ಪರಿಚಯ: ಯಕ್ಷ ಕುವರಿ ನಿಹಾರಿಕಾ ಕೆ ಭಟ್

Upayuktha
0

ಬಡಗುತಿಟ್ಟು ಹಾಗೂ ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಯುವ ಮಹಿಳಾ ಕಲಾವಿದರು ಕಾಣಲು ಸಿಗುತ್ತಾರೆ. ಇಂತಹ ಅನೇಕ ಮಹಿಳಾ ಕಲಾವಿದರ ಸಾಲಿನಲ್ಲಿ ಬಡಗುತಿಟ್ಟು ಹಾಗೂ ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ  ಯಕ್ಷ ಕುವರಿ ನಿಹಾರಿಕಾ ಭಟ್.


ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದ ಶ್ರೀಯುತ ಕೃಷ್ಣ ಭಟ್ ಹಾಗೂ ವೈಜಯಂತಿ ಮಾಲ ಇವರ ಮಗಳಾಗಿ ಏಪ್ರಿಲ್ 13 ರಂದು ಜನನ. ಅಂತಿಮ ವರ್ಷದ ಬಿ.ಕಾಂ. ವ್ಯಾಸಂಗವನ್ನು ಓದುತ್ತಿದ್ದಾರೆ. ಕರ್ನಾಟಕ ಕಲಾದರ್ಶಿನಿ ಶ್ರೀನಿವಾಸ್ ಸಾಸ್ಥಾನ ಅವರ ಬಳಿ ಪ್ರಸಂಗದ ಅಭ್ಯಾಸ ಹಾಗೂ ಶಂಕರ್ ಬಾಳಕುದ್ರು

ಇವರ ಯಕ್ಷಗಾನ ಗುರುಗಳು. ಯಕ್ಷಗಾನ ನೋಡುತ್ತಾ ಸ್ವಇಚ್ಛೆಯಿಂದ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಎಂದು ನಿಹಾರಿಕಾ ಅವರು ಹೇಳುತ್ತಾರೆ.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಅನುಭವ ಇರುವ ಕಲಾವಿದರ ಹತ್ತಿರ ಹೋಗಿ ಆ ದಿನದ ಪ್ರಸಂಗದ ಬಗ್ಗೆ ಕೇಳಿ ಪ್ರಸಂಗದ ಪದ್ಯ ಒಮ್ಮೆ ನೋಡಿ ಹಾಗೂ ಎದುರು ವೇಷದ ನಡೆ ಬಗ್ಗೆ ತಿಳಿದುಕೊಂಡು ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ನಿಹಾರಿಕಾ.


ಕಂಸ ವಧೆ, ಪಾಂಚಜನ್ಯ, ಗಧಾಯುದ್ಧ, ಲವ ಕುಶ, ವೀರಮಣಿ, ಶಶಿಪ್ರಭಾ, ದ್ರೌಪದಿ ಪ್ರತಾಪ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.

ಕೃಷ್ಣ, ಅಭಿಮನ್ಯು, ವೃಷಸೇನ, ಪ್ರಭಾವತಿ, ಅಸಿಕೆ, ತಿಲೋತ್ತಮೆ, ಮಾಲಿನಿ ಇತ್ಯಾದಿ ಇವರ ನೆಚ್ಚಿನ ವೇಷಗಳು.

ಸಾಲಿಗ್ರಾಮ, ಪೆರ್ಡೂರು, ಕಮಲಶಿಲೆ, ಅಮೃತೇಶ್ವರಿ, ಗೋಳಿಗರಡಿ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಹಾಗೂ ಸಿರಿಕಲಾ ಮೇಳ, ಟೀಮ್ ಉತ್ಸಾಹಿ ಬೆಂಗಳೂರು ಮುಂತಾದ ಹವ್ಯಾಸಿ ತಂಡಗಳಲ್ಲಿ ತಿರುಗಾಟ ಮಾಡಿದ್ದಾರೆ ನಿಹಾರಿಕಾ.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಎಲ್ಲಾ ಕ್ಷೇತ್ರದಲ್ಲಿ ಸಹಜವಾಗಿರುವಂತೆ ಬದಲಾವಣೆಗಳು ಇಲ್ಲಿಯೂ ಇವೆ. ಕಾಲಕ್ಕೆ ಸರಿಯಾಗಿ ಬದಲಾಗುತ್ತಿರುವ ಪ್ರದರ್ಶನ, ಕಲಾವಿದರು, ಪ್ರೇಕ್ಷಕ ವರ್ಗ. ಮೂಲತೆಗೆ ಹಾನಿಯಾಗದಹಾಗೆ ಇದ್ದರೆ ಸಾಕು. ಹಿರಿಯರ ದಾರಿ ನೆನಪಿನಲ್ಲಿರಲಿ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಪ್ರೌಢ ಪ್ರೇಕ್ಷಕವರ್ಗ, ಕಲಾವಿದರ ಅಭಿಮಾನಿ ಯಾಗಿ ಸೀಮಿತವಾಗಿರದೆ ಕಲೆಯ ಅಭಿಮಾನಿಗಳಾಗೋಣ, ಕಲೆಯನ್ನು ಉಳಿಸೋಣ ಬೆಳೆಸೋಣ ಎಂದು ಹೇಳುತ್ತಾರೆ ನಿಹಾರಿಕಾ.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಹೆಚ್ಚು ಕಲಿತು ಅಧ್ಯಯನ ಮಾಡಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಬೇಕು ಎಂಬ ಯೋಜನೆ ಇದೆ ಎಂದು ನಿಹಾರಿಕಾ ಅವರು ಹೇಳುತ್ತಾರೆ.


ಹಲವಾರು ಸಂಘ ಸಂಸ್ಥೆಗಳು ಇವರ ಪ್ರತಿಭೆಯನ್ನು ನೋಡಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಚಿತ್ರಕಲೆ, ಪುಸ್ತಕ ಓದುವುದು ಇವರ ಹವ್ಯಾಸಗಳು.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


Photos By:- Dheeraj Udupa Uppinakudru, Praveen Perdoor Photography, VIMan Graphs, Raj Bhat Photos, Prashanth Malyadi, RR Photography, Shree Ranga Photography, Apul Alva Photography.

-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top