ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳಾದ ಗ್ರೀನ್ ಬಾಯ್ಸ್ ತಂಡ ಹಾಗೂ "ನವಚೈತನ್ಯ ಕನ್ನಡ ಗೆಳಯರ ಬಳಗದವರು  ಸಂತಸ ವ್ಯಕ್ತಪಡಿಸಿದ್ದಾರೆ.

ಚಿತ್ರ, ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ 


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post