ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ವಂದನಾ ರಾಣಿಗೆ ಪ್ರಥಮ ಸ್ಥಾನ

Upayuktha
0

ಮಂಗಳೂರು: ನಗರದ ಹೆಸರಾಂತ ನೃತ್ಯ ತರಬೇತಿ ಸಂಸ್ಥೆ ಭರತಾಂಜಲಿಯ ವಿದ್ಯಾರ್ಥಿನಿಯಾಗಿರುವ ವಂದನಾ ರಾಣಿ, ಇವರು ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.


ಭರತಾಂಜಲಿ ನೃತ್ಯ ಸಂಸ್ಥೆಯ ಹಿರಿಯ ಶಿಷ್ಯೆಯರಲ್ಲಿ ಒಬ್ಬಳಾದ ವಂದನಾ ರಾಣಿ, ಇವರು ಕೆಎಸ್ಇಇಬಿ ನಡೆಸಿದ ವಿದ್ವತ್ ಅಂತಿಮ ಪರೀಕ್ಷೆಗಳನ್ನು ಪೂರ್ಣಗೊಳಿಸಿ, ದಕ್ಷಿಣ ಕನ್ನಡ ಪ್ರದೇಶದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಆಕೆಯ ಭರತನಾಟ್ಯದ ಪಯಣದಲ್ಲಿ ಹದಿನಾಲ್ಕು ವರ್ಷಗಳ ಕಾಲ ನಿರಂತರ ಪರಿಶ್ರಮ, ಕೊನೆಯಿಲ್ಲದ ಉತ್ಸಾಹ ಮತ್ತು ಸಾಟಿಯಿಲ್ಲದ ಅಭ್ಯಾಸಗಳು ಈ ಗಮನಾರ್ಹ ಸಾಧನೆಯನ್ನು ಸಾಧ್ಯವಾಗಿಸಿದೆ!


ವಂದನಾ ರಾಣಿ, ಶ್ರೀ ಕೇದಿಗೆ ವಸಂತ ರಾವ್ ಮತ್ತು ಶ್ರೀಮತಿ ರೂಪಾ ರಾಣಿ ಅವರ ಪುತ್ರಿ. ಗುರು ಶ್ರೀಮತಿ ಪ್ರತಿಮಾ ಶ್ರೀಧರ್ ಮತ್ತು ಗುರು ಶ್ರೀ ಶ್ರೀಧರ್ ಹೊಳ್ಳ, ಭರತಾಂಜಲಿ, ಮಂಗಳೂರು ಇವರ ಶಿಷ್ಯೆ. ಇವರು 2021 ರಲ್ಲಿ ವಿದ್ವತ್ ಆಂತಿಮ ಪರೀಕ್ಷೆಯಲ್ಲಿ 87% (ಡಿಸ್ಟಿಂಕ್ಷನ್) ಗಳಿಸಿದ್ದಾರೆ. ಇವರು ಭರತಾಂಜಲಿಯ ಪ್ರಮುಖ ನೃತ್ಯಗಾರರಲ್ಲಿ ಒಬ್ಬರು ಮತ್ತು ಚಿದಂಬರದಲ್ಲಿ ನಾಟ್ಯಾಂಜಲಿ ಉತ್ಸವ, ಮೈಸೂರು ದಸರಾ, ಹಂಪಿ ಉತ್ಸವ, ಆಳ್ವಾಸ್ ನುಡಿಸಿರಿ ಮುಂತಾದ ಪ್ರತಿಷ್ಠಿತ ಉತ್ಸವಗಳಲ್ಲಿ ತಮ್ಮ ಗುರುಗಳೊಂದಿಗೆ ಪ್ರದರ್ಶನ ನೀಡಿದ್ದಾರೆ.


ಕರ್ನಾಟಕ ಸಂಗೀತದಲ್ಲಿ ಹಿರಿಯ ಶ್ರೇಣಿಯನ್ನು ಪೂರ್ಣಗೊಳಿಸಿದ ಇವರು, ಗುರು ಶ್ರೀಮತಿ ಸತ್ಯವತಿ ಮುಡಂಬಡಿತ್ತಾಯ, ಮಂಗಳೂರು ಅವರಲ್ಲಿ ಒಂದು ದಶಕದ ತರಬೇತಿಯನ್ನು ಮತ್ತು ಗುರು ಶ್ರೀ ಮಧೂರು ಬಾಲಸುಬ್ರಹ್ಮಣ್ಯ, ಉಡುಪಿ ಇವರಲ್ಲಿ ಸಂಗೀತ ತರಬೇತಿಯನ್ನು ಪಡೆದಿದ್ದಾರೆ.


ವಂದನಾ ರಾಣಿ ಅನೇಕ ಗಮನಾರ್ಹವಾದ ನಿರೂಪಣೆಗಳನ್ನು ಹೊಂದಿ ಅವರು ಭರತಾಂಜಲಿಯ ಕೆಲವು ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳಿಗೆ ಹಿನ್ನೆಲೆ ಗಾಯಕಿಯಾಗಿ ಹಾಡುಗಾರಿಕೆ ಮಾಡಿದ್ದಾರೆ. ಇವರು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ (ಆಟೊನೊಮಸ್) ಶುದ್ಧ ವಿಜ್ಞಾನದಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಪ್ರಸ್ತುತ ತಮಿಳುನಾಡಿನ ಚಿದಂಬರಂನ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮಾಡುತ್ತಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top