|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಬಿಕಾದಲ್ಲಿ ಬೀಳ್ಕೊಡುಗೆ ಸಮಾರಂಭ

ಅಂಬಿಕಾದಲ್ಲಿ ಬೀಳ್ಕೊಡುಗೆ ಸಮಾರಂಭ

ಪುತ್ತೂರು: ಮಾತೃದೇವೋ ಭವ, ಪಿತೃದೇವೋ ಭವ, ಸತ್ಯಂವದ ಧರ್ಮಂ ಚರ, -ಶಿಕ್ಷಾವಲ್ಲಿಯ ಪಾಠವನ್ನು ಕೇಳಿಕೊಂಡು ಯಾರು ಅದರಂತೆ ನಡೆಯುತ್ತಾರೋ ಅವರು ಜೀವನದಲ್ಲಿ ಖಂಡಿತಾ ಮುಂದೆ ಬರುತ್ತಾರೆ. ಶಿಕ್ಷಣದಲ್ಲಿ ಗುರುಗಳು ವಿದ್ಯಾರ್ಥಿಗಳಿಗೆ ಹೇಳಿಕೊಡುವುದು ಇದನ್ನೇ; ಇದುವೇ ಸಾರ್ಥಕ ಜೀವನಕ್ಕೆ ಅಡಿಗಲ್ಲು. ವಿದ್ಯೆ ಎನ್ನುವುದು ಜೀವನ ಮೌಲ್ಯವನ್ನು ರೂಪಿಸಬೇಕು. ಯಾವ ಕೆಲಸದಿಂದ ತನಗೆ ಹಾಗೂ ಇತರರಿಗೆ ಒಳ್ಳೆಯದಾಗುತ್ತದೋ, ಆ ಕೆಲಸ ಮಾಡಬೇಕು; ಇದು ಗುರುವಿನ ಉಪದೇಶ, ಆದೇಶ. ವಾನರನಂತಿದ್ದವನು ನರನಾಗಬೇಕು, ನರನಂತಿದ್ದವನು ನಾರಾಯಣನಾಗಬೇಕು; ಇದು ಶಿಕ್ಷಣದ ಉದ್ದೇಶ. ಶಿಕ್ಷಣದಿಂದ ವಿದ್ಯಾರ್ಥಿಯ ಅಂತರಂಗ ವಿಕಾಸವಾಗಬೇಕು ಎಂದು ಖ್ಯಾತ ವಾಗ್ಮಿ ಹಾಗೂ ಗಣಿತಶಾಸ್ತ್ರ ದ ಉಪನ್ಯಾಸಕರೂ ಆದ ಆದರ್ಶ ಗೋಖಲೆಯವರು ನಮ್ಮ ಭಾರತೀಯ ಗುರು ಪರಂಪರೆಯ ಬಗ್ಗೆ ಉತ್ತಮ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಅರುಹಿದರು.


ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.


ಉತ್ತಮ ಗುಣನಡತೆ ನಿಮ್ಮದಾಗಿಸಿ, ಸಮಯ ಪ್ರಜ್ಞೆಯಿಂದ ಮುಂಬರುವ ದ್ವಿತೀಯ ಪಿಯುಸಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ನೂರು ಪ್ರತಿಶತ ಫಲಿತಾಂಶ ಕಾಲೇಜಿಗೆ ದೊರಕಿಸಿ ಕೊಡಿ, ಭವಿಷ್ಯ ಉಜ್ವಲವಾಗಲಿ ಎಂದು ಆಡಳಿತ ಮಂಡಳಿಯ ಸದಸ್ಯ ಹಾಗೂ ಅನುಭವಿ ವಿಶ್ರಾಂತ ಶಿಕ್ಷಕ ಸುರೇಶ್ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಹರಸಿದರು.


ಅಂಬಿಕಾದ ವಿದ್ಯಾರ್ಥಿಗಳು ಭಾರತ ಸಂಸ್ಕೃತಿಯ ರಾಯಭಾರಿಗಳು, ನೀವು ನಿಮ್ಮ ಹೆತ್ತವರ ಕನಸನ್ನು ನನಸು ಮಾಡಿ, ಶುಭವಾಗಲಿ ಎಂದು ಆಂಗ್ಲಭಾಷಾ ಉಪನ್ಯಾಸಕರಾದ ರಾಮಚಂದ್ರ ಎನ್ ಕೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಸಭೆಯ ಅಧ್ಯಕ್ಷ ಪೀಠವನ್ನಲಂಕರಿಸಿದ ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ಅಂಬಿಕಾ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಕೊಡಮಾಡಲ್ಪಟ್ಟ ಯೋಗ, ಭಗವದ್ಗೀತೆ, ಉಚಿತ ಶಿಕ್ಷಣ, ಶುಲ್ಕದಲ್ಲಿ ನ್ಯಾಯ, ತತ್ವಶಾಸ್ತ್ರ, ಅಮರ್ ಜವಾನ್ ಜ್ಯೋತಿ ಸ್ಮಾರಕ ಈ ಎಲ್ಲಾ ವಿಚಾರವಾಗಿ ಹೇಳುತ್ತಾ ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶಕ್ಕಾಗಿ ಸಮಾಜಕ್ಕಾಗಿ ಒಳಿತನ್ನು ಮಾಡಿ. ನಿಸ್ವಾರ್ಥ ಬದುಕನ್ನು ಬಾಳಿ. ಉಜ್ವಲ ಭವಿಷ್ಯ ನಿಮ್ಮದಾಗಲಿ, ಭಗವಂತನು ನಿಮಗೆಲ್ಲಾ ಒಳ್ಳೆಯದು ಮಾಡಲಿ, ಉತ್ತಮ ಫಲಿತಾಂಶ ದೊರೆಯಲಿ ಎಂದು ತುಂಬು ಮನದಿಂದ ವಿದ್ಯಾರ್ಥಿಗಳನ್ನು ಆಶೀರ್ವದಿಸಿದರು.


ರಾಜೀವ ಗಾಂಧಿ ವಿಶ್ವವಿದ್ಯಾಲಯದಿಂದ ಆಯುರ್ವೇದ ವೈದ್ಯಕೀಯ ಪದವಿ ಬಿ.ಎ.ಎಂ.ಎಸ್. ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದ ಅಂಬಿಕಾದ ಹಿರಿಯ ವಿದ್ಯಾರ್ಥಿನಿ ಸಾಯಿ ಚಿನ್ಮಯಿ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.


ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಹಾಗೂ ಉಪನ್ಯಾಸಕ ವೃಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸನ್ಮಾನಿತರಾದ ಸಾಯಿ ಚಿನ್ಮಯಿಯ ಹೆತ್ತವರು ಸಭೆಯಲ್ಲಿ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳಾದ ಸ್ಕಂದ ಗಣೇಶ್, ಕನ್ಯಾ ಶೆಟ್ಟಿ, ಶ್ರೀವತ್ಸ, ಅಭಿಜ್ಞಾ ರಾವ್ ವಿದ್ಯಾಲಯದಲ್ಲಿ ಎರಡು ವರ್ಷಗಳ ಕಾಲ ಪಡೆದ ಅನುಭವವನ್ನು ಹಂಚಿಕೊಂಡರು.


ಕಾಲೇಜಿನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸಾಯಿಸ್ತುತಿ, ಶರಣ್ಯ ಹಾಗೂ ದೀಪ ಪ್ರಾರ್ಥಿಸಿದರು. ಉಪನ್ಯಾಸಕ ಕೇಶವ ಕಿಶೋರ್ ವಂದಿಸಿದರು. ಉಪನ್ಯಾಸಕಿ ಅಕ್ಷತಾ ಎಂ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ಮುರಳಿ ಮೋಹನ್ ಸಹಕರಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post