ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಜಾಲತಾಣ ಉದ್ಘಾಟನೆ

Upayuktha
0

 

ಡಿಜಿಟಲೀಕರಣ ಮತ್ತು ಸಂಪರ್ಕ ಸಾಧನೆ ಈಗ ಅನಿವಾರ್ಯ: ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ


ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಹೊಸ ಜಾಲತಾಣದ (http://konkanichairanddepartment.in/) ಉದ್ಘಾಟನಾ ಕಾರ್ಯಕ್ರಮ ಬುಧವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು.


ವೆಬ್‌ಸೈಟ್‌ ಉದ್ಘಾಟಿಸಿ ಮಾತನಾಡಿದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಡಿಜಿಟಲ್‌ ತಂತ್ರಜ್ಞಾನ ನಮಗೀಗ ಪರಕೀಯವಾಗಿ ಉಳಿದಿಲ್ಲ. ಡಿಜಿಟಲೀಕರಣ ಮತ್ತು ಸಂಪರ್ಕ ಸಾಧನೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅದು ನಮಗೀಗ ಅನಿವಾರ್ಯ ಎಂದರು.


ಮುಖ್ಯ ಅತಿಥಿ ವಿಶ್ವ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ನಂದಗೋಪಾಲ್‌ ಶೆಣೈ ಮಾತನಾಡಿ, ಕೊಂಕಣಿ ಭಾಷೆಗೆ ಎಲ್ಲಾ ಸಂಘ ಸಂಸ್ಥೆಗಳು ಕೈಜೋಡಿಸಿ ದುಡಿಯಬೇಕು. ಜಾಲತಾಣಗಳನ್ನು ಆಕರ್ಷಕವಾಗಿಸಬೇಕು. ಯುವಜನತೆಯನ್ನು ವಿದ್ಯಾರ್ಥಿ ವೇತನ ಮೊದಲಾದ ಯೋಜನೆಗಳ ಮೂಲಕ ಆಕರ್ಷಿಸಬೇಕು. ಜನರ ಪಾಲ್ಗೊಳ್ಳುವಿಕೆ ಇಲ್ಲಿ ತುಂಬಾ ಮುಖ್ಯ. ಜಾಲತಾಣಗಳು ಜನಾಭಿಪ್ರಾಯ ರೂಪಿಸಲು ನೆರವಾಗಬೇಕು ಎಂದರು.


ಪ್ರಾಂಶುಪಾಲೆ ಡಾ. ಅನಸೂಯ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ. ಜಯವಂತ್‌ ನಾಯಕ್‌ ಕಾರ್ಯಕ್ರಮ ನಿರೂಪಿಸಿದರು. ಕೊಂಕಣಿ ಸ್ನಾತಕೋತ್ತರ ಅಧ್ಯಯನ ಪೀಠದ ಸಂಯೋಜಕ ಡಾ. ದೇವದಾಸ್‌ ಪೈ ಧನ್ಯವಾದ ಸಮರ್ಪಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಂಯೊಜಕ ಡಾ. ಗಣೇಶ್‌ ಅಮೀನ್‌ ಸಂಕಮಾರ್‌ ಮೊದಲಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top