ಸೌಗಂಧಿಕಾದಲ್ಲಿ ಅಂದವಾಗಿ ಮೂಡಿಬಂದ ಚಿತ್ರಕಲಾ ಪ್ರದರ್ಶನ

Upayuktha
0

ಪುತ್ತೂರು: ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಸೌಗಂಧಿಕಾ ದಲ್ಲಿ ಮಾರ್ಚ್ 6ರಂದು ಸಂಜೆ ಚಿತ್ರಕಲಾ ಪ್ರದರ್ಶನದ ಉದ್ಘಾಟನೆ ಮತ್ತು "ಸಮರ ಸೌಗಂಧಿಕಾ "ಯಕ್ಷಗಾನ ತಾಳಮದ್ದಲೆ ಧೀಶಕ್ತಿ ಯಕ್ಷ ಬಳಗ ಪುತ್ತೂರು ಇವರಿಂದ ನಡೆಯಿತು.


ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಅನನ್ಯ ಪ್ರಾರ್ಥನೆಯನ್ನು ಹಾಡುತ್ತಿದ್ದಂತೆಯೇ ಕುಮಾರಿ ಅದಿತಿ ನೂಲಿನಿಂದ ಗಣೇಶನ ಚಿತ್ರವನ್ನು ರಚಿಸಿದರು.


ನಂತರ ರಾಜೇಶ್ವರಿ ಮಯ್ಯರವರು ಸ್ತ್ರೀಯರ ಸಾಧನೆಗಳ ಕುರಿತು ರಚಿಸಿರುವ ಪ್ರಬಂಧವನ್ನು ವಾಚಿಸಿದರು. ಅತಿಥಿಗಳ ಮತ್ತು ಕಲಾವಿದರ ಸಾಧನೆಯನ್ನು ಪರಿಚಯಿಸಿದವರು ಶ್ರೀಮತಿ ವಿನಿತಾ ಶೆಟ್ಟಿ ಮಾಣಿ ಮತ್ತು ಶ್ರೀಮತಿ ಅನ್ನಪೂರ್ಣ ರಾವ್ ಶೇವಿರೆ, ಶ್ರೀಮತಿ ಸೀಮಾ ಶರ್ಮಾ ಪುತ್ತೂರು, ಚಿತ್ರಕಲಾ ಪ್ರದರ್ಶನವನ್ನು ಹಿರಿಯ ಚಿತ್ರ ಕಲಾವಿದೆ ಶ್ರೀಮತಿ ನಳಿನಿ ಕಜೆ ಶ್ರೀಮತಿ ಉಷಾ ರಮೇಶ್ ಮತ್ತು ಶ್ರೀಮತಿ ಪದ್ಮ ಕೆ ಆರ್ ಆಚಾರ್ಯ ಇವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.


ನಂತರ ಇತ್ತೀಚಿಗೆ ನಮ್ಮನ್ನಗಲಿದ ಹಿರಿಯ ಗಾಯಕಿ ಗಾನಕೋಗಿಲೆ ಲತಾಮಂಗೇಶ್ಕರ್ ರವರಿಗೂ ಚೆಂಬೆಳಕಿನ ಕವಿ ಚೆನ್ನವೀರ ಕಣವಿಯವರಿಗೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.


ಲತಾ ಮಂಗೇಶ್ಕರ್ ರವರ ಹಾಡುಗಳನ್ನು ಮೆಲುಕು ಹಾಕುತ್ತಾ ನೆನಪಿನಂಗಳದಿಂದ ಬರಹವೊಂದನ್ನು ಆಪ್ತವಾಗಿ ಸಿದ್ಧಪಡಿಸಿ ಕೊಂಡವರು ಶ್ರೀಮತಿ ಗೀತಾ ವಸಂತ ನಾಯಕ್. ಬೆಳಕಿನ ಕವಿ ಚೆನ್ನವೀರ ಕಣವಿಯವರಿಗೆ ನುಡಿನಮನವನ್ನ ಬರಹದ ಮೂಲಕ ರಚಿಸಿದವರು ಗೆಳೆಯ ಧನಂಜಯ ಮೂಡಬಿದ್ರೆ ನುಡಿನಮನದ ಬಳಿಕ ಶ್ರೀಮತಿ ನಳಿನಿ ಕಜೆಯವರು ಬಾಲ್ಯಕಾಲದ ನೆನಪು ಚಿತ್ರಕಲೆಯ ರಚನೆಯ ಕುರಿತು ಕಲಾವಿದರೊಂದಿಗೆ ಸಂವಾದ ನಡೆಸಿದರು.


ನಂತರ ಧೀಃಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಬಳಗದವರಿಂದ ತಾಳಮದ್ದಲೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಸೌಗಂಧಿಕಾ ಬಳಗದ ಸದಸ್ಯರು ಆಪ್ತರು ಮಂಗಳೂರಿನಿಂದ ಆಗಮಿಸಿದ್ದ ಕಲಾವಿದರು ಪಾಲ್ಗೊಂಡಿದ್ದರು. ಅತಿಥಿಗಳು ಮತ್ತು ಕಲಾವಿದರು ಸೌಗಂಧಿಕದಲ್ಲಿ ಸಿದ್ಧಪಡಿಸಿದ ಹಣ್ಣಿನ ಬಟ್ಟಲಿನ ಜೊತೆಗೆ  ಸುಹಾಸ್ ಮರಿಕೆಯವರು ಸಿದ್ದಪಡಿಸಿ ವಿತರಿಸುವ ಸಾವಯವ ಐಸ್ಕ್ರೀಮನ್ನು ಸವಿ ಸಂಜೆಯಲ್ಲಿ ಸವಿದರು.


ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಶೋಭಾ ಮಾಧವರು ನಿರ್ವಹಣೆ ಮಾಡಿದರೆ ಮಾಧವ ಕಿರಣ ಮಯ್ಯ ಪ್ರಸನ್ನ ಐವರ್ನಾಡು ಗೀತಾಂಜಲಿ, ಪೃಥ್ವಿ, ವಿದ್ಯಾ, ರಾಜೇಶ್ ಕೃಷ್ಣಪ್ರಸಾದ್ ಶರ್ಮ, ಪೂರ್ಣಿಮಾ ಸುಧಾಕರ್ ಎಂಜಿ ಕಜೆ ವಿನಾಯಕ ನಾಯಕ್, ಅರವಿಂದ ಕುಡ್ಲ, ಸಹಕರಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top