ಡಿ.ಎಸ್. ವೀರಯ್ಯರವರ 'ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಂದೇಶಗಳು' ಕೃತಿ ಬಿಡುಗಡೆ ಕಾರ್ಯಕ್ರಮ

Upayuktha
0

ಬೆಂಗಳೂರು: ಡಿ.ಎಸ್.ವಿ. ಫೌಂಡೇಷನ್ ವತಿಯಿಂದ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿ. ಅಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ವೀರಯ್ಯನವರ 'ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಂದೇಶಗಳು' ಕೃತಿಯ ಬಿಡುಗಡೆಯನ್ನು ಇದೇ ಶನಿವಾರ ಫೆಬ್ರವರಿ 26 ಬೆಳಿಗ್ಗೆ 11.00 ಗಂಟೆಗೆ ನಗರದ ಜೆ.ಸಿ.ರಸ್ತೆಯ ಕನ್ನಡ ಭವನದ ನಯನ ಸಭಾಂಗಣದಲ್ಲಿ ಏರ್ಪಡಿಸಿದೆ.


ಮಾನ್ಯ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಕಾರ್ಯಕ್ರಮ ಉದ್ಘಾಟನೆ ಮತ್ತು ಕೃತಿ ಬಿಡುಗಡೆ ಮಾಡುವರು. ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ಕೃತಿ ಬಗ್ಗೆ ಮಾತನಾಡುವರು. ಲೇಖಕರ ಕುರಿತು ಹಿರಿಯ ಸಾಹಿತಿ ಪ್ರೋ. ದೊಡ್ಡರಂಗೇಗೌಡ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೋ. ಮಲ್ಲೇಪುರಂ ಜಿ. ವೆಂಕಟೇಶ್ ರವರು ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


ಪಿತಾಮಹ ಪ್ರಕಾಶನ ಪ್ರಕಟಪಡಿಸಿರುವ ಈ ಕೃತಿಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 2000 ಸಂದೇಶಗಳನ್ನು ಒಳಗೊಂಡಿದೆ. ಸಮಾನತೆ, ಸಹೋದರತ್ವ, ಅಸ್ಪೃಶ್ಯತಾ ನಿವಾರಣೆ, ಸಂವಿಧಾನ, ರಾಷ್ಟ್ರೀಯತೆ ಹೀಗೆ ಅನೇಕ ವಿಚಾರಗಳಿಂದ ಕೂಡಿದ ವಿಶಿಷ್ಟ ಗ್ರಂಥವಾಗಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top