ಮಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಕನ್ನಡ ವಿಭಾಗ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಸಹಯೋಗದಲ್ಲಿ 'ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ ವಿಶೇಷೋಪನ್ಯಾಸ ಮಾಲೆ' ಎಂಬ ಸರಣಿ ಕಾರ್ಯಕ್ರಮ ಕೆನರಾ ಕಾಲೇಜಿನಲ್ಲಿ ನಡೆಯಿತು.
ಡಾ. ವಿಶ್ವನಾಥ ಬದಿಕಾನ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದು, "ಕನ್ನಡದ ಎಲ್ಲ ಮೊದಲಿಗೆ ಕಾರಣರಾದವರು ಕುವೆಂಪು. ಅಧ್ಯಾಪಕ ಹುದ್ದೆಯಿಂದ ಕುಲಪತಿ ಹುದ್ದೆಯವರೆಗೆ ಏರಿದವರು. ಅವರ ಸಾಹಿತ್ಯ ವಿಮರ್ಶೆ ಎಂದರೆ ಜೀವನ ವಿಮರ್ಶೆ. ವಿದ್ಯಾರ್ಥಿಗಳಲ್ಲಿ ವೈಚಾರಿಕತೆಯನ್ನು ವಿಶ್ವ ಮಾನವತೆಯನ್ನು ಬೆಳೆಸುವ ಅಂಶ ಅವರ ಸಾಹಿತ್ಯಗಳಲ್ಲಿವೆ" ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಪ್ರಸ್ತಾವನೆಗೈದರು. ಶೈಲಜಾ ಪುದುಕೋಳಿ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ವಾಣಿ ಯು. ಎಸ್ ನಿರ್ವಹಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ