'ವಿಜಯವಿಕಾಸ' ಆತ್ಮಕಥೆ ಬಿಡುಗಡೆ

Upayuktha
0

ಕುಂಬಳೆ: ಮುಜುಂಗಾವಿನ ಶ್ರೀ ಭಾರತೀ ವಿದ್ಯಾಪೀಠದಲ್ಲಿ ವಿಜಯಾಸುಬ್ರಹ್ಮಣ್ಯ ಕುಂಬಳೆ ಇವರ ಆತ್ಮಕಥೆ  ವಿಜಯವಿಕಾಸ ಗಣ್ಯರ ಉಪಸ್ಥಿತಿಯಲ್ಲಿ ಶುಕ್ರವಾರ (ಮಾ.25) ಲೋಕಾರ್ಪಣೆಗೊಂಡಿತು.


ಧರ್ಮದರ್ಶಿ, ಶ್ರೀ ಹರಿಕೃಷ್ಣ ಪುನರೂರು, ಮಾಜಿ ರಾಜ್ಯಾಧ್ಯಕ್ಷರು, ಕ.ಸಾ.ಪ ಇವರು ಸಭಾಧ್ಯಕ್ಷರಾಗಿ ಉಪಸ್ಥಿತರಿದ್ದು ಮಾತನಾಡಿ, ಕನ್ನಡದ ಕಾರ್ಯಕ್ರಮ ಗಡಿನಾಡ ಘಟಕದಲ್ಲಿ ಹೆಚ್ಚು ಹೆಚ್ಚು ನಡೆಯುತ್ತಿದ್ದು, ವಿಜಯಾಸುಬ್ರಹ್ಮಣ್ಯರ ಆತ್ಮಕಥೆ ಬಿಡುಗಡೆ ಅತಿ ಸಂತೋಷ ತಂದಿದೆ ಎಂದರು.


ಮುಖ್ಯ ಅತಿಥಿಗಳಾಗಿ ಡಾ|ರಮಾನಂದ ಬನಾರಿ, ಹಿರಿಯ ಸಾಹಿತಿಗಳಾದ ಶ್ರೀ ವಿ.ಬಿ.ಅರ್ತಿಕಜೆ, ಶ್ರೀ ವಿ.ಬಿ. ಕುಳಮರ್ವ,  ಶ್ರೀ ಹರಿಕೃಷ್ಣ ಭರಣ್ಯ, ಅತ್ಯುತ್ತಮ ಕೃಷಿಕ ಶ್ರೀ ಕೃಷ್ಣಮೋಹನಭಟ್ಟ ಮಾಯಿಪ್ಪಾಡಿ, ಶ್ರೀಮತಿ ಈಶ್ವರಿ ಬೇರ್ಕಡವು, ಶ್ರೀ ವೆಂಕಟಕೃಷ್ಣ ಶಂಕರಮೂಲೆ ಇವರುಗಳು ಇದ್ದರು.


ಮುಜುಂಗಾವು ವಿದ್ಯಾಪೀಠದ ಆಡಳಿತಾಧಿಕಾರಿಗಳಾದ ಶ್ಯಾಂಭಟ್ ದರ್ಭೆಮಾರ್ಗ ಶುಭಾಶಂಸನೆಗೈದರು. ಮುಜುಂಗಾವು ವಿದ್ಯಾಪೀಠದ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ವಿಜಯವಿಕಾಸದ ಲೇಖಕಿ ವಿಜಯಾಸುಬ್ರಹ್ಮಣ್ಯ ಕುಂಬಳೆ ಪ್ರಾಸ್ತಾವಿಕ ಮಾತನಾಡಿ, ಕ.ಸಾ.ಪ ಗಡಿನಾಡು ಘಟಕದ ಅಧ್ಯಕ್ಷರಾದ ಶ್ರೀ ಎಸ್.ವಿ.ಭಟ್ಟರು ಕೃತಿ ಲೋಕಾರ್ಪಣೆ ಗೈದರು.


ನಿವೃತ್ತ ಶಿಕ್ಷಕರಾದ ಶ್ರೀ ಎಚ್ ರಾಮಭಟ್ ಹಳೆಮನೆ ಕಾರ್ಯಕ್ರಮ ನಿರೂಪಿಸಿ, ಶ್ರೀ ಮಂಜುನಾಥ ಪ್ರಸಾದ ಶಂಕರಮೂಲೆ ಧನ್ಯವಾದವಿತ್ತರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top