ಮಾನವ ಸಂಕಲ್ಪ ಬಲವಾದಾಗ ಧರ್ಮ ಕಾರ್ಯಸಿದ್ದಿ; ಸುಬ್ರಹ್ಮಣ್ಯ ಶ್ರೀಗಳು

Upayuktha
0

ಕುಲಶೇಖರ ವೀರನಾರಾಯಣ ದೇವಸ್ಥಾನದಲ್ಲಿ ನಿಧಿ ಕುಂಭ, ಷಡಾಧಾರ ಪ್ರತಿಷ್ಠೆ,


ಮಂಗಳೂರು: ನಮ್ಮನ್ನು ಆವರಿಸಿರುವ ದುರಹಂಕಾರ ದೂರವಾದಾಗ ಮನಕುಲದ ಸಂಕಲ್ಪ ಪೂರ್ತಿಯಾಗುತ್ತದೆ, ಕ್ಷೇತ್ರ ಪುನರ್ ನಿರ್ಮಾಣ ಗೊಳ್ಳಲು ಸಾತ್ವಿಕ ಶಕ್ತಿ ವೃದ್ಧಿಗೊಳ್ಳಬೇಕು. ಸಾತ್ವಿಕ ಶಕ್ತಿ ಕ್ಷೇತ್ರಕ್ಕೆ ಆಧಾರವಾಗಬೇಕು. ಆಗ ಮಾತ್ರ ತಾಮಸ ಶಕ್ತಿ ದೂರಗೊಳ್ಳುವುದು. ಅದಕ್ಕಾಗಿ ನಿಧಿ ಕುಂಭ, ಷಡಾಧಾರ ಪ್ರತಿಷ್ಠೆ ನೆರವೇರಿದೆ. ಸುಸಾಂಗವಾಗಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶ ನಡೆಯಲಿ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ನುಡಿದರು.


ಮಾರ್ಚ್ 27ರಂದು ಮಂಗಳೂರಿನ ಇತಿಹಾಸ ಪ್ರಸಿದ್ದ ಕ್ಷೇತ್ರವಾಗಿರುವ ಕುಲಶೇಖರ  ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಬಹುಕೋಟಿ ವೆಚ್ಚದಲ್ಲಿ ಜೀರ್ಣೋದ್ದಾರ ಕಾರ್ಯಕ್ರಮ ನಡೆಯುತ್ತಿದ್ದು ಇದರ ಅಂಗವಾಗಿ ಶ್ರೀ ವೀರನಾರಾಯಣ ದೇವರ ನೂತನ ಶಿಲಾಮಯ ಗರ್ಭಗೃಹದ ನಿಧಿ ಕುಂಭ ಸ್ಥಾಪನೆ ಹಾಗೂ ಷಡಾಧಾರ  ಪ್ರತಿಷ್ಠೆ ನೆರವೇರಿಸಿ ಆಶೀರ್ವಚನದ ಮಾತುಗಳನ್ನಾಡಿದರು.  


ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುತ್ತಾ ಹಿಂದೂ ಸಮಾಜ  ಒಗ್ಗಟ್ಟಾಗಿ ಹಿಂದಿನ ಸಂಪ್ರದಾಯವನ್ನು ಉಳಿಸಬೇಕಾಗಿದೆ. ಪ್ರತಿಯೊಬ್ಬನ ಆತ್ಮದಲ್ಲೂ ವೀರನಾರಾಯಣ ದೇವರು ನೆಲೆಯಾಗಿ ಬ್ರಹ್ಮಕಲಶ ಸಂಭ್ರಮದಿಂದ ಭಕ್ತಿಯಿಂದ ನಡೆಯುವಂತಾಗಲಿ ಎಂದು ಆಶೀರ್ವದಿಸಿದರು.


ವೇದಿಕೆಯಲ್ಲಿ ನಡುಬೊಟ್ಟು ರೌದ್ರನಾಥೇಶ್ವರ ದೇವಸ್ಥಾನ ಧರ್ಮದರ್ಶಿ ರವಿ ಎನ್. ನಡುಬೊಟ್ಟು, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಪುರುಷೋತ್ತಮ ಕುಲಾಲ್ ಕಲ್ಬಾವಿ, ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲ ರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ದಾಮೋಧರ್ ಎ. ಗೌರವಾಧ್ಯಕ್ಷ ಎಸ್.ಆರ್ ಬಂಜನ್ ಪುಣೆ. ರಮಾನಂದ ಬಂಗೇರ ನಾಸಿಕ್, ಟ್ರಸ್ಟ್ ನ ಅಧ್ಯಕ್ಷರು ಪ್ರೇಮಾನಂದ ಕುಲಾಲ್, ಸೇವಾಸಮಿತಿ ಅಧ್ಯಕ್ಷರು ಸುಂದರ್ ಕುಲಾಲ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಮನೋಜ್ ರವರು ಉಪಸ್ಥಿತರಿದ್ದರು.


ಕ್ಷೇತ್ರದ ತಂತ್ರಿಗಳಾದ ಶ್ರೀ ಅನಂತ ಉಪಾಧ್ಯಾಯ ವಾಮಂಜೂರು ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು, ರಮೇಶ್ ಕಾರಂತ ಬೆದ್ರಡ್ಕ ಇವರ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕ್ಷೇತ್ರದ ಜೀರ್ಣೋದ್ದಾರ ಕಾರ್ಯಕ್ರಮಗಳು ನಡೆಯುತ್ತಾ ಇವೆ. ಕಾರ್ಯಕ್ರಮವನ್ನು ನ್ಯಾ. ರವೀಂದ್ರ ಮುನ್ನಿಪಾಡಿ ನಿರೂಪಿಸಿ ವಂದಿಸಿದರು


ಧಾರ್ಮಿಕ ಕಾರ್ಯದಲ್ಲಿ ಗಿರಿಧರ್ ಮೂಲ್ಯ ಎಂ.ಪಿ ಬಂಗೇರ, ಸಮಾಜ ಸೇವಾ ಸಹಕಾರಿ ಬ್ಯಾಂಕ್ ಬಂಟ್ವಾಳ ಇದರ ಅಧ್ಯಕ್ಷ ಸುರೇಶ್ ಕುಲಾಲ್, ಭಾಸ್ಕರ್ ಪೆರುವಾಯಿ, ಮಹೇಶ್ ಸವಣೂರು, ಸುಂದರ ಬಂಗೇರ ಅದ್ಯಪಾಡಿ, ಚಂದಪ್ಪ ಮೂಲ್ಯ, ಯು ರಾಮ, ಉಪ್ಪಿನಂಗಡಿ, ಪೃಥ್ವಿರಾಜ್ ಎಡಪದವು, ರೂಪ ಡಿ ಬಂಗೇರ, ಅನಿಲ್ ದಾಸ್, ದೇವಪ್ಪ ಮೂಲ್ಯ ಸೋಮೇಶ್ವರ, ರುಕ್ಕಯ್ಯ ಬಂಗೇರ, ಗಿರೀಶ್ ಸಾಲ್ಯಾನ್ ಮುಂಬೈ, ರಘು ಮೂಲ್ಯ ಮುಂಬೈ, ಪುರುಷೋತ್ತಮ ಚೇಂಡ್ಲ ಬೆಂಗಳೂರು, ಡಾ ಅಣ್ಣಯ್ಯ ಕುಲಾಲ್, ನ್ಯಾಯವಾದಿ ರಾಮಪ್ರಸಾದ್ ಅಶೋಕ್ ಕೂಳೂರು, ದೇವಿಪ್ರಸಾದ್ ಬಾಲಕೃಷ್ಣ ಕುಂಜತ್ತೂರು, ಜಯಶ್ರೀ ಪ್ರಫುಲ್ಲ ದಾಸ, ಸುಕುಮಾರ್ ಬಂಟ್ವಾಳ, ಶ್ರೀನಿವಾಸ್ ಸಾಲ್ಯಾನ್ ಪಡೀಲ್, ಸುಲೋಚನ ಟೀಚರ್ ಕೊಲ್ಯ, ಜಯಶ್ರೀ ಶಿವನಾಥ್, ಬಾಬಾ ಅಲಂಕಾರ, ಸುಲೋಚನ ಕೋಡಿಕಲ್, ಹಾಗೂ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆ, ಮಹಾರಾಷ್ಟ್ರ, ಬೆಂಗಳೂರು, ಕೇರಳ, ಮತ್ತಿತರ ರಾಜ್ಯಗಳಿಂದ ಅಪಾರ ಭಕ್ತರು ಪಾಲ್ಗೊಂಡಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top