ಪಣಜಿ: ಶಂಕರ ಭಾಷ್ಯಾ ವತಿಯಿಂದ ಮಡಗಾಂವ ಹರಿಮಂದಿರದಲ್ಲಿ ಆಯೋಜಿಸಿದ್ದ ಸೌಂದರ್ಯ ಲಹರಿ ಅಭಿಯಾನದಲ್ಲಿ ಗೋವಾದ ವಿವಿಧೆಡೆ ನೆಲೆಸಿರುವ ಕರ್ನಾಟಕದ ಹವ್ಯಕ ಕುಟುಂಬದ ಮಾತೆಯರು ಸೌಂದರ್ಯ ಲಹರಿ ಪಠಣ ಮಾಡಿದರು.
ಈ ಸಂದರ್ಭದಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ಹವ್ಯಕ ಕುಟುಂಬದ ಮಾತೆಯರಿಂದ ಸೌಂದರ್ಯ ಲಹರಿ ಪಾರಾಯಣ ನಡೆಯಿತು. ಸೌಂದರ್ಯ ಲಹರಿ ಕಲಿಸಿಕೊಟ್ಟ ಮಾತೆಯರಾದ ಅಸ್ವಿನಿ ಕುಲಕರ್ಣಿ ಅವರಿಗೆ ಗುರುಕಾಣಿಕೆ ಸಮರ್ಪಿಸಲಾಯಿತು.
ಕಾರ್ಯಕ್ರಮದ ಆಯೋಜಕರಾದ ಎಂ.ಆರ್.ಹೆಗಡೆ, ಎಸ್.ಟಿ.ಭಟ್, ಶಂಕರ ಭಟ್ ತೋಟಗೇರಿ, ಉಪಸ್ಥಿತರಿದ್ದರು. ಹರಿಮಂದಿರದ ಅರ್ಚಕರಾದ ಮಹೇಶ್ ಯಲ್ಲಾರಗದ್ದೆ ಸೇರಿದಂತೆ ಗೋವಾದ ವಿವಿಧೆಡೆ ನೆಲೆಸಿರುವ ದೇವಸ್ಥಾನಗಳ ಅರ್ಚಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ