ಬೆಂಗಳೂರು: 'ಫೌಂಡೇಶನ್ ಫಾರ್ ಪ್ರಿಸರ್ವೆಷನ್ ಆಫ್ ನಾಲೆಜ್' ಹಾಗೂ ತಾರಾ ಪ್ರಕಾಶನ ನಗರದ ಜೆ ಎಸ್ ಎಸ್ ಆಡಿಟೋರಿಯಂನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಮಧ್ವಾಚಾರ್ಯರ ಸರ್ವಮೂಲ ಗ್ರಂಥ "ತತ್ತ್ವ ಸಂಖ್ಯಾನಂ" ಕೃತಿಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ವಿದ್ವಾನ್ ಡಾ|| ಪಿ. ವಿನಯಾಚಾರ್ಯರವರ ಆಂಗ್ಲಾನುವಾದ, ವ್ಯಾಖ್ಯಾನ ಮತ್ತು ವಿಮರ್ಶಾತ್ಮಕ ಅಧ್ಯಯನವಿರುವ ಪುಸ್ತಕವನ್ನು ಸೋಸಲೆ ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು ಲೋಕಾರ್ಪಣೆಗೊಳಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಕೆ.ಇ.ದೇವನಾಥನ್, ಪೂರ್ಣಪ್ರಜ್ಞ ಸಂಶೋಧನಾ ಮಂದಿರದ ನಿರ್ದೇಶಕ ಡಾ.ಆನಂದತೀರ್ಥ ನಾಗಸಂಪಿಗೆ ಮತ್ತು ತಾರಾ ಪ್ರಕಾಶನದ ಪ್ರೋ.ಪಿ.ಆರ್ ಮುಕುಂದ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ