ಮಂಗಳೂರು ವಿವಿ ಕಾಲೇಜ್ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ - ಆಳ್ವಾಸ್ ಗೆ 18ನೇ ಬಾರಿ ಸಮಗ್ರ ಪ್ರಶಸ್ತಿ

Upayuktha
0

ಮೂಡುಬಿದಿರೆ: ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾರ್ಚ್ 11 ಮತ್ತು 12ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರಕಾಲೇಜು ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಆಳ್ವಾಸ್ ಮಹಿಳಾ ತಂಡ ಸತತ 18ನೇ ವರ್ಷ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.


ಕ್ವಾಟರ್ ಫೈನಲ್ ಪಂದ್ಯದಲ್ಲಿ ಆಳ್ವಾಸ್ ತಂಡ ಪುತ್ತೂರಿನ ವಿವೇಕಾನಂದ ಕಾಲೇಜು ತಂಡವನ್ನು 35-8 ಹಾಗೂ 35-6 ನೇರ ಸೆಟ್ ಗಳಿಂದ ಹಾಗೂ ಸೆಮಿಫೈನಲ್ ಪಂದ್ಯದಲ್ಲಿ ಆಳ್ವಾಸ್ ತಂಡ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ತಂಡವನ್ನು 35-12 ಹಾಗೂ 35-15 ನೇರ ಸೆಟ್ಗಳಿಂದ ಸೋಲಿಸಿ ಹಂತವನ್ನು ತಲುಪಿತು.


ಫೈನಲ್ ಪಂದ್ಯದಲ್ಲಿ ಆಳ್ವಾಸ್ ತಂಡ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ತಂಡವನ್ನು 35-5 ಹಾಗೂ 35-13 ನೇರ ಸೆಟ್ ಗಳಿಂದ ಸೋಲಿಸಿ ಸತತ 18ನೇ ಬಾರಿ ಫ್ಯಾಬಿಯನ್ ಖುಲಾಸೊ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿತ್ತು.


ಆಳ್ವಾಸ್ ಕಾಲೇಜಿನ ಜಯಲಕ್ಷ್ಮಿ ಕೂಟದ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top