ತೋಟ ಬೆಂಗ್ರೆ: ಶಾಸಕ ಕಾಮತ್ ಅವರಿಂದ ಹೈಮಾಸ್ಟ್‌ ಲೈಟ್‌, ಸಿಸಿಟಿವಿ ಸೌಲಭ್ಯ ಉದ್ಘಾಟನೆ

Upayuktha
0


ಮಂಗಳೂರು: ಮಹಾನಗರ ಪಾಲಿಕೆಯ ತೋಟ ಬೆಂಗ್ರೆಯಲ್ಲಿ ಹೈಮಾಸ್ಟ್ ಲೈಟ್ ಹಾಗೂ ಸಿಸಿಟಿವಿ ಕ್ಯಾಮರಾ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು. 


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗ್ರೆ ಭಾಗದ ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಫೆರಿ ಮೂಲಕ ರಾತ್ರಿ ಬೆಂಗ್ರೆ ತೋಟ ಬೆಂಗ್ರೆಗೆ ಬರುವವರ ಸಮಸ್ಯೆಯನ್ನು ಪರಿಗಣಿಸಿ ಪಾಲಿಕೆಯ ವತಿಯಿಂದ 2 ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು. 


ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ಕಾರ್ಪೋರೇಟರ್ ಮೀರಾ ಕರ್ಕೇರ, ಮುಖಂಡರಾದ ಸುರೇಂದ್ರ ಪಾಂಗಲ್, ಲೋಕೇಶ್ ಸುವರ್ಣ, ಹೇಮಚಂದ್ರ ಸಾಲಿಯಾನ್, ಗಂಗಾಧರ ಸಾಲಿಯಾನ್, ಮೀರಾ ಕರ್ಕೇರ, ಲತೀಶ್ ಪುತ್ರನ್, ಮಹೇಶ್ ವಿ.ಕೆ, ನಾಗರಾಜ್ ಸುವರ್ಣ, ಕೇಶವ ಗುರಿಕಾರ, ಧನಂಜಯ ಪುತ್ರನ್, ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
To Top