|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಡುಬಿದ್ರೆಯಲ್ಲಿ ಪೂಲ ವಿಠಲ ಶೆಟ್ಟಿ ಪ್ರಶಸ್ತಿ ಪ್ರದಾನ

ಪಡುಬಿದ್ರೆಯಲ್ಲಿ ಪೂಲ ವಿಠಲ ಶೆಟ್ಟಿ ಪ್ರಶಸ್ತಿ ಪ್ರದಾನ

ಕಟೀಲು ಮೇಳದ ಹನ್ನೊಂದು ಕಲಾಸಾಧಕರಿಗೆ ಪ್ರಶಸ್ತಿ ಪ್ರದಾನ


ಪಡುಬಿದ್ರೆ: ಕಂಬಳ ಕ್ಷೇತ್ರದಲ್ಲಿ ಓಟದ ಕೋಣಗಳ ಯಜಮಾನನಾಗಿ ಎಂಭತ್ತರ ದಶಕದಲ್ಲಿ ಖ್ಯಾತಿ ಪಡೆದಿದ್ದ ಮುಂಬೈಯ ಉದ್ಯಮಿ ಕೀರ್ತಿಶೇಷ ಪೂಲ ವಿಠಲ ಶೆಟ್ಟಿ ಸ್ಮರಣಾರ್ಥ ಕಟೀಲು ಮೇಳದ ಹನ್ನೊಂದು ಕಲಾಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜನವರಿ 15 ಶನಿವಾರ ಪಡುಬಿದ್ರೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜರಗಿತು.


ಘಾಟ್ ಕೋಪರ್ ನ ಭಾರತ್ ಕೆಫೆಯ ಸಂಸ್ಥಾಪಕ ಪೂಲ ವಿಠಲ ಶೆಟ್ಟಿ ಯವರು ಕಟೀಲು ದೇವಿಯ ಭಕ್ತರಾಗಿದ್ದು ಮುಂಬೈ, ಎರ್ಮಾಳು, ಪಡುಬಿದ್ರೆ ಪರಿಸರದಲ್ಲಿ ಹಲವಾರು ಧಾರ್ಮಿಕ, ಸಂಸ್ಕೃತಿಕ, ಸೇವಾ ಕಾರ್ಯಕ್ರಮಗಳನ್ನು  ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಮಾರ್ಗದರ್ಶನದಲ್ಲಿ ನಡೆಸಿದ್ದರು. ಅವರ ಪತ್ನಿ ರಾಧಾ ವಿಠಲ ಶೆಟ್ಟಿ ಹಾಗೂ ಮಕ್ಕಳು ಕಳೆದ 24 ವರ್ಷಗಳಿಂದ ಕಟೀಲು ಮೇಳದ ಯಕ್ಷಗಾನ ಸೇವೆಯನ್ನು ಪಡುಬಿದ್ರೆಯಲ್ಲಿ ನಡೆಸಿಕೊಂಡು ಬಂದಿದ್ದು ಹಲವು ವರುಷಗಳಿಂದ ಪೂಲ ವಿಠಲ ಶೆಟ್ಟಿ ಪ್ರಶಸ್ತಿ ನೀಡುತ್ತಿದ್ದಾರೆ.


ಈ ವರ್ಷ ಯಕ್ಷಗಾನ ಸೇವೆಯ ರಜತ ವರ್ಷ ಸಂಭ್ರಮಾಚರಣೆ "ಬೊಳ್ಳಿ ಪರ್ಬ" ದ ಸಂದರ್ಭದಲ್ಲಿ ಕಟೀಲು ಆರು ಮೇಳಗಳ ಸಂಚಾಲಕ ಶ್ರೀ ದೇವಿ ಪ್ರಸಾದ ವಿಠಲ ಶೆಟ್ಟಿಯವರಿಗೆ ರಜತ ಸಂಭ್ರಮ ಗೌರವ ಪ್ರಶಸ್ತಿಯನ್ನೂ ನೀಡಲಾಯಿತು.


ಹಿರಿಯ ಶ್ರೀ ದೇವಿ ಪಾತ್ರಧಾರಿಗಳಿಗೆ ಪ್ರಶಸ್ತಿ:

ಕಟೀಲು ಮೇಳದಲ್ಲಿ ದೀರ್ಘಕಾಲ ಕಲಾ ಸೇವೆಗೈದು ನಿವೃತ್ತ ರಾಗಿರುವ, ಶ್ರೀ ದೇವೀ ಮಹಾತ್ಮೆ ಪ್ರಸಂಗದ ಶ್ರೀ ದೇವಿ ಪಾತ್ರ ನಿರ್ವಹಣೆಯಲ್ಲಿ ಕೀರ್ತಿ ಶಿಖರವೇರಿ ಮೆರೆದಿದ್ದ  90ರ ವಯೋವೃದ್ದ ಮುಳಿಯಾಲ ಭೀಮ ಭಟ್ಟ ಅವರಿಗೆ ವೀಲ್ ಚೇರ್ ಕೊಡುಗೆ ನೀಡಿ ಪ್ರಶಸ್ತಿ, ಗೌರವಧನ ನೀಡಲಾಯಿತು.


ಶ್ರೀದೇವಿ ಪಾತ್ರ ನಿರ್ವಹಣೆಯಲ್ಲಿ ಸಿದ್ದಿ ಪ್ರಸಿದ್ದಿಪಡೆದು ಮೇಳದಿಂದ ನಿವೃತ್ತರಾಗಿರುವ ಕೋಡಿ ಕೃಷ್ಣ ಗಾಣಿಗ (ಕುಂದಾಪುರ ಕುಷ್ಟ), ಪುಂಡರೀಕಾಕ್ಷ ಉಪಾಧ್ಯಾಯ, ತೋಡಿಕ್ಕಾನ ವಿಶ್ವನಾಥ ಗೌಡ, ಉಮೇಶ ಹೆಬ್ಬಾರ್ ಹಾಗೂ ಕಟೀಲು ಮೇಳ(2 ನೇ ಮೇಳ) ದ ಹಿರಿಯ ಕಲಾವಿದರಾದ ಬಲಿಪ ಪ್ರಸಾದ ಭಾಗವತ, ಶ್ರೀಧರ ಪೂಜಾರಿ ಪಂಜಾಜೆ, ರಮೇಶ ಭಟ್ ಬಾಯಾರು, ಗುರುವಪ್ಪ ಬಾಯಾರು, ಶಶಿಧರ ಶೆಟ್ಟಿ ಪಂಜ, ಅಮ್ಮುಂಜೆ ಮೋಹನ ಅವರಿಗೆ  ರಜತ ಪದಕ ,ರೂ.ಹತ್ತು ಸಾವಿರ ಗೌರವ ಧನ ದೊಂದಿಗೆ ಪೂಲ ವಿಠಲ ಶೆಟ್ಟಿ ಪ್ರಶಸ್ತಿ ಪ್ರದಾನಿಸಲಾಯಿತು.


ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀ ನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಪಡುಬಿದ್ರೆಯ ಬಲ್ಲಾಳ ಅರಸರು, ಎರ್ಮಾಳು ಹೊಸಮನೆ ಉದಯ ಶೆಟ್ಟಿ, ಐಕಳ ವಿಶ್ವನಾಥ ಶೆಟ್ಟಿ, ವಿಶುಕುಮಾರ್ ಉಚ್ಚಿಲ್ ಉಪಸ್ಥಿತರಿದ್ದರು.


ಸೇವಾಕರ್ತ ಸತೀಶ್ ವಿ‌ ಶೆಟ್ಟಿ ಸ್ವಾಗತಿಸಿದರು. ಯಕ್ಷಗಾನ ಅಕಾಡಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ಅವರು ಅಭಿನಂದಿಸಿದರು.


ಕಳೆದ ಇಪ್ಪತ್ತೈದು ವರ್ಷಗಳಿಂದ ಯಕ್ಷಗಾನ ಸೇವೆಗೆ ಸಹಕಾರ ನೀಡಿದ 17 ಮಂದಿಗೆ ಭ್ರಮರಾಂಬಿಕೆಯ  ಚಿತ್ರ ಇರುವ ಬೆಳ್ಳಿಯ ಪದಕ ದೊಂದಿಗೆ ಗೌರವ ಧನ ನೀಡಲಾಯಿತು. ಬಲಿಪ ಪ್ರಸಾದ ಭಾಗವತರ ಔಷಧೋಪಚಾರಕ್ಕೂ ರೂ.ಹದಿನೈದು ಸಾವಿರ ಆರೋಗ್ಯ ನಿಧಿ ನೀಡಲಾಯಿತು.


ನಂತರ "ಶ್ರೀ ದೇವೀ ಮಹಾತ್ಮೆ" ಯಕ್ಷಗಾನ ಬಯಲಾಟ ಜರಗಿತು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post