ಉಡುಪಿ: ಶಾಸಕ ಕೆ ರಘುಪತಿ ಭಟ್ಟರ ಮಾತೃಶ್ರೀ ಸರಸ್ವತಿ ಬಾರಿತ್ತಾಯರ ಸಂಕಲ್ಪದಂತೆ ಅವರ ಮನೆಮಂದಿಯ ಸೇವೆಯಾಗಿ ಕರಂಬಳ್ಳಿ ಶ್ರೀ ವೇಂಕಟರಮಣ ದೇವರಿಗೆ ರಜತದ್ವಾರ ಸಮರ್ಪಣೆಯು ಶನಿವಾರ ನೆರವೇರಿತು.
ಪಾಡಿಗಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ದೇವರಿಗೆ ನವಕ ಪ್ರಧಾನ ಹೋಮ ಸಹಿತ ಕಲಶಾಭಿಷೇಕ ಮಹಾಪೂಜೆ ನೆರವೇರಿಸಿ ಸುಮಾರು 6 ಕೆಜಿ ಬೆಳ್ಳಿಯಲ್ಲಿ ತಯಾರಿಸಲಾದ ದ್ವಾರವನ್ನು ದೇವರಿಗೆ ಅರ್ಪಿಸಿ ಜಗದೊಳಿತಿಗೆ ಪ್ರಾರ್ಥಿಸಲಾಯಿತು.
ಅರ್ಚಕರಾದ ಗೋವಿಂದ ಐತಾಳ್, ದಿವಾಕರ ಐತಾಳ್, ಪ್ರಸನ್ನ ಆಚಾರ್ಯ, ವರಮೇಶ ಐತಾಳ್, ಶಾಸಕ ಭಟ್ ಸಹೋದರರು ದೇವಳದ ಆಡಳಿತ ಮಂಡಳಿ ಸದಸ್ಯರು ನೂರಾರು ಮಂದಿ ಭಕ್ತರು ಉಪಸ್ಥಿತರಿದ್ದರು. ಉಡುಪಿಯ ಭಾರತೀಶ ಜ್ಯುವೆಲ್ಲರ್ಸ್ ನವರು ದ್ವಾರ ನಿರ್ಮಿಸಿ ಕೊಟ್ಟಿರುತ್ತಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ