ಮಂಗಳೂರು: ವಿವಿ ಕಾಲೇಜಿಗೆ ರೂಸಾ ತಂಡ ಭೇಟಿ, ಮೆಚ್ಚುಗೆ

Upayuktha
0

 


ಮಂಗಳೂರು: ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ (RUSA) ದ ಭೌತಿಕ ಪರಿಶೀಲನಾ ಸಮಿತಿ ನಗರದ ವಿಶ್ವವಿದ್ಯಾನಿಲಯಕ್ಕೆ ಇತ್ತೀಚೆಗೆ ಭೇಟಿ ನೀಡಿ ರೂಸಾ ಅನುದಾನದಡಿ ಕಾಲೇಜಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿತು. 


ಸಮಿತಿಯ ಮುಖ್ಯಸ್ಥ ರಾಜ್ಯ ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಕೆ ಟಿ ಮಂಜುನಾಥ್, ಸದಸ್ಯ ರಾಜ್ಯ ರೂಸಾ ನೋಡಲ್ ಅಧಿಕಾರಿ ಡಾ. ಭಾಗ್ಯವಾನ್ ಮುದಿಗೌಡ ಹಾಗೂ ಸಂಯೋಜಕ ಮಹಾರಾಣಿ ಕ್ಲಸ್ಟರ್ ಕಾಲೇಜಿನ ಡಾ. ನಾಗೇಶ್ ಬಾಬು ಅವರನ್ನೊಳಗೊಂಡ ತಂಡ ತರಗತಿ ಕೊಠಡಿಗಳು, ಗಣಿತ ಪ್ರಯೋಗಾಲಯ, ಶೌಚಾಲಯಗಳೂ ಸೇರಿದಂತೆ ವಿವಿಧ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿತು. ಪ್ರಾಧ್ಯಾಪಕರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ, ಎಸ್ಎಸ್ಪಿ ವಿದ್ಯಾರ್ಥಿವೇತನ ಕುರಿತು ಮಾಹಿತಿ ಹಂಚಿಕೊಂಡರು.


ನಂತರ ನಡೆದ ಸಭೆಯಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ, 154 ವರ್ಷಗಳ ಇತಿಹಾಸವಿರುವ ಕಾಲೇಜಿನ ಅನನ್ಯತೆಯ ಪರಿಚಯ ಮಾಡಿಸುವುದರ ಜೊತೆಗೆ ಅನುದಾನ ಬಳಕೆಯ ವಿವರ ನೀಡಿದರು. ಕಾಲೇಜು ರೂಸಾ 2.0 ರ ಅಡಿಯಲ್ಲಿ ಬಿಡುಗಡೆಯಾದ ಒಂದು ಕೋಟಿ ರೂಪಾಯಿ ಅನುದಾನದಲ್ಲಿ ನಡೆದ ನಿರ್ಮಾಣ, ನವೀಕರಣ ಮತ್ತು ಉಪಕರಣಗಳ ಖರೀದಿ ನಡೆಸಿದೆ. 


ಮಂಗಳೂರು ವಿಶ್ವವಿದ್ಯಾನಿಲಯದ ರೂಸಾ ನೋಡಲ್ ಅಧಿಕಾರಿ ಪ್ರೊ. ಕೆ ಎಸ್ ಜಯಪ್ಪ, ವಿವಿಯ ಕಾರ್ಯನಿರ್ವಾಹಕ ಎಂಜಿನಿಯರ್ ದೇವಿಪ್ರಸಾದ್, ಕಾಲೇಜಿನ ರೂಸಾ ಸಂಯೋಜಕಿ ಡಾ. ಶೋಭಾ, ಗಣಿತ ವಿಭಾಗ ಮುಖ್ಯಸ್ಥ ಪ್ರೊ. ಸುಬ್ರಹ್ಮಣ್ಯ ಭಟ್ ಎಸ್ ಮೊದಲಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top