||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗಂಗಾಪುರ: ಸಿದ್ಧಾಂಜನೇಯಸ್ವಾಮಿಗೆ ದೃಢಕಲಶ ಸಂಪನ್ನ

ಗಂಗಾಪುರ: ಸಿದ್ಧಾಂಜನೇಯಸ್ವಾಮಿಗೆ ದೃಢಕಲಶ ಸಂಪನ್ನ


ಮಾಲೂರು: ತಾಲೂಕಿನ ಗಂಗಾಪುರದಲ್ಲಿ ಶ್ರೀರಾಮಚಂದ್ರಾಪುರಮಠ ನಡೆಸುತ್ತಿರುವ ಶ್ರೀ ರಾಘವೇಂದ್ರ ಗೋಆಶ್ರಮದ ಆವರಣದಲ್ಲಿ ಇತ್ತೀಚೆಗೆ ನವೀಕರಣಗೊಂಡು ಪುನರ್ ಪ್ರತಿಷ್ಠಾಪನೆ ಮಾಡಲ್ಪಟ್ಟ ಶ್ರೀ ಸಿದ್ಧಾಂಜನೇಯಸ್ವಾಮಿ ದೇವಸ್ಥಾನದ ದೃಢಕಲಶ ಮಹೋತ್ಸವ ವೇದಮೂರ್ತಿ ಅಮೃತೇಶ ಹಿರೇ ಗೋಕರ್ಣ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.


ಧಾರ್ಮಿಕ ಕಾರ್ಯಕ್ರಮದ ಯಜಮಾನತ್ವವನ್ನು ಸಮಿತಿ ಕಾರ್ಯದರ್ಶಿ ಶ್ರೀಕಾಂತ ಹೆಗಡೆ ದಂಪತಿಗಳು ವಹಿಸಿದ್ದರು. ಬೆಳಗ್ಗೆ ಗಣಪತಿ ಪೂಜೆಯೊಂದಿಗೆ ಆರಂಭವಾಗಿ, ಸಗೃಹಮಕ ಕಳಾವೃದ್ಧಿ ಹವನ ಪೂರ್ಣಾಹುತಿ, ಕಳಶಾಭಿಷೇಕ, ಮಹಾಪೂಜೆ, ಮಂಗಳಾರತಿ ನಡೆಯಿತು. ಆಗಮಿಸಿದ ಭಕ್ತರಿಗೆ ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗಿತ್ತು.


ಕಾರ್ಯಕ್ರಮದಲ್ಲಿ ಮಾತನಾಡಿದ ವೇದಮೂರ್ತಿ ಅಮೃತೇಶ ಹಿರೇ ಅವರು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳ ದಿವ್ಯ ಸಂಕಲ್ಪದಿಂದ ಈ ಸಿದ್ಧಾಂಜನೇಯಸ್ವಾಮಿ ಮಂದಿರವು ನಿರ್ಮಾಣವಾಗಿದೆ. ನಮ್ಮಲ್ಲೆರಿಗೂ ಅಮೃತವನ್ನು ನೀಡುವ ಗೋವುಗಳ ಮಧ್ಯೆ ಆಂಜನೇಯಸ್ವಾಮಿ ಇರುವುದು ಇಲ್ಲಿಯ ವಿಶೇಷ. ಅಂತಹ ಶ್ರೀ ಸಿದ್ಧಾಂಜನೇಯಸ್ವಾಮಿಯು ಆಚಂದ್ರಾರ್ಕವಾಗಿ ನಂಬಿ ಬಂದ ಭಕ್ತರಿಗೆ ಅನುಗ್ರಹಿಸಲಿ ಎಂದು ಆಶಿಸಿದರು.


ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಡಾ. ಶ್ಯಾಮಪ್ರಸಾದ, ಉಪಾಧ್ತಕ್ಷ ರಾಮಕೃಷ್ಣ ರಾವ್, ಕೋಶಾಧಿಕಾರಿ ರಾಮಕೃಷ್ಣ ಹೆಗಡೆ, ಗೋಆಶ್ರಮದ ವ್ಯವಸ್ಥಾಪಕ ರಾಮಚಂದ್ರ ಅಜ್ಜಕಾನ, ಉದ್ಯಮಿ ಗುರುರಾಜ ನಾಡಿಗೇರ್, ಮೊಹನಕೃಷ್ಣ, ವಂಶಿಕೃಷ್ಣ, ಕೃಷ್ಣ ಭಟ್, ಜಿ ಬಿ ಚಂದ್ರಶೇಖರ್, ಮಂಜುನಾಥ ಭಟ್ ಮತ್ತಿತರರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post