ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ 'ಹಿಂದಿ ದಿವಸ್' ಆಚರಣೆ

Upayuktha
0

 

ಉಜಿರೆ ಜ.18: ವಿಶ್ವದ ಪ್ರಮುಖ ಭಾಷೆಗಳಲ್ಲಿ ಹಿಂದಿ ಮೊದಲ ಸಾಲಿನಲ್ಲಿ ಇದೆ. ಭಾರತದಲ್ಲಿ ಕೂಡ ಹಿಂದಿ ಭಾಷೆಯನ್ನು ಮಾತನಾಡುವವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಹಾಗಾಗಿ ನಾವು ಹಿಂದಿ ದಿವಸವನ್ನು ಸಂಭ್ರಮದಿಂದ ಆಚರಣೆ ಮಾಡಬೇಕು ಎಂದು ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ವಿಭಾಗದ ರಸಾಯನಶಾಸ್ತ್ರ ಪ್ರಾಧ್ಯಾಪಕಿ ಡಾ.ನಪೀಸತ್ ಹೇಳಿದರು.


ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಹಿಂದಿ ವಿಭಾಗದ ವತಿಯಿಂದ ನಡೆದ "ಹಿಂದಿ ದಿವಸ್" ಮತ್ತು ವಿಭಾಗ ಚಟುವಟಿಕೆಗಳನ್ನು ಉದ್ಘಾಟಿಸಿ ಹಾಗೂ ವಿಭಾಗ ಚಟುವಟಿಕೆಗಳ ಪ್ರಶಸ್ತಿ ಪ್ರಧಾನ ಮಾಡಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.


ಹಿಂದಿ ಭಾಷೆಯ ಕಲಿಕೆಯು ಈಗ ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಭಾಷಾ ಕಲಿಕೆಯು ವಿಧ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುತ್ತದೆ ಹಾಗೂ ನಿಮ್ಮ ಮುಂದಿರುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಡಾ. ನಫೀಸತ್ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಉದಯಚಂದ್ರ ಭಾರತದ ಉತ್ತರ ಭಾಗದಲ್ಲಿ ಹಿಂದಿ ಕಡ್ಡಾಯ ಭಾಷೆ ಎನ್ನುವ ಮಟ್ಟಿಗೆ ಇದೆ. ನಾವು ಅಲ್ಲಿಗೆ ಪ್ರಯಾಣ ಮಾಡಬೇಕಾದರೆ ಹಿಂದಿ ಭಾಷೆ ಅಗತ್ಯ. ಹೆಚ್ಚು ಭಾಷೆಗಳನ್ನು ಕಲಿಯುವುದು ಕೂಡ ಅತ್ಯುತ್ತಮ ಅಭಿರುಚಿ. ಬೇರೆ ಬೇರೆ ಭಾಷೆಗಳನ್ನು ಕಲಿಯುತ್ತಿರಿ ಎಂದು ಶುಭ ಹಾರೈಸಿದರು.


ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕಿ ಡಾ. ಪ್ಲೇವಿಯಾ ಪೌಲ್‌ ಅವರು ಹಿಂದಿ ವಿಧ್ಯಾರ್ಥಿ ಸಂಘವನ್ನು ಉದ್ಘಾಟನೆ ಮಾಡಿ, ವಿಧ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧನೆ ಮಾಡಿದರು. ಕಾಲೇಜಿನ ಹಿಂದಿ ವಿಭಾಗದ ಪ್ರಾಧ್ಯಾಪಕ ಮಲ್ಲಿಕಾರ್ಜುನ್ ಮತ್ತು ಉಪನ್ಯಾಸಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಅಕ್ಷಯ್ ಮತ್ತು ವಸುಮತಿ ನಿರೂಪಣೆ ಮಾಡಿ, ಮನೋರಂಜನ್ ಸ್ವಾಗತಿಸಿದರು. ಆದರ್ಶ್ ವಂದನಾರ್ಪಣೆ ಮಾಡಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top