ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ 2021ನೇ ಸಾಲಿನ ಗೌರವ ಪ್ರಶಸ್ತಿ, ಪುಸ್ತಕ ಪುರಸ್ಕಾರಗಳನ್ನು ಪ್ರಕಟಿಸಿದೆ. ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ ನಾಗೇಶ್ ಅಣ್ವೇಕರ್ ಹಾಗೂ ಕೊಂಕಣಿ ಕಲೆ ಪ್ರಶಸ್ತಿಗೆ ದಿನೆಶ್ ಪ್ರಭು ಕಲ್ಲೊಟ್ಟೆ ಅವರನ್ನು ಅಯ್ಕೆ ಮಾಡಲಾಗಿದೆ. ಮಾಧವ ಖಾರ್ವಿ ಅವರಿಗೆ ಕೊಂಕಣಿ ಜಾನಪದ ಪ್ರಶಸ್ತಿ, ಫಾದರ್ ಜೊವಿನ್ ವಿಶ್ವಾಸ್ ಸಿಕ್ವೇರಾ ಅವರಿಗೆ ಕೊಂಕಣಿ ಕವನ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.
ಕೊಂಕಣಿ ಸಣ್ಣ ಕತೆಗಳು ಪುಸ್ತಕ ಬಹುಮಾನಕ್ಕೆ ಗೋಪಾಲಕೃಷ್ಣ ಪೈ ಅವರ ಲವ್‌ಲೆಟರ್ಸ್ ವಾಜ್ಜಿತಾಲೊ ಮ್ಹಾಂತಾರೊ ಸಂಕಲನವನ್ನು ಆಯ್ಕೆ ಮಾಡಲಾಗಿದೆ. ಎಚ್ಚೆಮ್ ಪೆರ್ನಾಲ್ ಅವರ 'ರುಪಾಂ ಆನಿ ರೂಪಕಾಂ' ಕೊಂಕಣಿ ಲೇಖನಗಳ ಸಂಕಲನ ಕೃತಿಯೂ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ.