|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಾರತೀಯ ಸದ್ಚಿಚಾರಗಳ ಮೇಲೆ ಉಡುಪಿ ಮಠಗಳ ಪ್ರಭಾವ ಮಹತ್ತರ: ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೈ

ಭಾರತೀಯ ಸದ್ಚಿಚಾರಗಳ ಮೇಲೆ ಉಡುಪಿ ಮಠಗಳ ಪ್ರಭಾವ ಮಹತ್ತರ: ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೈ



ಉಡುಪಿ: ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೈ ಅವರು ಇಂದು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು.


ಶ್ರೀ ಕೃಷ್ಣಮಠದಲ್ಲಿ ರಾಜ್ಯಪಾಲರನ್ನು ದಿವಾನರಾದ ವರದರಾಜ ಭಟ್ಟರು ಮತ್ತು ಪುರೋಹಿತರಾದ ಗೌರವದಿಂದ ಬರಮಾಡಿಕೊಂಡರು. ಶ್ರೀ ಕೃಷ್ಣ ಮುಖ್ಯಪ್ರಾಣರು, ಸರ್ವಜ್ಞ ಪೀಠ, ಸುಬ್ರಹ್ಮಣ್ಯ ದೇವರು, ನವಗ್ರಹ ದೇವರ ದರ್ಶನ ಪಡೆದು ತೀರ್ಥ ಪ್ರಸಾದವನ್ನೂ ಸ್ವೀಕರಿಸಿ ಗೋಶಾಲೆಗೆ ಭೇಟಿ ನೀಡಿ ಗೋವುಗಳನ್ನು ಕಂಡು ಅತೀವ ಸಂತಸ ಪಟ್ಟರು. ಬಳಿಕ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥರನ್ನು ಭೇಟಿಯಾಗಿ ಫಲಪುಷ್ಪ ಭಕ್ತಿ ಗೌರವ ಸಮರ್ಪಿಸಿದರು. ಶ್ರೀಪಾದರು ಪಿಳ್ಳೈಯವರನ್ನು ಮನಸಾ ಅಭಿನಂದಿಸಿ ಶಾಲು ಸ್ಮರಣಿಕೆ ಸಹಿತ ಶ್ರೀದೇವರ ಪ್ರಸಾದ, ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ಧರ್ಮಪತ್ನಿ ರೀಟಾ, ಉಡುಪಿ ತಹಶೀಲ್ದಾರ್ ಡಿ.ಅರ್ಚನಾ ಭಟ್, ಮಠದ ಅಭಿಮಾನಿಗಳಾದ ವಾಸುದೇವ ಭಟ್ ಪೆರಂಪಳ್ಳಿ, ಪ್ರದೀಪ ರಾವ್ ಮೊದಲಾದವರು ಉಪಸ್ಥಿತರಿದ್ದರು.


ನೆರೆಯ ಕೇರಳದವನಾಗಿದ್ದರೂ ಉಡುಪಿ ಭೇಟಿಯ ಕನಸು ಬಹಳ ತಡವಾಗಿ ನನಸಾಗುತ್ತಿದೆ. ಕಳೆದ ಹಲವು ಶತಮಾನಗಳಿಂದ ಭಾರತೀಯ ಸನಾತನ ಸದ್ವಿಚಾರಗಳ ಮೇಲೆ ಉಡುಪಿ ಮಠಗಳ ಪ್ರಭಾವ ಮಹತ್ತರವಾದುದು. ಇವತ್ತು ಶ್ರೀ ಕೃಷ್ಣನ ದರ್ಶನ ಸ್ವಾಮೀಜಿಯವರ ದರ್ಶನದಿಂದ ಅತ್ಯಂತ ಸಂತೋಷಗೊಂಡಿದ್ದೇನೆ. ಈ ಹಿಂದೆ 1978ರಲ್ಲಿ ಕೇರಳದಲ್ಲಿ ಸನಾತನ ಧರ್ಮರಕ್ಷಣೆಯ ಸಲುವಾಗಿ ಬೃಹತ್ ಸಂತ ಸಮಾವೇಶ ಮತ್ತು ಹಿಂದು ಸಂಗಮ ನಡೆದಾಗ ಶ್ರೀ ವಿಶ್ವೇಶತೀರ್ಥ ಶ್ರೀಪಾದರೇ ನೇತೃತ್ವ ವಹಿಸಿ ನೀಡಿದ ಮಾರ್ಗದರ್ಶನ ಅವಿಸ್ಮರಣೀಯ. ಆ ಧರ್ಮೋತ್ಸವದಲ್ಲಿ ಸಂಯೋಜಕ ಸಮಿತಿಯಲ್ಲಿ ನಾನೂ ಓರ್ವ ಸಂಚಾಲಕನಾಗಿದ್ದೆ ಅನ್ನೋದೇ ಒಂದು ಭಾಗ್ಯ. ವಿಶ್ವೇಶತೀರ್ಥರು ಒಂದು ಅದ್ಭುತ ಶಕ್ತಿಯಾಗಿದ್ದರು ಎಂದು ಪಿಳ್ಳೈ ಸ್ಮರಿಸಿಕೊಂಡರು.


ಪೇಜಾವರ ಮಠಕ್ಕೆ ಭೇಟಿ:

ಬಳಿಕ ಪೇಜಾವರ ಮಠಕ್ಕೆ ಆಗಮಿಸಿದ ಪಿಳ್ಳೈಯವರನ್ನು ಶ್ರೀಗಳ ಆಪ್ತಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್, ಹಾಗೂ ಶ್ರೀಗಳ ಶಾಸ್ತ್ರ ವಿದ್ಯಾರ್ಥಿಗಳು ಮಂತ್ರಘೋಷ ಸಹಿತ ಬರಮಾಡಿಕೊಂಡರು. ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರ ಹಾಗೂ ಪವಿತ್ರ ಪಾದುಕೆಗಳಿಗೆ ಪುಷ್ಪ ಅರ್ಪಿಸಿದ ಬಳಿಕ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಕೆಲಹೊತ್ತು ಸಮಾಲೋಚನೆ ನಡೆಸಿದರು. ಶ್ರೀಗಳು ರಾಜ್ಯಪಾಲರನ್ನು ಶಾಲು ಸ್ಮರಣಿಕೆ ದೇವರ ಗಂಧಪ್ರಸಾದ ಹಾಗೂ ಫಲ ಮಂತ್ರಾಕ್ಷತೆ ನೀಡಿ ದಂಪತಿಯನ್ನು ಆಶೀರ್ವದಿಸಿದರು.‌ ವಾಸುದೇವ ಭಟ್ ಪೆರಂಪಳ್ಳಿ ಈ ಭೇಟಿಯ ರಾಜ್ಯಪಾಲರ ಸಂಯೋಜನೆಯಲ್ಲಿ ಸಹಕರಿಸಿ ಶ್ರೀ ಕೃಷ್ಣಮಠ ಅಷ್ಟಮಠಗಳು ಅದರ ಚರಿತ್ರೆ ಹಾಗೂ ಅವುಗಳು ನಿರ್ವಹಿಸುತ್ತಿರುವ ಧಾರ್ಮಿಕ ಸಾಮಾಜಿಕ ಕಾರ್ಯಗಳನ್ನು ವಿವರಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 Comments

Post a Comment

Post a Comment (0)

Previous Post Next Post