ಕ. ಸಾ ಪ. ಮೂಡುಬಿದಿರೆ ತಾಲೂಕು ಘಟಕದ ಸಮಾಲೋಚನ ಸಭೆ

Upayuktha
0

 

ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ಸಮಾಲೋಚನ ಸಭೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರ ಕಛೇರಿಯಲ್ಲಿ ಏರ್ಪಡಿಸಲಾಗಿತ್ತು. ಡಾ ಮೋಹನ ಆಳ್ವರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಲ್ಲದೆ, ಕನ್ನಡ ಭವನದಲ್ಲಿ ಪರಿಷತ್ತಿನ ಕಚೇರಿಗೆ ಹಾಗೂ ವಿವಿಧ ಚಟುವಟಿಕೆಗಳಿಗೆ ಅವಕಾಶ ನೀಡುವುದಾಗಿ ತಿಳಿಸಿದರು.


ಮೂಡುಬಿದಿರೆ ತಾಲೂಕಾಗಿ ಘೋಷಿಸಿದ ಬಳಿಕ ಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ರಚನೆಗೊಳ್ಳುತ್ತಿದ್ದು, ಪರಿಷತ್ತಿನ ಸದಸ್ಯರ ಹಾಗೂ ಸಾಹಿತ್ಯಾಸಕ್ತರ ಬೆಂಬಲವನ್ನು ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿಯವರು ಕೋರಿದರು. ಸದಸ್ಯರ ಸಲಹೆ, ಸೂಚನೆಯನ್ನು ಈ ಸಂಧರ್ಭದಲ್ಲಿ ಸ್ವೀಕರಿಸಲಾಯಿತು. ವೇಣುಗೋಪಾಲ ಶೆಟ್ಟಿ ಕಾರ‍್ಯಕ್ರಮ ನಿರ್ವಹಿಸಿ, ಸ್ವಾಗತಿಸಿದರು. ಸದಾನಂದ ನಾರಾವಿ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Advt Slider:
To Top