ಯೋಗಿ ಶಪಥಗ್ರಹಣ; ಪೇಜಾವರ ಶ್ರೀ ಭಾಗಿ

Upayuktha
0

ಲಖನೌ: ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಮಾಣ ವಚನ ಸ್ವೀಕಾರದ ಬೃಹತ್ ಸಮಾರಂಭದಲ್ಲಿ ಶ್ರೀ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ವಿಶೇಷ ಆಹ್ವಾನಿತರಲ್ಲಿ ಒಬ್ಬರಾಗಿ ಪಾಲ್ಗೊಂಡರು‌. ರಾಜ್ಯದಿಂದ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಇಸ್ಕಾನ್ ನ‌ ಮಧುಪಂಡಿತ ದಾಸ್ ಕೂಡಾ ಆಗಮಿಸಿದ್ದರು


ಶ್ರೀಗಳ ಜೊತೆ ಬೆಂಗಳೂರಿನ ಉದ್ಯಮಿ ರಾಮ್ ಪ್ರಸಾದ್, ವಾಸುದೇವ ಭಟ್ ಪೆರಂಪಳ್ಳಿ, ದೆಹಲಿ ಪೇಜಾವರ ಮಠದ ಮೆನೇಜರ್ ದೇವಿಪ್ರಸಾದ್ ಭಟ್, ಕೃಷ್ಣ ಭಟ್ ಉಪಸ್ಥಿತರಿದ್ದರು.


ದೇಶಾದ್ಯಂತ ಅನೇಕ ರಾಜ್ಯಗಳಿಂದ ನೂರಾರು ಸಾಧು ಸಂತರನ್ನು ಆಮಂತ್ರಿಸಲಾಗಿದ್ದು ಅವರ ಆತಿಥ್ಯಕ್ಕಾಗಿ   ಹಿರಿಯ ಅಧಿಕಾರಿಗಳಾದ ಅವನೀಶ್ ಅವಸ್ಥಿ, ಆರ್ ಪಿ‌ ಸಿಂಗ್, ಅಶೋಕ್ ತಿವಾರಿ, ಆರ್ ಬಿ ಎಸ್ ರಾವತ್ ಮೊದಲಾದವರ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಿ ಸುವ್ಯವಸ್ಥೆಯ ಆಸ್ಥೆ ವಹಿಸಲಾಗಿತ್ತು. ಸಮಾರಂಭದಲ್ಲೂ ಮಠಾಧೀಶರು ಸ್ವಾಮೀಜಿಯವರಿಗೆ ಪ್ರತ್ಯೇಕ ಆಸನ ವ್ಯವಸ್ಥೆಗೊಳಿಸಲಾಗಿತ್ತು.    


ಉತ್ತರಪ್ರದೇಶದಲ್ಲಿ ಸಂಭ್ರಮ: ಯೋಗಿ ಮತ್ತೆ ಅಧಿಕಾರ ಸ್ವೀಕರಿಸುತ್ತಿರುವುದನ್ನು ಉತ್ತರ ಪ್ರದೇಶದ ಜನ ಸಂಭ್ರಮಿಸುತ್ತಿರುವುದು ಎಲ್ಲೆಲ್ಲೂ ಕಂಡು ಬಂತು. ರಸ್ತೆ ಇಕ್ಕೆಲಗಳಲ್ಲಿ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ನೂರಾರು ನೃತ್ಯ ತಂಡಗಳ ನೃತ್ಯ ಪ್ರದರ್ಶನ ಬ್ಯಾಂಡ್ ಇತ್ಯಾದಿ ವಾದ್ಯಗಳನ್ನು ನುಡಿಸುತ್ತಾ ಸಂಭ್ರಮಿಸುತ್ತಿದ್ದರು


ಸ್ವಾಮೀಜಿಯವರನ್ನು ಕಾಡಿದ ಟ್ರಾಫಿಕ್ ಜಾಮ್: 

ಲಕ್ನೋದಲ್ಲಿ ಶುಕ್ರವಾರ ಎಲ್ಲೆಂದರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಲಕ್ಷಾಂತರ ಜನ ಸಮಾರಂಭಕ್ಕೆ ಆಗಮಿಸಿದ್ದರಿಂದ ಮತ್ತು ಮೋದಿ ಅಮಿತ್ ಶಾ ಸೇರಿದಂತೆ ಗಣ್ಯಾತಿಗಣ್ಯರ ದಂಡೇ ಆಗಮಿಸಿದ್ದರಿಂದ ಅವರ ಬೆಂಗಾವಲು ವಾಹನಗಳ ಸರತಿ ಸಾಲೇ ಪ್ರಮುಖ ರಸ್ತೆಗಳಲ್ಲಿ  ಸೇರಿದ್ದರಿಂದ ಉಂಟಾದ ಟ್ರಾಫಿಕ್ ಜಾಮ್ ನಲ್ಲಿ ಅನೇಕರು ಸಿಲುಕಿದರು. ಸ್ಚತಃ ಪೇಜಾವರ ಶ್ರೀಗಳ ವಾಹನವೂ ಸರತಿಯಲ್ಲಿ ಮುಂದೆ ಹೋಗದ ಪರಿಸ್ಥಿತಿ ಎದುರಾದಾಗ ಶ್ರೀಗಳು ವಾಹನದಿಂದ ಇಳಿದು ಸುಮಾರು ಎರಡು ಕಿ ಮೀ ನಡೆದೇ ತೆರಳಿ ಸ್ಟೇಡಿಯಂ ತಲುಪಿದರು.‌


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top