ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

Upayuktha
0

ದೇಶವನ್ನು ಹೀಯಾಳಿಸುವುದು ನೈತಿಕ ಅಧಃಪತನದ ಸಂಕೇತ: ಆದರ್ಶ ಗೋಖಲೆ


ಪುತ್ತೂರು: ವಿದ್ಯೆ ವಿನಯವಂತಿಕೆಯನ್ನು ಕೊಡಬೇಕು. ವಿನಯವಂತಿಕೆ ಇಲ್ಲದ ವಿದ್ಯೆಗೆ ಮೌಲ್ಯವಿಲ್ಲ. ನಮ್ಮ ದೇಶದಲ್ಲಿ ಜನಿಸಿ, ಇಲ್ಲಿನ ಋಣದೊಂದಿಗೆ ಬೆಳೆದು, ಬೇರೆ ಬೇರೆ ಕಾರಣಗಳಿಗೆ ವಿದೇಶಕ್ಕೆ ತೆರಳಿದ ನಂತರ ನಮ್ಮ ದೇಶವನ್ನೇ ಹೀಯಾಳಿಸುವುದು ನೈತಿಕ ಅಧಃಪತನವನ್ನು ತೋರಿಸುತ್ತದೆ. ದೇಶದ ಹಿರಿಮೆಯನ್ನು ಅರ್ಥ ಮಾಡಿಕೊಂಡು, ದೇಶದ ಘನತೆ ಹೆಚ್ಚಿಸುವಂತಹ ನಡೆನುಡಿಗಳೊಂದಿಗೆ ಬದುಕಿ ತೋರಿಸಬೇಕು ಎಂದು ವಾಗ್ಮಿ ಆದರ್ಶ ಗೋಖಲೆ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಹಾಗೂ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ದಿನಾಚರಣೆಯಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.


ಯಶಸ್ಸು ಅನ್ನುವುದು ಆಮದು ಮಾಡಿಕೊಳ್ಳುವ ವಸ್ತುವಲ್ಲ. ನಮ್ಮೊಳಗೆ ಪೂರ್ವಸಿದ್ಧತೆ ಮಾಡಿಕೊಂಡು ಅಚಲವಾದ ನಂಬಿಕೆಯೊಂದಿಗೆ ಮುಂದುವರೆದಾಗ ಮಾತ್ರ ಯಶಸ್ಸು ನಮ್ಮದಾಗುವುದಕ್ಕೆ ಸಾಧ್ಯ. ಮನಸಿನ ಆವರಣದೊಳಗೆ ಸಾಧಿಸಬೇಕಾದದ್ದನ್ನು ಕಲ್ಪಿಸಿಕೊಂಡು ಅದರ ಸಾಕಾರಕ್ಕೆ ಬೇಕಾದ ಪೂರ್ವಭಾವಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಆಗ ಎಲ್ಲವೂ ಸುಲಭ ಸಾಧ್ಯವೆನಿಸುತ್ತದೆ. ಅಂಕ, ರ‍್ಯಾಂಕ್‌ಗಳೆಲ್ಲ ಕೆಲವು ದಿನಗಳವರೆಗೆ ಮಾತ್ರ ಮುಖ್ಯವೆನಿಸುತ್ತದೆ. ಆದರೆ ಸಂಸ್ಕಾರ, ದೇಶಪ್ರೇಮಗಳು ಶಾಶ್ವತವಾಗಿ ಬೇಕಾಗುತ್ತವೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಇಂದು ವಿದೇಶೀಯರು ನಮ್ಮ ದೇಸೀಯ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದಾರೆ. ನಮ್ಮ ದೇಶದಲ್ಲಿ, ನಮ್ಮ ಆಚಾರ ವಿಚಾರಗಳಲ್ಲಿ ಅಪಾರ ಮೌಲ್ಯಗಳಿವೆ ಎಂಬುದನ್ನು ಯುವಸಮೂಹ ಅರಿತುಕೊಳ್ಳಬೇಕಿದೆ. ದೇಶವನ್ನು ಪ್ರೀತಿಸುವ, ದೇಶವನ್ನು ಗೌರವಿಸುವ ಯುವ ಸಮುದಾಯವಾಗಿ ನಾವು ಬೆಳೆಯಬೇಕಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಸದಸ್ಯ ಸುರೇಶ್ ಶೆಟ್ಟಿ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ್ ಕಮ್ಮಜೆ, ಪ್ರಾಂಶುಪಾಲ ಶಂಕರನಾರಾಯಣ ಭಟ್, ಉಪಪ್ರಾಂಶುಪಾಲ ರಾಮಚಂದ್ರ ಭಟ್, ಕ್ಯಾಂಪಸ್ ನಿರ್ದೇಶಕ ಭಾಸ್ಕರ ಶೆಟ್ಟಿ, ವಿದ್ಯಾರ್ಥಿ ನಾಯಕ ಮೋಹಿತ್ ಕೆ.ಎಸ್, ಉಪನ್ಯಾಸಕರು, ಉಪನ್ಯಾಸಕೇತರ ವೃಂದ, ವಸತಿನಿಲಯ ಪಾಲಕರು ಹಾಜರಿದ್ದರು. ವಿದ್ಯಾರ್ಥಿ ನಾಯಕಿ ಪ್ರೀತಲ್ ದಯಾನಂದ್ ಹಾಗೂ ವಿದ್ಯಾರ್ಥಿ ಕೌಶಿಕ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.


ವಿದ್ಯಾರ್ಥಿನಿ ಪ್ರಣಮ್ಯ ಬಿ ಪ್ರಾರ್ಥಿಸಿದರು. ಉಪನ್ಯಾಸಕ ತಿಲೋಶ್ ಕುಮಾರ್ ಸಿ ಸ್ವಾಗತಿಸಿದರು. ಉಪನ್ಯಾಸಕಿ ಶ್ವೇತಾ ಕೆ.ವಿ ವಂದಿಸಿದರು. ಉಪನ್ಯಾಸಕಿ ವಿನುತಾ ಕಾರ್ಯಕ್ರಮ ನಿರ್ವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top