ಮಂಗಳೂರು: ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ಮಠದ ಮಂಗಳೂರು ಶಾಖಾ ಮಠದ ಮಠಾಧಿಪತಿಗಳಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರ ದಿವ್ಯ ಉಪಸ್ಥಿತಿಯಲ್ಲಿ ಅಮ್ಮನ ಭಕ್ತರ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಸುರಕ್ಷತೆಗಾಗಿ ಹಾಗೂ ದೇಶದ ಪ್ರಜೆಗಳ ಹಿತದೃಷ್ಟಿಯಿಂದ ಸೋಮವಾರ (ಜ.17) ವಿಶೇಷ ಮಹಾ ಮೃತ್ಯುಂಜಯ ಹೋಮವನ್ನು ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ನೆರವೇರಿಸಲಾಯಿತು.
ಶ್ರೀ ಬ್ರಹ್ಮಸ್ಥಾನ ಕ್ಷೇತ್ರವು ಅಮ್ಮನವರಿಂದ ಪ್ರಾಣಪ್ರತಿಷ್ಠೆ ಮಾಡಲ್ಪಟ್ಟಿರುವ ಶಿವ, ಪಾರ್ವತಿ, ಗಣೇಶ, ಸುಬ್ರಹ್ಮಣ್ಯ (ನಾಗ) ದೇವರುಗಳ ನಾಲ್ಕು ದಿಕ್ಕಿಗೆ ಅಭಿಮುಖವಾಗಿರುವ ಏಕಶಿಲಾ ವಿಗ್ರಹಗಳು ಹೊಂದಿರುವ ದೇವಾಲಯ ವಾಗಿದೆ. ಗ್ರಹಗಳ ಸ್ಥಾನಾಂತರ, ಸಂಧಿ ಕಾಲದ ದೋಷಗಳಿಂದ ಉಂಟಾಗುವ ಸಂಕಷ್ಟಗಳ ನಿವಾರಣೆಗೆ ಈ ಕ್ಷೇತ್ರ ಅತ್ಯಂತ ಫಲಪ್ರದವೆನಿಸಿದೆ.
ಆದುದರಿಂದ ಅಮ್ಮ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಪ್ರೀತಿಗೆ ಪಾತ್ರರಾಗಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಉತ್ತಮ ಆರೋಗ್ಯ, ದೇಶವನ್ನು ಮುನ್ನಡೆಸುವ ಸಾಮರ್ಥ್ಯ, ಸಮೃದ್ಧಿ ಜೊತೆಗೆ ದೀರ್ಘಾಯುಷ್ಯ ಪ್ರಾಪ್ತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಈ ಹೋಮವನ್ನು ಬ್ರಹ್ಮಚಾರಿ ರತೀಶ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಕಿಯೋಸ್ಕ್ ಅಧ್ಯಕ್ಷ ಸಂತೋಷ ಕುಮಾರ್ ರೈ ಬೋಳಿಯಾರು, ಮನಪಾ ಉಪಮೇಯರ್ ಶ್ರೀಮತಿ ಸುಮಂಗಳಾ, ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಡಾ.ಜೀವರಾಜ್ ಸೊರಕೆ, ಮಾಜಿ ಮೇಯರ್ ಗಳಾದ ಗಣೇಶ ಹೊಸಬೆಟ್ಟು, ದಿವಾಕರ್, ಕಾರ್ಪೋರೇಟರ್ ಗಳಾದ ಜಗದೀಶ್ ಶೆಟ್ಟಿ, ರಾಧಾಕೃಷ್ಣ, ಗಣೇಶ್ ಕುಲಾಲ್, ಜಯಾನಂದ ಅಂಚನ್, ಶರತ್, ಭರತ್, ಶ್ರೀಮತಿ ರಜನಿ, ಶ್ರೀಮತಿ ಲೀಲಾವತಿ ಪ್ರಕಾಶ್, ಶ್ರೀಮತಿ ಜಯಲಕ್ಷ್ಮಿ ಶೆಟ್ಟಿ, ಶ್ರೀಮತಿ ಸಂಧ್ಯಾ ಮೋಹನ್ ಆಚಾರ್, ಶ್ರೀಮತಿ ಜಯಶ್ರೀ ಕುಡ್ವಾ ಮಾಜಿ ಕಾರ್ಪೊರೇಟರ್ ವಿಜಯ ಕುಮಾರ್ ಶೆಟ್ಟಿ,ಶ್ರೀ ಭೋಜರಾಜ್ ಕರ್ಕೇರ ಹಾಗೂ ಅಮ್ಮನ ಭಕ್ತರು ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ