ಶಿರಸಿ: ಹ್ಯಾಟ್ಸ್ ಆಫ್ ಟೀಯೆಸ್ಸೆಸ್. ಸದಸ್ಯ ಕೃಷಿಕರಿಗಾಗಿ ಹಲವು ನೂತನ ಸೇವೆ ಆರಂಭಿಸಿದ ಶಿರಸಿಯ ತೋಟಗಾರ್ಸ್ ಸೇಲ್ ಸೊಸೈಟಿ (ಟಿ ಎಸ್ ಎಸ್) ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ.
ಟಿ.ಎಸ್.ಎಸ್. ವತಿಯಿಂದ ಕಾರ್ಬನ್ ಫೈಬರ್ ದೋಟಿಯಲ್ಲಿ ಅಡಿಕೆ ಕೊನೆ ಕೊಯ್ಲು ಮತ್ತು ಸಿಂಗಾರಕ್ಕೆ ಔಷಧಿ ಸಿಂಪಡಣೆ ಮಾಡಿ ಕೊಡಲಾಗುತ್ತಿದೆ. ಅಡಿಕೆ ಹೆಕ್ಕುವುದು, ಹೊರುವುದಕ್ಕೂ ಕೆಲಸಗಾರರು ಲಭ್ಯರಿದ್ದಾರೆ. ಈ ಸೇವೆ ಪಡೆಯಲು ಟೀಯೆಸ್ಸೆಸ್ ಸದಸ್ಯರಿಗೆ ಆದ್ಯತೆ.
ಹೆಚ್ಚಿನ ಮಾಹಿತಿಗೆ: ಟಿ.ಎಸ್.ಎಸ್. ಕೃಷಿ ವಿಭಾಗ 89040 26621
(ಮಾಹಿತಿ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ