ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 6 ವಿದ್ಯಾರ್ಥಿಗಳಿಗೆ ರ‍್ಯಾಂಕ್ ಹಾಗೂ ಚಿನ್ನದ ಪದಕ

Upayuktha
0


ಮಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾಂ ನಡೆಸಿದ 2020-2021ನೇ ಸಾಲಿನ ಪರೀಕ್ಷೆಯಲ್ಲಿ ಮಂಗಳೂರಿನ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ 6 ವಿದ್ಯಾರ್ಥಿಗಳು ವಿವಿಧ ವಿಭಾಗಳಲ್ಲಿ ರ‍್ಯಾಂಕ್ ಗಳಿಸಿರುತ್ತಾರೆ. ನ್ಯಾನೋ ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿ ನವನೀತ ಗೌಡ ಎಂ. ಒಟ್ಟು 9.56 ಸಿಜಿಪಿಎ ಅಂಕಗಳನ್ನು ಗಳಿಸುವುದರ ಮೂಲಕ ಪ್ರಥಮ ರ‍್ಯಾಂಕ್ ಮತ್ತು ವಿಟಿಯುನ ಚಿನ್ನದ ಪದಕವನ್ನು ಪಡೆದಿರುತ್ತಾರೆ. ಅದೇ ವಿಭಾಗದಲ್ಲಿ 9.50 ಸಿಜಿಪಿಎ ಅಂಕಗಳನ್ನು ಗಳಿಸುವುದರ ಮೂಲಕ ಅನುಷಾ ಬಿ. ಶೆಟ್ಟರ್ ಎರಡನೇ ರ‍್ಯಾಂಕ್ ಪಡೆದಿರುತ್ತಾರೆ.


ಮರೈನ್ ಇಂಜಿನಿಯರಿಂಗ್ ವಿಭಾಗದಲ್ಲಿ 9.11 ಸಿಜಿಪಿಎ ಅಂಕಗಳ ಗಳಿಸುವುದರ ಮೂಲಕ ಮೃದುಲ ಟಿ.ಎಚ್. ಮೂರನೇ ರ‍್ಯಾಂಕ್, 8.90 ಸಿಜಿಪಿಎ ಅಂಕಗಳ ಮೂಲಕ ಗಣೇಶ್ ಎಂ. ಕಳ್ಳಿಮನಿ ಐದನೇ ರ‍್ಯಾಂಕ್ ಹಾಗೂ 8.78 ಸಿಜಿಪಿಎ ಮೂಲಕ ನಿಶಾನ್ ಏಳನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರೆಲ್ಲರೂ ಭವಿಷ್ಯದಲ್ಲಿ ಉತ್ತಮ ಮರೈನ್ ಇಂಜಿನಿಯರ್ ಆಗಬೇಕೆಂಬ ಕನಸನ್ನು ಇಟ್ಟುಕೊಂಡಿದ್ದಾರೆ.


ಎಂ.ಸಿ.ಎ. ವಿಭಾಗದಲ್ಲಿ ಕೀರ್ತಿ ನಾರಾಯಣ್ ಪಟಗಾರ್ 9.25 ಸಿಜಿಪಿಎ ಗಳಿಸುವುದರ ಮೂಲಕ  ಮೂರನೇ ರ‍್ಯಾಂಕನ್ನು ಗಳಿಸಿರುತ್ತಾರೆ.


ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಮತ್ತು ಎ. ಶ್ಯಾಮರಾವ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎ. ರಾಘವೇಂದ್ರ ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಾಧಿಪತಿಗಳು ಮತ್ತು ಉಪಾಧ್ಯಕ್ಷರಾದ ಡಾ. ಎ ಶ್ರೀನಿವಾಸ ರಾವ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀನಿವಾಸ ಮಯ್ಯ ಡಿ., ವಿಭಾಗದ ಮುಖ್ಯಸ್ಥರು ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿರುತ್ತಾರೆ.


ವಿದ್ಯಾರ್ಥಿಗಳ ಈ ಸಾಧನೆಗೆ ಪೂರಕವಾದ ವಾತಾವರಣವನ್ನು, ಉದ್ಯೋಗ ಮತ್ತು ಉದ್ಯಮಶೀಲತೆಗೆ ಸಂಬಂಧಿಸಿದಂತೆ ಪ್ರಾರಂಭದಿಂದಲೇ ತರಬೇತಿಯನ್ನು ನಮ್ಮ ಸಂಸ್ಥೆ ಸದಾ ವಿದ್ಯಾರ್ಥಿಗಳಿಗೆ ಒದಗಿಸುತ್ತಾ ಬಂದಿದ್ದು ಅವರನ್ನು ಉತ್ತಮ ಇಂಜಿನಿಯರ್ ಆಗಿ ಸಮಾಜಕ್ಕೆ ಕೊಡ ಮಾಡಲು ಸದಾ ಶ್ರಮಿಸುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
To Top