ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ಸಭೆಯು ಮಂಗಳೂರಿನ ಭಾರತೀ ಕಾಲೇಜಿನಲ್ಲಿನ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಾಲಯದಲ್ಲಿ ಶುಕ್ರವಾರ (ಮಾ.4) ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಂಜುನಾಥ ರೇವಣಕರ್ ಅವರು ವಹಿಸಿದ್ದರು.
ನೂತನ ಪದಾಧಿಕಾರಿಗಳ ವಿವರವು ಹೀಗಿದೆ: ಡಾ. ಮಂಜುನಾಥ ರೇವಣಕರ್ ಅಧ್ಯಕ್ಷರು. ಡಾ. ಮುರಳಿ ಮೋಹನ ಚೂಂತಾರ್ ಹಾಗೂ ಗಣೇಶ್ ಪ್ರಸಾದ್ ಜೀಜೀ ಗೌರವ ಕಾರ್ಯದರ್ಶಿಗಳು; ಸುಬ್ರಾಯ ಭಟ್ ಕೋಶಾಧಿಕಾರಿ; ಡಾ. ಮೀನಾಕ್ಷಿ ರಾಮಚಂದ್ರ ಹಾಗೂ ಶ್ರೀಮತಿ ಸುಖಲಾಕ್ಷಿ ಸುವರ್ಣ ಮಹಿಳಾ ಸಾಹಿತಿ ಪ್ರತಿನಿಧಿಗಳು ಹಾಗೂ ಇತರ ಪದಾಧಿಕಾರಿಗಳಾಗಿ, ಮುದ್ದು ಮೂಡುಬೆಳ್ಳೆ, ರಘು ಇಡ್ಕಿದು, ವಿದ್ವಾನ್ ಚಂದ್ರಶೇಖರ ನಾವಡ, ಕ್ರಷ್ಣಪ್ಪ ನಾಯ್ಕ್, ಶಶಿರಾಜ್ ಕಾವೂರ್, ಕೃಷ್ಣ ಭಟ್ ಸುಣ್ಣಂಗುಳಿ, ಬೆನೆಟ್ ಅಮ್ಮನ್ನ, ತಿರುಮಲೇಶ್ವರ ಭಟ್, ಮುರಳೀಧರ ಭಾರದ್ವಾಜ್, ಉದಯ ಕುಮಾರ್ ಸಿ.ಆರ್., ಆಯ್ಕೆಯಾದರು.
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸದಸ್ಯೆ ಶ್ರೀಮತಿ ಅರುಣಾ ನಾಗರಾಜ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ