ಮೇಕೆದಾಟು ಯೋಜನೆಯ ಅನುಷ್ಠಾನ: ಸಮತೋಲನ ದೃಷ್ಟಿಯ ಅನುಷ್ಠಾನಕ್ಕೆ ವಿಧಗಳು/ಪಥಗಳು

Upayuktha
0

ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಯು ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ಕಟ್ಟುವುದನ್ನು ಒಳಗೊಂಡಿರುತ್ತದೆ. ಇದರಿಂದ ಕಾವೇರಿ ವನ್ಯಧಾಮದ 53 ಚದರ ಕಿಲೋಮಿಟರ್ ಸಂಪದ್ಭರಿತ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ. ಈ ಯೋಜನೆಯ ಮುಖ್ಯ ಉದ್ದೇಶ ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಕುಡಿಯುವ ನೀರು  ಸರಬರಾಜು ಮಾಡುವುದು, ತಮಿಳುನಾಡಿಗೆ ಹರಿಯುವ ನದಿ ಹರಿವನ್ನು ನಿಯಂತ್ರಿಸುವುದು ಮತ್ತು 400 ಮೆಗಾವ್ಯಾಟ್ ವಿದ್ಯುಚ್ಛಕ್ತಿ ತಯಾರಿಸುವುದು.


ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಪ್ರದೇಶದಲ್ಲಿ ಸಾಲುಸಾಲು ಸುರಕ್ಷಿತ ಅರಣ್ಯ ಪ್ರದೇಶಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ್ನು ಒಳಗೊಂಡು ಕಾವೇರಿ ವನ್ಯಧಾಮ, ಮಲೆಮಹದೇಶ್ವರ ವನ್ಯಧಾಮ, ಬಿಳಿಗಿರಂಗನಬೆಟ್ಟ ವನ್ಯಧಾಮ, ತಮಿಳುನಾಡಿನ ಸತ್ಯಮಂಗಲ ವನ್ಯಧಾಮ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶ, ಕರ್ನಾಟಕದ ಬಂಡೀಪುರ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಕೇರಳದ ವೈನಾಡು ವನ್ಯಧಾಮ ಅಲ್ಲದೆ ಉತ್ತರಕ್ಕೆ ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಂತೆ  ಕರಾವಳಿ ಪ್ರದೇಶವನ್ನು ಒಳಗೊಂಡಂತೆ  ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮುಂದಕ್ಕೂ ಇವೆ.


ಕಾವೇರಿ ವನ್ಯಧಾಮವು ಬಹುದೂರ ಚಲನಾ ವ್ಯಾಪ್ತಿಯ ವನ್ಯಜೀವಿ ರಕ್ಷಣಾ ಕಾಯಿದೆ 1972ರ ಶೆಡ್ಯೂಲ್1 ರ  ವನ್ಯ ಪ್ರಾಣಿಗಳಾದ ಆನೆ, ಹುಲಿ, ಮಹಶೀರ್ ಮೀನುಗಳಿಗೆ ಅವಶ್ಯಕವಾದ ಮುಖ್ಯ ಸಂಪರ್ಕ ಪ್ರದೇಶವಾಗಿದೆ. ಯಾರು ಯೋಜನೆಯ ಪರವಾಗಿದ್ದಾರೋ ಅವರು ಆಗಾಗ ಕೇಳುವ ಸಾಮಾನ್ಯ ಪ್ರಶ್ನೆ" ಈಗಾಗಲೇ ಇತರೆಡೆಯಲ್ಲಿ ಸುರಕ್ಷಿತ ಅರಣ್ಯ ಪ್ರದೇಶಗಳಿಂದ ಹಲವಾರು ಯೋಜನೆಗಳಿಗೆ ಅರಣ್ಯ ಪ್ರದೇಶವನ್ನು ಬಿಡುಗಡೆ ಮಾಡಿರುವಾಗ ಇಂತಹ ಯೋಜನೆಗೆ ಮತ್ತಷ್ಟು ಅರಣ್ಯ ಪ್ರದೇಶವನ್ನು ಏಕೆ ನೀಡಬಾರದು?. ಇನ್ನು ಕೆಲವರು "ಮಾನವನ ಅವಶ್ಯಕತೆಗಳಿಗಿಂತ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಏಕೆ ಹೆಚ್ಚು ಆದ್ಯತೆ ಕೊಡಬೇಕು" ಎಂದೂ ಕೇಳುತ್ತಾರೆ.


ನಾನು ಎದುರಿಸುತ್ತಿರುವ ಸಂಘರ್ಷವಿರುವುದು: ಹೇಗೆ ಪಾಪಿಯು ಹಿಂದೆ ಮಾಡಿದ ಅರಣ್ಯಗಳಿಗೆ ಆದ ಹಾನಿಗೆ ಪರಿಹಾರ ಮಾಡುವುದು: ಶರಾವತಿ ಲಿಂಗನಮಕ್ಕಿ ಮುಳುಗಡೆ ಪ್ರದೇಶದಲ್ಲಿ ಈಗಾಗಲೇ 14ಸಾವಿರ ಹೆಕ್ಟೇರ್ ನಷ್ಟು, 6800 ಹೆಕ್ಟೇರ್ ವಾರಾಹಿ ಯೋಜನೆಗೆ, 1000 ಹೆಕ್ಟೇರ್ ತಲಕಳಲೆ ಜಲಾಶಯಕ್ಕೆ, 1880ಹೆಕ್ಟೇರ್ ಚಕ್ರ ಅಣೆಕಟ್ಟಿಗೆ, 2000ಹೆಕ್ಟೇರ್ ಕರ್ನಾಟಕ ವಿದ್ಯುತ್ ನಿಗಮದ ನಗರ ಸ್ಥಾಪನೆಗೆ, 800 ಹೆಕ್ಟೇರ್ ಶರಾವತಿ ಟೇಲರೇಸ್ ಯೋಜನೆಗೆ, 800ಹೆಕ್ಟೇರ್  ಕರ್ನಾಟಕ ವಿದ್ಯುತ್ ನಿಗಮದ ಯೋಜನೆಗಳಿಗೆ ಹಾಗೂ ಇನ್ನೂ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ಈ ಯೋಜನಾ ಪ್ರದೇಶದ ಜನರ ಪುನರ್ವಸತಿಗಾಗಿ ಕಳೆದುಕೊಂಡಿದ್ದೇವೆ.


ಭವಿಷ್ಯದಲ್ಲಿ ಈಗಾಗಲೇ ಆಲೋಚಿಸಿ ಯೋಜಿಸಿರುವ ಹಲವಾರು ಅರಣ್ಯ 'ಆಪೋಶನ 'ಯೋಜನೆಗಳು ಕೆಲವರಿಗೆ ಖುಷಿ/ಸಂತಸ ಮತ್ತು ಸಮಾಜ ಹಾಗೂ ಪರಿಸರಕ್ಕೆ ವಿನಾಶದ ಸಂದೇಶವನ್ನು ನೀಡುತ್ತವೆ. ಈ ಲೇಖಕ ಸ್ವಾತಂತ್ರ್ಯಪೂರ್ವದ ಯುಗ ದವನಾಗಿದ್ದು ಅಂದಿನ ವರ್ಚಸ್ವಿ ಪ್ರಧಾನ ಮಂತ್ರಿಯವರಾದ ಶ್ರೀ  ಜವಹರಲಾಲ್ ನೆಹ್ರೂ ಅವರು ಘೋಷಿಸಿದ ನಮ್ಮ ಯೋಜನೆಗಳು 'ಆಧುನಿಕ ದೇವಾಲಯಗಳು 'ಎಂಬ ಮಾತಿಗೆ ಮಾರು ಹೋದವ ನಾಗಿದ್ದಾನೆ. ನಾನು ಶರಾವತಿ ಕಾಳಿ ಪ್ರದೇಶಗಳಲ್ಲಿ ಅರಣ್ಯವನ್ನು ತೆರವುಗೊಳಿಸಿದವರಲ್ಲಿ ಒಬ್ಬನಾಗಿದ್ದೇನೆ. 1973ರಲ್ಲಿ  ಹಾರಂಗಿ ಯೋಜನೆಗೆ ಅರಣ್ಯ ಪ್ರದೇಶ ತೆರವುಗೊಳಿಸುವಷ್ಟರಲ್ಲಿ ನನ್ನ ಮನಃಸಾಕ್ಷಿ ಚುಚ್ಚತೊಡಗಿತ್ತು.


contd:  1976ರಲ್ಲಿ ನಾನು ಕನ್ನಡದಲ್ಲಿ 'ಕರ್ನಾಟಕದ ವನ್ಯ ಸಂಪತ್ತು' ಎಂಬ ಕಿರುಹೊತ್ತಿಗೆಯನ್ನು ಪ್ರಕಟಿಸಿದ್ದು ಅದರಲ್ಲಿ ಬುದ್ದಿಭ್ರಮೆಗೊಂಡಂತಹ ಮರಕಡಿತಲೆ ಹಾಗೂ ನಿರ್ಲಕ್ಷಿತ ಪುನರುತ್ಪಾದನೆ ಹಾಗೂ ಪರಿಹಾರಗಳು ನಮ್ಮನ್ನು ಪ್ರಳಯ ದಿನದ ಅಂಚಿಗೆ ನೂಕುತ್ತದೆ ಎಂದು ಮುನ್ನೆಣಿಕೆ ಮಾಡಿದ್ದೆ. ಅಧ್ಯಯನಗಳ ನಂತರ 2002ರ ಹೊತ್ತಿಗೆ ಸೌದೆಗೆ ತೀವ್ರ ಕೊರತೆ ಉಂಟಾಗುತ್ತದೆ ಹಾಗೂ ಇತರೆ ಅರಣ್ಯ ಉತ್ಪನ್ನಗಳೂ ಇದೇ ಹಾದಿಯಲ್ಲಿ ಸಾಗುತ್ತವೆ ಎಂದು ಅಂದಾಜಿಸಿದ್ದೆ. ಅಲ್ಲದೆ ಈಗಿರುವ 75 ತಾಲ್ಲೂಕುಗಳಲ್ಲಿನ ಅನಾವೃಷ್ಟಿ ಇನ್ನು ಹೆಚ್ಚು ತಾಲ್ಲೂಕುಗಳಿಗೆ ಹರಡುತ್ತದೆ ಎಂದು ಘೋಷಿಸಿದ್ದೆ. ಆಗ ಹೆಚ್ಚು ಜನರು ನನ್ನ ಮುನ್ನೆಣಿಕೆಯನ್ನು ಹಾಗೂ ಶಿಫಾರಸುಗಳನ್ನು ಪರಿಗಣಿಸಿರಲಿಲ್ಲ; ಅದರಲ್ಲೂ ಕೆಲವು ಅರಣ್ಯಾಧಿಕಾರಿಗಳು ನಮ್ಮ ಅರಣ್ಯಗಳು  ಸಮೃದ್ಧವಾಗಿದ್ದು ಅಕ್ಷಯಪಾತ್ರೆಯಂತೆ ನಿರಂತರವಾಗಿ  ಉತ್ಪನ್ನಗಳನ್ನು ನೀಡುತ್ತವೆ ಎಂದು ಭಾವಿಸಿದ್ದರು.


ಮಾರ್ಕ್ ರೀಸ್ನರ್ ಎಂಬ ಅಮೆರಿಕಾದ ಪತ್ರಕರ್ತ ಏಳು ವರ್ಷದ ಅಧ್ಯಯನದ ನಂತರ 'ಕ್ಯಾಡಿಲಾಕ್ ದೆಸರ್ಟ'ಎಂಬ ಪುಸ್ತಕ ವನ್ನು ಪ್ರಕಟಿಸಿದ್ದು ಅದರಲ್ಲಿ ದೊಡ್ಡ ಪ್ರಮಾಣದ ಅಣೆಕಟ್ಟಿನಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ಹೀಗೆ ಕ್ರೋಢೀಕರಿಸಿದ್ದಾನೆ" ನಮ್ಮ ಮುಂದಿನ ಪೀಳಿಗೆಗೆ$2.5 ಟ್ರಿಲಿಯನ್  ಸಾಲವನ್ನು ಬಿಟ್ಟು ಹೋಗುತ್ತಿದ್ದೇವೆ" !


ದೂರದೃಷ್ಟಿ ಹೊಂದಿದ ರಾಜನೀತಿಜ್ಞ ಮತ್ತು ರಾಜಕೀಯ ನಾಯಕರಾದ ಗೌರವಾನ್ವಿತ ಶ್ರೀ ದೇವರಾಜ್ ಅರಸ್ ನನ್ನ ಪುಸ್ತಕವನ್ನು ಓದಿ ನನ್ನೊಂದಿಗೆ ಚರ್ಚಿಸಿ ಅವರ ಭಾಷಣಗಳಲ್ಲಿ "ಇವು ಈ ರೀತಿ ವಿವೇಚನೆಯಿಲ್ಲದೆ ಮರಗಳನ್ನು ಕಡಿಯುತ್ತಾ ಹೋದರೆ ಅರಬ್ಬಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ" ಎಂದು ಹೇಳುತ್ತಿದ್ದರು. ಅವರ ಮಾತುಗಳು ಒಬ್ಬ ಪ್ರವಾದಿಯ ಮಾತಿನಂತಿವೆ ನೋಡಿ. ಈಗ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬರಪೀಡಿತ ತಾಲ್ಲೂಕುಗಳ ಸಂಖ್ಯೆ 135ಕ್ಕೆ ಏರಿದೆ. ಇಂತಹವರೇ ಆದ ಇನ್ನೊಬ್ಬ ರಾಜನೀತಿಜ್ಞರೆಂದರೆ ಕ್ರಿಯಾಶೀಲ ಹಾಗೂ ಪಾದರಸ ವ್ಯಕ್ತಿತ್ವ ಹೊಂದಿದ ಮಾನ್ಯ ಕೆ ಎಚ್ ಪಾಟೀಲ್ ರವರು. ಅವರು ಅರಣ್ಯ ಸಂರಕ್ಷಣೆ  ಹಿಡಿತ ತಪ್ಪುತ್ತಿದ್ದಾಗ ಮಂತ್ರಿಗಿರಿಗೆ ರಾಜೀನಾಮೆ ನೀಡಲು ಮುಂದಾಗಿದ್ದರು.


ಈಗಿನ ರಾಜಕಾರಣಿಗಳಲ್ಲೂ ಶ್ರೀ ದೇವರಾಜ್ ಅರಸ್ ಹಾಗೂ ಶ್ರೀ ಕೆ ಎಚ್ ಪಾಟೀಲ್ ರಂಥವರು ಬರುತ್ತಾರೆ ಎಂಬ ನಂಬಿಕೆ ನನಗಿದೆ.ಅಂಥವರು ಬಂದಾಗ ಅವರು  ಮೇಕೆದಾಟು ಹಾಗೂ  ಇತರ ಕೆಟ್ಟದಾಗಿ ಯೋಜಿಸಿದ ಅಭಿವೃದ್ಧಿ ಯೋಜನೆಗಳನ್ನು ನಾವು ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಅನುಷ್ಠಾನಗೊಳಿಸುತ್ತಾರೆ. ನಮ್ಮ ಗೋರಿಯನ್ನು ನಾವೇ ಮಾಡಿಕೊಳ್ಳುವುದು ಬೇಡ.ನಮ್ಮ ಮುಂದೆ ಹಲವು ಪರ್ಯಾಯ ಆಯ್ಕೆಗಳಿವೆ. ಅಂತಹ ಪರ್ಯಾಯ ಆಯ್ಕೆಗಳನ್ನು ನಿಷ್ಠೆಯಿಂದ, ಪ್ರಾಮಾಣಿಕವಾಗಿ ಹಾಗೂ  ನ್ಯಾಯಯುತವಾಗಿ ಅನುಷ್ಠಾನಗೊಳಿಸಿದಲ್ಲಿ ನಮಗೆ ಪರಿಹಾರ ದೊರಕುತ್ತದೆ. ಈ ದಿಸೆಯಲ್ಲಿ ನಮ್ಮ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ .ಈ ಸುಗ್ಗಿ ಕಾಲದ ಸಂಕ್ರಾಂತಿ ಜೀವವೈವಿಧ್ಯದ ಕಾಲದಲ್ಲಿ ಮಾನವ ಹಾಗೂ ನಿಸರ್ಗದ ಸಮತೋಲನವನ್ನು ಕಾಪಾಡೋಣ.



- ಎ.ಸಿ. ಲಕ್ಷ್ಮಣ,

ಭಾರತೀಯ ಅರಣ್ಯ ಸೇವೆ (ನಿವೃತ್ತ)  

ಕರ್ನಾಟಕ ಸರಕಾರದ ಮಾಜಿ ಪರಿಸರ ಕಾರ್ಯದರ್ಶಿ 

ರಾಜ್ಯ ಯೋಜನಾ ಆಯೋಗದ ಸದಸ್ಯರು


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top