ಪುತ್ತೂರು: ವಿದ್ಯಾರ್ಥಿಗಳ ಕಲಿಕೆ ಏಕಪ್ರಕಾರವಾಗಿ ಇದ್ದರೂ ಪರೀಕ್ಷೆಯ ಫಲಿತಾಂಶಗಳಲ್ಲಿ ಬಹಳ ವ್ಯತ್ಯಾಸ ಕಾಣುತ್ತದೆ. ಇದಕ್ಕೆ ವೈಜ್ಞಾನಿಕವಾಗಿ ವಿಷಯದ ಅಧ್ಯಯನ ಮಾಡದಿರುವುದೇ ಕಾರಣ. ಹಾಗಾಗಿ ನಮ್ಮ ವರ್ತನೆಗಳನ್ನು, ಓದುವ ಬಗೆಯನ್ನು ಮಾರ್ಪಡಿಸಿಕೊಂಡಲ್ಲಿ ಎಲ್ಲರೂ ಉತ್ತಮ ಅಂಕ ಗಳಿಸಿ ಜೀವನದ ಗುರಿಯನ್ನು ಮುಟ್ಟಲು ಸಾಧ್ಯ ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗ ಮುಖ್ಯಸ್ಥ ಚಂದ್ರಕಾಂತ ಗೋರೆ ಹೇಳಿದರು.
ಅವರು ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ಕಾಲೇಜು ಹಾಗೂ ನೆಲ್ಲಿಕಟ್ಟೆಯ ವಿದ್ಯಾರ್ಥಿಗಳಿಗೆ ನಡೆದ ಗುರಿ ನಿರ್ಧರಿಸುವಿಕೆಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.
ತನ್ನ ಸಾಮರ್ಥ್ಯ, ತನಗಿರುವ ಮಿತಿ, ಇರುವ ಅವಕಾಶಗಳು ಹಾಗೂ ಗುರಿಮುಟ್ಟುವಲ್ಲಿ ಇರುವ ಅಡೆ ತಡೆಗಳು ಇವುಗಳನ್ನು ಅಭ್ಯಸಿಸಿ ತನ್ನ ಗುರಿಯನ್ನು ಸಂಯೋಜನೆ ಮಾಡಿದಲ್ಲಿ ಕಷ್ಟಸಾಧ್ಯವಾದ ಗುರಿಗಳನ್ನು ಕೂಡ ತಲುಪಬಹುದು ಎಂದು ವಿವಿಧ ಉದಾಹರಣೆಗಳು ಹಾಗೂ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು.
ವೇದಿಕೆಯಲ್ಲಿ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಅಭಿಷೇಕ್ ಎನ್ ಹಾಗೂ ಕನ್ನಡ ವಿಭಾಗ ಉಪನ್ಯಾಸಕ ಗಿರೀಶ್ ಉಪಸ್ಥಿತರಿದ್ದರು. ಅಂತಿಮ ಮನಃಶಾಸ್ತ್ರ ವಿದ್ಯಾರ್ಥಿನಿ ವೈಷ್ಣವಿ ಸ್ವಾಗತಿಸಿ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ