ಕವಿ ಕಣವಿ ಅವರಿಗೆ ಸಾಹಿತ್ಯ ಪರಿಷತ್ ವತಿಯಿಂದ ಶ್ರದ್ಧಾಂಜಲಿ

Upayuktha
0

ಮಂಗಳೂರು: ಗುರುವಾರ ಅಗಲಿದ ಹಿರಿಯ ಕವಿಚೇತನ ಡಾ. ಚೆನ್ನವೀರ ಕಣವಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ಶ್ರದ್ದಾಂಜಲಿ ಕಾರ್ಯಕ್ರಮ ನಗರದ ಎಸ್. ಡಿ. ಎಂ. ಕಾಲೇಜಿನಲ್ಲಿ ಜರಗಿತು.


ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಮಾತಾಡಿ ಕಣವಿಯವರು ಸಮನ್ವ್ಯಯ ಕವಿ, ಭಾವ ಕವಿ. ಸೌಮ್ಯ ಸ್ವಭಾವದ ಅವರು ತುಂಬ ಸಶಕ್ತವಾಗಿ ಒಳಗಿನ ಗಟ್ಟಿ ನಿರ್ಧಾರಗಳನ್ನು ಪ್ರಕಟಪಡಿಸುತ್ತಿದ್ದರು. ಅವರು ಒಂದು ತಲೆಮಾರಿನ ಪ್ರತಿನಿದಿಯಂತೆ ಕನ್ನಡವನ್ನು ಪ್ರತಿನಿಧಿಸಿದರು ಎಂದರು.  


ಹಿರಿಯ ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಮಾತಾಡಿ ಕಣವಿಯವರು ಕಳೆದ ತಲೆಮಾರಿನಲ್ಲಿ ಕಂಡುಬರುತ್ತಿದ್ದ ಸಮನ್ವಯತೆಯನ್ನು ಸಾರ್ಥಕವಾಗಿ ತಮ್ಮ ಸಾಹಿತ್ಯದಲ್ಲಿ ಬಿಂಬಿಸಿದರು. ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ಬಂಡಾಯೋತ್ತರ ಮುಂತಾದ ಸಾಹಿತ್ಯ ಚಳವಳಿಗಳ ಉತ್ತಮಾಂಶಗಳನ್ನು ತಮ್ಮ ಬರವಣಿಗೆಯಲ್ಲಿ ಉಪಯೋಗಿಸಿಕೊಂಡರು. ಸಾಹಿತ್ಯವು ಸಮಕಾಲೀನತೆಯ ಪ್ರತಿಬಿಂಬ ಎಂಬುದನ್ನು ಕಣವಿಯವರ ಸಾಹಿತ್ಯ ನೋಡಿ ನಾವು ತಿಳಿದುಕೊಳ್ಳಬಹುದು ಎಂದರು.


ದ. ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ. ಅವರು ಕಣವಿಯವರ ಸಾಹಿತ್ಯವು ಪಠ್ಯಪುಸ್ತಕಗಳಲ್ಲಿ ಹೆಚ್ಚು ಸೇರ್ಪಡೆಗೊಳ್ಳಬೇಕು. ವಿದ್ಯಾರ್ಥಿಗಳು ಅವರ ಸಾಹಿತ್ಯದ ಶ್ರೀಮಂತಿಕೆಯನ್ನು ಉಣ್ಣುವಂತಾಗಬೇಕು ಎಂದು ಹೇಳಿದರು.   


ಡಾ. ಮೀನಾಕ್ಷಿ ರಾಮಚಂದ್ರ, ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಂಗಳೂರು ತಾಲೂಕು ಕ. ಸಾ. ಪ. ಅಧ್ಯಕ್ಷ ಮಂಜುನಾಥ ರೇವಣ್ಕರ್ ಮೊದಲಾದವರು ನುಡಿನಮನ ಸಲ್ಲಿಸಿದರು.


ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ವಿನಯ ಆಚಾರ್, ಅರುಣಾ ನಾಗರಾಜ್, ಸಾಹಿತಿಗಳಾದ ಪ್ರಮೀಳಾ ಸುಮನ್, ದೇರಣ್ಣ ಸಿ. ಎಚ್., ಸುಭಾಷ್, ದಯಾನಂದ ರಾವ್ ಕಾವೂರು, ಸುರೇಶ್ ಲಮಾಣಿ ಮೊದಲಾದವರು ಉಪಸ್ಥಿತರಿದ್ದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top