ಫೆಬ್ರವರಿ ಆರರಂದು ಭಾನುವಾರ ಸಂಜೆ ಆರು ಗಂಟೆಗೆ ಸರಿಯಾಗಿ ಪುತ್ತೂರಿನ ಸಮೀಪದ ಪರ್ಪುಂಜ ದಲ್ಲಿರುವ ಸೌಗಂಧಿಕಾದಲ್ಲಿ "ಮಾಧವಿ" ರಂಗಪ್ರಯೋಗ ನಡೆಯಲಿದೆ. ಹಿರಿಯ ರಂಗ ನಿರ್ದೇಶಕರಾದ ಶ್ರೀಪಾದ ಭಟ್ಟರು ನಿರ್ದೇಶನ ಮಾಡಿರುವ ಈ ರಂಗ ಕೃತಿಯನ್ನು ರಚಿಸಿದವರು ಸುಧಾ ಆಡುಕಳ. ಮುಖ್ಯಭೂಮಿಕೆಯಲ್ಲಿ ಶರತ್ ಬೋಪಣ್ಣ ಮತ್ತು ದಿವ್ಯಶ್ರೀ ನಾಯಕ್ ಸುಳ್ಯ. ಸಹನಿರ್ದೇಶನ ಗಣೇಶ ಎಂ ಭೀಮನಕೋಣೆಯವರದ್ದು. ಕರೋನಾ ಕಾಲದನಂತರ ಹೊಸ ರಂಗಪ್ರಯೋಗ ದೊಂದಿಗೆ ಪಯಣ ಹೊರಟಿದ್ದಾರೆ ಕೈವಲ್ಯ ರಂಗತಂಡದ ಸದಸ್ಯರು.
ಕೆಲ ವರ್ಷಗಳ ಹಿಂದೆ ಶ್ರೀಪಾದ ಭಟ್ಟರು ಕಲಾವಿದ ಮೋಹನ ಸೋನ, ರಾಜು ಮಣಿಪಾಲ ಮತ್ತು ಮಂಜುಳಾ ಸುಬ್ರಮಣ್ಯರವರು "ರಾಧೆ"ಏಕವ್ಯಕ್ತಿ ಅಭಿನಯದ ರಂಗವಿನ್ಯಾಸ ಗಳ ಕುರಿತು ಚರ್ಚಿಸಲು ಸೌಗಂಧಿಕಾ ದಲ್ಲಿ ಭೇಟಿಯಾದ ದಿನ ಇನ್ನು ಹಸಿ ಹಸಿರು. ನಂತರ ಅನೇಕ ಹೊಸ ಹೊಸ ರಂಗ ಪ್ರಯೋಗ ಗಳೊಂದಿಗೆ ಶ್ರೀಪಾದರು ಜನರ ನಡುವೆ ಹೋಗುತ್ತಿದ್ದರು. ಸದಾ ಹೊಸತನದ ವಸ್ತುವಿನ್ಯಾಸ ವಿಷಯ ಗಳನ್ನೊಳಗೊಂಡ ರಂಗ ಅನ್ವೇಷಕ. ಮಾಧವಿ ಈಗಾಗಲೇ ಕೆಲವು ಯಶಸ್ವಿ ಪ್ರದರ್ಶನಗಳನ್ನು ಮುಗಿಸಿ ಕರಾವಳಿಯತ್ತ ಬರುತ್ತಿದ್ದಾಳೆ.
ಕೊರೋನಾ ಕಾಲದನಂತರ ಸರಳ ರಂಗಪ್ರಯೋಗಗಳು ಆಪ್ತವೆನ್ನಿಸುವ ಪ್ರಯಾಣದ ಮೂಲಕ ಹೆಚ್ಚು ಹೆಚ್ಚು ರಂಗಾಸಕ್ತ ಪ್ರೇಕ್ಷಕರನ್ನು ತಲುಪುವ ಜವಾಬ್ದಾರಿಯ ರಂಗ ಕ್ರಿಯೆಗಳಲ್ಲಿ ತೊಡಗಿಸಿಕೊಂಡಿರುವ ಕೈವಲ್ಯ ರಂಗತಂಡದ ಎಲ್ಲರೂ ಅಭಿನಂದನಾರ್ಹರು. ಇದೇ ಬರುವ ಫೆಬ್ರವರಿ ಆರರಂದು ಭಾನುವಾರ ಸಂಜೆ ಮಾಧವಿ ಯೊಂದಿಗೆ ಮುಖಾಮುಖಿಯಾಗಲು ಸೌಗಂಧಿಕಾ ದಲ್ಲಿ ವೇದಿಕೆ. ಕೊರೋನ ನಿಯಮಗಳನ್ನು ಪಾಲಿಸಿ ಬನ್ನಿ ಜೊತೆಯಾಗಿ.
-ಚಂದ್ರ ಸೌಗಂಧಿಕಾ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ