|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಬಿಕಾ ವಿದ್ಯಾಲಯದಲ್ಲಿ ಶಾರದಾಮಾತೆ ಹಾಗೂ ಶಂಕರಾಚಾರ್ಯರ ಪುತ್ಥಳಿ ಪ್ರತಿಷ್ಠಾಪನೆ

ಅಂಬಿಕಾ ವಿದ್ಯಾಲಯದಲ್ಲಿ ಶಾರದಾಮಾತೆ ಹಾಗೂ ಶಂಕರಾಚಾರ್ಯರ ಪುತ್ಥಳಿ ಪ್ರತಿಷ್ಠಾಪನೆ

ಮೂರ್ತಿಯಲ್ಲಿ ದೈವೀಶಕ್ತಿ ನಿಕ್ಷೇಪಗೊಳ್ಳುತ್ತದೆ : ವೇ.ಮೂ.ಶ್ರೀಕೃಷ್ಣ ಉಪಾಧ್ಯಾಯ


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ(ಸಿಬಿಎಸ್‌ಇ)ದಲ್ಲಿ ಗುರುವಾರ ಶ್ರೀ ಶಾರದಾ ಮಾತೆ ಹಾಗೂ ಶ್ರೀ ಶಂಕರಾಚಾರ್ಯರ ಪುತ್ಥಳಿಗಳನ್ನು ಪ್ರತಿಷ್ಠಾಪಿಸಲಾಯಿತು.


ಈ ಸಂದರ್ಭದಲ್ಲಿ ಗಣಪತಿ ಹವನವನ್ನು ನಡೆಸಿಕೊಟ್ಟು ಮಾತನಾಡಿದ ವೇ.ಮೂ.ಶ್ರೀಕೃಷ್ಣ ಉಪಾಧ್ಯಾಯ ಹಿಂದೂ ಧರ್ಮದೊಳಗೆ ಸೂರ್ಯನನ್ನು ಆರಾಧಿಸುವ ಸೌರ್ಯರು, ಗಣಪತಿಯನ್ನು ಆರಾಧಿಸುವ ಗಾಣಪತ್ಯರು, ವಿಷ್ಣುವನ್ನು ಆರಾಧಿಸುವ ವೈಷ್ಣವರು, ಶಿವನನ್ನು ಆರಾಧಿಸುವ ಶೈವರು ಹೀಗೆ ಪ್ರತಿಯೊಬ್ಬರೂ ತಮ್ಮ ತಮ್ಮ ದೇವರೇ ಶ್ರೇಷ್ಟ ಎಂದು ಕಿತ್ತಾಡುತ್ತಿದ್ದಾಗ ಅವರೆಲ್ಲರನ್ನೂ ಒಗ್ಗೂಡಿಸಿದವರು ಶಂಕರಾಚಾರ್ಯರು. ಪಂಚಾಯತನ ಪೂಜೆಯ ಕಲ್ಪನೆಯನ್ನು ಜನರಿಗೆ ನೀಡಿ ದೇವರೆಲ್ಲರೂ ಒಬ್ಬನೇ ಎಂಬ ಭಾವನೆಯನ್ನು ಮೂಡಿಸಿದವರು ಎಂದು ನುಡಿದರು.


ಮೂರ್ತಿಯ ಪ್ರತಿಷ್ಠಾಪನೆ ಮಾಡಿದ ನಂತರ ಅದು ಕೇವಲ ಮೂರ್ತಿಯಷ್ಟೇ ಅಲ್ಲ. ಅಲ್ಲಿ ದೈವೀಶಕ್ತಿಯ ಸಾಂದ್ರೀಕರಣ ನಡೆಯುತ್ತದೆ. ಹಾಗಾಗಿ ಸಾಕ್ಷಾತ್ ಶಾರದೆಯೇ ಕಣ್ಣ ಮುಂದಿದ್ದಾಳೆ, ಶಂಕರಾಚಾರ್ಯರೇ ನಮ್ಮೆದುರು ಕುಳಿತಿದ್ದಾರೆ ಎಂಬ ಭಾವನೆಯಿಂದ ಅಭಿವಂದಿಸಬೇಕು. ಅಧ್ಯಯನಕ್ಕಾಗಿ ರೂಪುದಳೆದಿರುವ ವಿದ್ಯಾಲಯದಲ್ಲಿ ವಿದ್ಯೆಯ ಅಧಿದೇವತೆಯಾದ ಶಾರದೆ ಹಾಗೂ ಜಗತ್ತಿನೆಡೆಗೆ ಜ್ಞಾನ ಸುಧೆಯನ್ನು ಹರಿಸಿದ ಆದಿ ಶಂಕರರನ್ನು ಪ್ರತಿಷ್ಠಾಪಿಸಿರುವುದು ಅತ್ಯಂತ ಸ್ವಾಗತಾರ್ಹ ವಿಚಾರ ಎಂದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ನಾವು ಯಾವುದೇ ಕಾರ್ಯದಲ್ಲಿ ಜಯಶೀಲರಾಗಬೇಕಾದರೆ ಭಗವಂತನ ಕೃಪೆ ಬೇಕು. ಪ್ರಯತ್ನದೊಂದಿಗೆ ದೇವರ ಆಶೀರ್ವಾದವೂ ಇದ್ದಾಗ ಕೈಗೊಂಡ ಕಾರ್ಯ ಸುಗಮವಾಗಿ ಈಡೇರಲು ಸಾಧ್ಯ. ನಾವು ಮಾಡುವ ತಪ್ಪು ಕೆಲಸಗಳಿಗೆ ಭಗವಂತನಿAದ ಶಿಕ್ಷೆ ಆಗಿಯೇ ಆಗುತ್ತದೆ ಎಂಬುದನ್ನು ಮರೆಯಬಾರದು. ಕೆಟ್ಟದ್ದನ್ನು ಮಾಡದೆ, ನಮ್ಮನ್ನು ನಾವು ತಿದ್ದಿಕೊಳ್ಳುತ್ತಾ ಸಾಗಬೇಕು ಎಂದು ಕರೆ ನೀಡಿದರು.


ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ್ ಕಮ್ಮಜೆ, ಕ್ಯಾಂಪಸ್ ನಿರ್ದೇಶಕ ಭಾಸ್ಕರ ಶೆಟ್ಟಿ, ಅಂಬಿಕಾ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ, ಉಪಪ್ರಾಚಾರ್ಯೆ ಸುಜನಿ ಬೋರ್ಕರ್, ಶಿಕ್ಷಕ ಮತ್ತು ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم