ವಿವೇಕಾನಂದ ಕಾಲೇಜಿನಲ್ಲಿ ಸಂವಿಧಾನದ ಮಹತ್ವ ಮತ್ತು ಅತಿಥಿ ಉಪನ್ಯಾಸ ಕಾರ್ಯಕ್ರಮ

Upayuktha
0

 

ಜನರನ್ನು ರಕ್ಷಿಸುವ ಶಕ್ತಿ ಸಂವಿಧಾನ: ಲಕ್ಷ್ಮಿಕಾಂತ್ ಎ


ಪುತ್ತೂರು, ಜ.11: ಭಾರತದಲ್ಲಿ ಪ್ರಜಾಸತ್ತಾತ್ಮಕ ಕಾಲಘಟ್ಟ ಹೇಗೆ ಕಾರ್ಯ ವಹಿಸುತ್ತಿದೆ? ಜನರಲ್ಲಿನ ಸ್ವಾರ್ಥ ಆಲೋಚನೆಗಳು ಕಡಿಮೆಯಾಗಬೇಕು ಅನ್ನುವ ಉದ್ದೇಶದಿಂದ ಸಂವಿಧಾನವು ಜನರಿಗಾಗಿ ಹುಟ್ಟಿಕೊಳ್ಳುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಪ್ರಜಾಸತ್ತಾತ್ಮಕತೆ ಪರಿಪೂರ್ಣಗೊಳ್ಳಬೇಕಾದರೆ ಸಂವಿಧಾನವು ಅಭಿವೃದ್ಧಿಯಾಗಬೇಕು. ಸಂವಿಧಾನದ ಅರ್ಥ ಮತ್ತು ಉದ್ದೇಶವನ್ನು ಪ್ರತಿಯೊಬ್ಬರು ಆರ್ಥ ಮಾಡಿಕೊಳ್ಳಬೇಕು. ಜನರ ಮನಸ್ಸನ್ನು ತಲುಪಬೇಕಾಗುತ್ತದೆ ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕ ಲಕ್ಷ್ಮಿಕಾಂತ್ ಎ ಹೇಳಿದರು.


ಇಲ್ಲಿನ ವಿವೇಕಾನಂದ ಕಾಲೇಜಿನ ಐಕ್ಯೂಎಸಿ ಘಟಕ ಹಾಗೂ ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ ಪ್ರಜಾಪ್ರಭುತ್ವ ಆಡಳಿತದಲ್ಲಿ ಭಾರತೀಯ ಸಂವಿಧಾನದ ಮಹತ್ವ ಎಂಬ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಂಗಳವಾರ ಅವರು ಮಾತನಾಡಿದರು.


ವಿದ್ಯಾರ್ಥಿಗಳ ಉದ್ಯೋಗ ದೃಷ್ಟಿಗೆ ಪೂರಕವಾಗುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಗಳು ಹೆಚ್ಚಾಗಿ ಸಂವಿಧಾನದಲ್ಲಿ ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ರಾಜ್ಯಶಾಸ್ತ್ರ ಹಾಗೂ ಸಂವಿಧಾನ ಪುಸ್ತಕಗಳು ಪೂರಕ. ವಿದ್ಯಾರ್ಥಿಗಳು ಈ ವಿಷಯಗಳ ಅಧ್ಯಾಯ ಮಾಡಿದರೆ ಖಂಡಿತವಾಗಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಿರ್ಣವಾಗಲು ಸಾಧ್ಯ ಇದೆ ಎಂದು ತಿಳಿಸಿದರು.


ಕಾಲೇಜು ವಿದ್ಯಾರ್ಥಿಗಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಕಾಲೇಜು ನಡೆಸುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಜ್ಞಾನ ಹೆಚ್ಚಾಗುತ್ತದೆ. ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಪರಿಣಿತರಾಗಿ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಶೋಭಾ ಕೊಳತ್ತಾಯ ದೀಪ ಬೆಳಗಿಸಿ ಮಾತನಾಡಿದರು.


ಬಿಎ ವಿದ್ಯಾರ್ಥಿಗಳು ಕಲಾ ವಿಭಾಗವನ್ನು ಕಲಿಯುತ್ತಿದ್ದೇವೆ ಎನ್ನುವ ಕೀಳರಿಮೆ ಇಟ್ಟುಕೊಳ್ಳಬೇಡಿ. ಹೆಚ್ಚಾಗಿ ಸಾಧನೆ ಮಾಡಿರುವ ಪ್ರತಿಭೆಗಳು ಕಲಾ ವಿಭಾಗದಲ್ಲಿ ಕಲಿತ ವಿದ್ಯಾರ್ಥಿಗಳೇ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಬೇಕು. ಬಟನ್‌ ಒತ್ತಿದರೆ ಮಾಹಿತಿಗಳು ಮೊಬೈಲ್ ನಲ್ಲಿ ಸಿಗುತ್ತದೆ. ಆದರೆ ಪುಸ್ತಕಗಳಲ್ಲಿ ಮಾಹಿತಿ ಹುಡುಕಿ ಹಾಗೂ ರಸಪ್ರಶ್ನೆಗಳಂತಹ ಸ್ಪರ್ಧೆಯಲ್ಲಿ ಭಾಗವಹಿಸಿದರೆ ಆ ಮಾಹಿತಿಗಳು ನೆನಪಿನಲ್ಲಿ ಇರುತ್ತದೆ ಎಂದು ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್ ಹೇಳಿದರು.


ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಡಾ. ಬಿ ಶ್ರೀಧರ್ ನಾಯ್ಕ್, ಡಾ ಪ್ರಮೋದ್ ಎಂ.ಜಿ, ಡಾ ವಿಷ್ಣುಕುಮಾರ್ ಎ, ಅನಿತಾ ಕಾಮತ್. ಕೆ, ಕವಿತಾ ಬಿ ಉಪಸ್ಥಿತರಿದ್ದರು.


ದ್ವಿತೀಯ ಬಿಎ ವಿದ್ಯಾರ್ಥಿನಿ ಶ್ರೀಜನಿ ಸ್ವಾಗತಿಸಿ, ಪ್ರಥಮ ಬಿಎ ವಿದ್ಯಾರ್ಥಿನಿ ಅದಿತಿ ವಂದಿಸಿ, ನಿಶ್ಮಿತಾ ಪ್ರಾರ್ಥಿಸಿ, ತೃತೀಯ ಬಿಎ ವಿದ್ಯಾರ್ಥಿನಿ ರುಚಿತಾ ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top