ತ್ರಿಚಕ್ರೇ ದೇಶ ಸಂಚಾರಿ..!

Upayuktha
0



ಉಡುಪಿ: ಸಾಮಾನ್ಯವಾಗಿ ಪಾದದಲ್ಲಿ ಮೂರು ಚಕ್ರದ ಚಿಹ್ನೆ ಇದ್ದರೆ ಆತ ನಿರಂತರ ಲೋಕ ಸಂಚಾರದ ಅವಕಾಶ ಪಡೀತಾರೆ ಅನ್ನೋ ಮಾತಿದೆ. ತ್ರಿಚಕ್ರ ರಿಕ್ಷಾದಲ್ಲಿ ಸಂಚರಿಸುವ ಅಥವಾ ರಿಕ್ಷಾ ಚಾಲಕರಾಗಿ ವೃತ್ತಿ ನಡೆಸುವವರಿಗೂ ತಮಾಷೆಗೆ ಈ ಮಾತನ್ನು ಬಳಸುವುದೂ ಇದೆ. 


ಪ್ರಸ್ತುತ, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಮ್ಮ ಗುರುಗಳಾದ ವಿಶ್ವೇಶತೀರ್ಥ ಶ್ರೀಪಾದರಂತೆ ಒಂದಿಲ್ಲೊಂದು ಧಾರ್ಮಿಕ ಸಾಮಾಜಿಕ ಉದ್ದೇಶಗಳಿಗಾಗಿ ನಿರಂತರ ದೇಶ ಸಂಚಾರದಲ್ಲಿ ನಿರತರಾಗಿದ್ದಾರೆ.


ಶ್ರೀಗಳು ಶುಕ್ರವಾರ ತೀರಾ ಅಚಾನಕ್ ಆಗಿ ರಿಕ್ಷಾ ಏರಿ ತ್ರಿಚಕ್ರೇ ಲೋಕ ಸಂಚಾರಿ ಎಂಬ ಮಾತಿಗೆ ಅನ್ವರ್ಥರಂತೆ ಕಂಡರು ಶ್ರೀಗಳು..!!!


ಉಡುಪಿಯ ಪ್ರಸಿದ್ಧ ಕಡಿಯಾಳಿ ದೇವಳಕ್ಕೆ ನೂತನ ಧ್ವಜಮರವನ್ನು ಹೊತ್ತು ತರುವ ಮೆರವಣಿಗೆಯಲ್ಲಿ ಭಾಗವಹಿಸಿದ ಶ್ರೀಗಳಿಗೆ ಮುಂದಿನ ಕಾರ್ಯಕ್ರಮಕ್ಲೆ ತೆರಳುವ ಅವಸರವಿತ್ತು. ಆದ್ರೆ ಮೆರವಣಿಗೆಯ ಕಾರಣಕ್ಕೆ ರಸ್ತೆಯುದ್ದಕ್ಕೂ ವಾಹನಗಳು ಸಾಲು ಸಾಲು ಬರುತ್ತಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು. ಆದ್ದರಿಂದ ಶ್ರೀಗಳಿಗೆ ತಮ್ಮ ವಾಹನದಲ್ಲಿ ತೆರಳಿದ್ರೆ ವಿಳಂಬ ಆಗೋದು ಗ್ಯಾರಂಟಿ ಅನ್ನೋದು ಮನದಟ್ಟಾಗಿದೆ. ಹೀಗೆಂದವರೇ ಥಟ್ಟನೆ ಅದೇ ದಾರಿಯಲ್ಲಿ ಬಂದ ರಿಕ್ಷಾವನ್ನು ನಿಲ್ಲಿಸಿ ತಾವು ಅದರಲ್ಲಿ ಕುಳಿತು ಒಳಮಾರ್ಗವಾಗಿ ಉಡುಪಿ ಅನಂತೇಶ್ವರ ದೇವಸ್ಥಾನದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ತೆರಳಿದರು.‌ ಅಲ್ಲಿ ನೆರೆದಿದ್ದ ನೂರಾರು ಮಂದಿ ಚಕಿತರಾಗಿ ಈ ದೃಶ್ಯವನ್ನು ಕಂಡರು.

- ಜಿ. ವಾಸುದೇವ ಭಟ್ ಪೆರಂಪಳ್ಳಿ

hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top