ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಯ ನಾಲ್ಕು ವಿದ್ಯಾರ್ಥಿಗಳು ತೇರ್ಗಡೆ

Upayuktha
0

 

ಪುತ್ತೂರು: ಡಿಸೆಂಬರ್ 2021 ರಲ್ಲಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (Institute of Chartered accountant of India) ನಡೆಸಿದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ವಿವೇಕಾನಂದ ಮಹಾವಿದ್ಯಾಲಯದ ದ್ವಿತೀಯ ಬಿಕಾಂ ವಿದ್ಯಾರ್ಥಿಗಳಾದ ಪ್ರದ್ಯೋತ್‌ ಕುಮಾರ್ ಬಿ, ವಿಕ್ಯಾತ್ ಶೆಟ್ಟಿ, ಗ್ರೀಷ್ಮ ಆಳ್ವ ಮತ್ತು ತೃತೀಯ ಬಿಕಾಂ ವಿದ್ಯಾರ್ಥಿನಿ ಸೌಮ್ಯ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿರುತ್ತಾರೆ. ಇವರು ವಿವೇಕಾನಂದ ವಿದ್ಯಾಸಂಸ್ಥೆಯ VICAS (Vivekananda Institute For CA Studies) ನಿಂದ ಕೊಡಮಾಡುವ ತರಬೇತಿಯನ್ನು ಪಡೆದಿರುತ್ತಾರೆ.


ಸಿಎ ತರಬೇತಿಗಾಗಿ ಮಹಾನಗರಗಳತ್ತ ವಿದ್ಯಾರ್ಥಿಗಳು ಮುಖ ಮಾಡುವ ಈ ಹೊತ್ತಿನಲ್ಲಿಗ್ರಾಮೀಣ ವಿದ್ಯಾರ್ಥಿಗಳ ಸಿಎ ಕನಸನ್ನು ನನಸು ಮಾಡುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ, ಅದರಲ್ಲೂ ಪುತ್ತೂರಿನಲ್ಲಿರುವ ಏಕೈಕ ಕೋಚಿಂಗ್ ಸೆಂಟರ್‌ ಇದಾಗಿದೆ. ಬೋಧನೆ ಮತ್ತು ಕಲಿಕೆಯನ್ನು ಆಧಾರಿತ ಶಿಕ್ಷಣದ ಜೊತೆಗೆ, ಸಿಎ ಸಂಸ್ಥೆಯಲ್ಲಿಅರ್ಹ ವಿದ್ಯಾರ್ಥಿಗಳಿಗೆ ಆನ್‌ಲೈನ್ ನೋಂದಣಿಗೆ ನೆರವನ್ನು ಕೂಡ ನೀಡಲಾಗುತ್ತಿದೆ. ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುತ್ತಿದೆ.


ಇವರಿಗೆ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top