ಕ್ರಿಯಾಶೀಲ ಕಾರ್ಯಗಳಿಗೆ ಎಸ್.ಡಿ.ಎಮ್. ಸಂಸ್ಥೆ ಚೈತನ್ಯ: ಸತೀಶ್ ಚಂದ್ರ. ಎಸ್

Upayuktha
0

 

ಉಜಿರೆ ಡಿ 31: ಎಸ್.ಡಿ.ಎಮ್ ಸಂಸ್ಥೆಯ ವಾತಾವರಣ, ಸಹುದ್ಯೋಗಿಗಳ ಬೆಂಬಲ,ಹಿರಿಯರ ಮಾರ್ಗದರ್ಶನವೇ ಎಲ್ಲಾ ಕಾರ್ಯಗಳ ಹಿಂದಿನ ಚೈತನ್ಯ ಎಂದು ಉಜಿರೆ ಎಸ್.ಡಿ.ಎಮ್. ಪದವಿ ಕಾಲೇಜಿನ ಪ್ರಾಂಶುಪಾಲ ಸತೀಶ್ ಚಂದ್ರ.ಎಸ್ ಬೀಳ್ಕೊಡುಗೆಯ ಸಂದರ್ಭದಲ್ಲಿ ಹೇಳಿದರು.


36 ವರ್ಷಗಳ ಸಮರ್ಥ ಸೇವೆಯ ನಂತರ ಡಾ.ಸತೀಶ್ ಚಂದ್ರ ಅವರಿಗೆ ಎಸ್.ಡಿ.ಎಮ್. ಕಾಲೇಜಿನ ಪ್ರಾಧ್ಯಾಪಕ ಸಂಘ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.


ಈ ವಿದ್ಯಾಸಂಸ್ಥೆಯನ್ನು ಬಹಳ ಹತ್ತಿರದಿಂದ ಬಲ್ಲವನ ನಾನು. ವಿದ್ಯಾರ್ಥಿಯಾಗಿ, ಉಪನ್ಯಾಸಕನಾಗಿ, ವಿಭಾಗದ ಮುಖ್ಯಸ್ಥನಾಗಿ, ಪ್ರಾಂಶುಪಾಲನಾಗಿ ಹಲವು ಅನುಭವಗಳನ್ನು ನೀಡಿದ ಗುರು ಎಸ್.ಡಿ.ಎಮ್ ಸಂಸ್ಥೆ. ಸಮಾಜ ಇಂದು ನನ್ನನ್ನು ಗುರುತಿಸುತ್ತಿದೆ ಎಂದರೆ ಅದಕ್ಕೆ ಕಾರಣ ಈ ಸಂಸ್ಥೆ. ಇಂದು ಹೆಮ್ಮೆ ಹಾಗೂ ದುಃಖ ಮಿಶ್ರಿತ ದ್ವಂದ್ವದ ಸುಳಿಯಲ್ಲಿ ನಾನಿದ್ದೇನೆ ಎಂದರು.


ಉದಯ ಚಂದ್ರ ಅವರ ನಾಯಕತ್ವ ನಡೆಯನ್ನು ಬಲ್ಲೆ. ಕ್ರಿಯಾಶೀಲ, ಸಾಹಸಿ ವ್ಯಕ್ತಿ ಈತ. ಕಾಲೇಜಿನ ಮುಂದಿನ ದಿನಗಳ ಬೆಳವಣಿಗೆಗೆ ಸೂಕ್ತ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ನೂತನ ಪ್ರಾಂಶುಪಾಲ ಡಾ.ಉದಯ ಚಂದ್ರ ಅವರಿಗೆ ಶುಭ ಹಾರೈಸಿದರು.


ಪ್ರಾಂಶುಪಾಲ ಡಾ.ಸತೀಶ್ ಅವರನ್ನುದ್ದೇಶಿಸಿ ಮಾತನಾಡಿದ ನಿಯೋಜಿತ ಪ್ರಾಂಶುಪಾಲ ಡಾ.ಉದಯ ಚಂದ್ರ ಗೆಳೆಯರಾಗಿ ವೃತ್ತಜೀವನಕ್ಕೆ ಜೊತೆಯಾಗಿ ಪಾದಾರ್ಪಣೆ ಮಾಡುವುದು ಸಹಜ. ಆದರೆ ವೃತ್ತಿ ಮಾತ್ಸರ್ಯ ಇರದೆ ಅದೇ ಸ್ನೇಹದೊಂದಿಗೆ ಇಂದಿನವರೆಗೂ ಕಾರ್ಯವೃತ್ತರಾಗಿರುವುದು ಶ್ರೇಷ್ಠತೆ. ಒಬ್ಬ ಗೆಳೆಯನಾಗಿಯೂ, ಸಹುದ್ಯೋಗಿಯಾಗಿಯೂ ಸತೀಶ್ ಚಂದ್ರ ಅವರನ್ನು ಬಲ್ಲೆ. ಅವರ ಹೆಗಲ ಮೇಲಿದ್ದ ಬಹುದೊಡ್ಡ ಜವಾಬ್ದಾರಿಯನ್ನು ನನಗೆ ಹಸ್ತಾಂತರಿಸಿದ್ದಾರೆ. ಅವರ ಸುದೀರ್ಘ ಕಾಲದ ನಡೆಯೇ ನನಗೆ ಮಾರ್ಗಸೂಚಿ ಎಂದರು.


ಓರ್ವ ಸಂಸ್ಥೆಯ ಮುಖ್ಯಸ್ಥನ ಸ್ಥಾನಕ್ಕೆ ಮೂರ್ತಿವೆತ್ತ ಸ್ವರೂಪವೇ ಸತೀಶ್ ಚಂದ್ರ. ಪ್ರತಿಯೊಂದು ಹಂತದ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದ ಸಮರ್ಥ ಈತ. ಕಾಲೇಜಿನ ಬೆಳವಣಿಗೆಯಲ್ಲಿ ಇವರ ಬಹುದೊಡ್ಡ ಕೊಡುಗೆ ಇದೆ. ಸೂಕ್ಷ್ಮ ಸ್ವಭಾವ, ಮೃದುವಾಷಿ, ವಿವಿಧ ಕ್ಷೇತ್ರಗಳ ಗಂಧ ಬಲ್ಲ ಆಡಳಿತ ನಾಯಕ ಇವರು. ಪ್ರಾಂಶುಪಾಲ ಎಂಬ ಹಳೆ ಉಡುಪನ್ನು ಕಳಚಿ ನಿವೃತ್ತಿಯ ಹೊಸ ಉಡುಪನ್ನು ಧರಿಸುತ್ತಿದ್ದಾರೆ. ನಿವೃತ್ತರಾದರು ನಮ್ಮ ಬೆಂಬಲಕ್ಕೆ ಮಾರ್ಗದರ್ಶಕರಾಗಿ ಸದಾ ಇರುತ್ತಾರೆ ಎಂದು ಬೌತಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್.ಎನ್.ಕಾಕತ್ಕರ ಹೇಳಿದರು.


ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಯ ನೂತನ ಕಾರ್ಯನಿರ್ವಹಣಾಧಿಕಾರಿ ಎಮ್.ವೈ.ಹರೀಶ್ ಪ್ರಾಂಶುಪಾಲರಿಗೆ ಶುಭಕೋರಿದರು. ಉಜಿರೆ ಎಸ್.ಡಿ.ಎಮ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್ ಚೌಟ,ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಯ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಲ್ಲಾ ವಿಭಾಗಗಳ ಉಪನ್ಯಾಸಕರು, ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು. ಕಾಲೇಜಿನ ಪ್ರಾಧ್ಯಾಪಕ ಸಂಘದ ಅಧ್ಯಕ್ಷ ಜಿ.ಆರ್.ಭಟ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top