ಇವರು ಯುವ ಯೋಗಪಟು ಕಾವ್ಯ ದೇವಿಪ್ರಸಾದ್ ಭಟ್. ಕುರಿಯತ್ತಡ್ಕ ನಿವಾಸಿ ದೇವಿಪ್ರಸಾದ ಭಟ್ ಅವರ ಪತ್ನಿ.
ಕಳೆದ 4 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದು ಹಲವರು ವೇದಿಕೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
2 ಬಾರಿ ಜಿಲ್ಲಾ ಮಟ್ಟದ ಪ್ರಶಸ್ತಿ, 3 ಬಾರಿ ರಾಜ್ಯ ಮಟ್ಟ ಹಾಗೂ 3 ಬಾರಿ ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಬಂದಿದೆ.
ಎವರೆಸ್ಟ್ ಯೋಗ ಇನ್ಸ್ಟಿಟ್ಯೂಟ್ ಲುದನ ಹಾಗೂ ನ್ಯಾಷನಲ್ ಅಕಾಡೆಮಿ ಮಹಾರಾಷ್ಟ್ರ ಇದರ ನೇತೃತ್ವದಲ್ಲಿ ನಡೆದ ಸ್ಪರ್ಧೆಯಲ್ಲಿ ಅತ್ಯುತ್ತಮ ರಾಷ್ಟ್ರೀಯ ಮಹಿಳಾ ಪ್ರಶಸ್ತಿ ಲಭಿಸಿದೆ. ಇಂಡಿಯಾ ಸೂಪರ್ ಟ್ಯಾಲೆಂಟ್ ಸ್ಪರ್ಧೆಯಲ್ಲಿ ಟಾಪ್ 20ಗೆ ಆಯ್ಕೆಯಾಗಿದ್ದಾರೆ.
ಪತಂಜಲಿ ಯೋಗ ಸಂಸ್ಥೆಯವರು ನಡೆಸಿದ ಸ್ಪರ್ಧೆಯಲ್ಲಿ 'ಎ' ಗ್ರೇಡ್ ಪಡೆದಿದ್ದಾರೆ.
ನವೆಂಬರ್ನಲ್ಲಿ ನಡೆದ ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ರಬ್ಬಾ ವರ್ಲ್ಡ್ ರೆಕಾರ್ಡ್ನಲ್ಲಿ ಭಾಗವಹಿಸಿ ದಾಖಲೆ ಮಾಡಿರುತ್ತಾರೆ.
2021 ಡಿಸೆಂಬರ್ನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಶೀರ್ಷಾಸನದಲ್ಲಿ (ಯೋಗ) 12 ನಿಮಿಷ ಹಾಗೂ 40 ಸೆಕೆಂಡ್ ನಿಂತು ಪಶ್ಚಿಮ ಬಂಗಾಳದ ಶ್ರೀಜಿತಾ ಗ್ರಾನ್ಸ್ ಇವರ 5 ನಿಮಿಷದ ರೆಕಾರ್ಡ್ ಅನ್ನು ಬ್ರೇಕ್ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೊಸ ದಾಖಲೆಯನ್ನು ತಮ್ಮ ಹೆಸರಿಗೆ ಪಡೆದಿರುತ್ತಾರೆ.
*******
ಪುತ್ತೂರು ತಾಲೂಕು ಪಾಲ್ತಾಡಿ ಗ್ರಾಮದ ಮಾಲೆತೋಡಿಯ ಪದ್ಮನಾಭ ಭಟ್ ಹಾಗೂ ಪುಷ್ಪ ಇವರ ಮಗಳು ಕಾವ್ಯ. ಮಾಲೆತೋಡಿ, ಪೆರ್ಲಂಪಾಡಿ, ಬೆಳ್ಳಾರೆ, ಪೆರುವಾಜೆಯಲ್ಲಿ ಓದು ಮುಗಿಸಿದ್ದು ಬಿ.ಎ ಪದವಿ ಪಡೆದಿದ್ದಾರೆ.
ಸಣ್ಣ ವಯಸ್ಸಿನಲ್ಲಿಯೇ ಯೋಗ, ಸ್ಪೋರ್ಟ್ಸ್ ಮತ್ತು ಡಾನ್ಸ್ ಹೀಗೆ ಅನೇಕ ಚಟುವಟಿಕೆಯಲ್ಲಿ ಬಹಳ ಆಸಕ್ತಿ ಹೊಂದಿದ್ದ ಕಾವ್ಯ ಅವರು, ಶಾಲಾ ಕಾಲೇಜು ದಿನಗಳಲ್ಲಿ ಸಣ್ಣ ಸಣ್ಣ ವೇದಿಕೆ ಬಿಟ್ಟರೆ ಬೇರೆಲ್ಲೂ ಭಾಗವಹಿಸಲಿಲ್ಲ. ಹಳ್ಳಿಯ ಪರಿಸರದ ಜೀವನವಾದ್ದರಿಂದ ಹೆಚ್ಚಿನ ಅವಕಾಶಗಳೂ ಒದಗಿ ಬಂದಿರಲಿಲ್ಲ. ಹಳ್ಳಿ ಪ್ರದೇಶದಲ್ಲಿ ಬೆಳೆದ ಕಾರಣ ಕಲೆ ಸಾಹಿತ್ಯಕ್ಕೆ, ಸಾಧನೆಗೆ ಹೆಚ್ಚು ಮನ್ನಣೆ ಕೊಡಲು ಸಾಧ್ಯವಾಗಿಲ್ಲ.
ಕಾಲೇಜು ಜೀವನ ಮುಗಿಯುತ್ತಿದಂತೆ ಮದುವೆ ಆಯಿತು, ಕೈಹಿಡಿದ ಪತಿ, ಕುರಿಯತ್ತಡ್ಕದ ದೇವಿಪ್ರಸಾದ ಭಟ್ ಮತ್ತೆ ಕಕಾವ್ಯ ಅವರ ಕನಸಿಗೆ ಕೈ ಜೋಡಿಸಿದರು. ಸ್ಟಿಚಿಂಗ್, ಡ್ರೈವಿಂಗ್ (ಇದರಲ್ಲಿ ವಿಶೇಷವಾಗಿ ಬುಲೆಟ್ ರೈಡಿಂಗ್), ಸ್ವಿಮ್ಮಿಂಗ್ ಹಾಗೂ ಜೊತೆ ಯೋಗ ಅಭ್ಯಾಸಗಳನ್ನು ಮಾಡಿಕೊಂಡರು.
ಇವರು ಕಳೆದ 4 ವರುಷಗಳಿಂದ ಗುರುಗಳಾದ ಸಂಗೀತ ಹಾಗೂ ಸುರೇಶ್ ಸರ್ ಅವರ ಉತ್ತಮ ಮಾರ್ಗದರ್ಶನದೊಂದಿಗೆ ಯೋಗವನ್ನು ಕಲಿಯುತ್ತಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಲು ಬೆನ್ನೆಲುಬಾಗಿ ನಿಂತ ಪತಿಗೆ ಥ್ಯಾಂಕ್ಸ್ ಹೇಳಲು ಕಾವ್ಯ ಅವರು ಮರೆಯುವುದಿಲ್ಲ.
ಅವರು ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲಿ ಎಂಬುದು ನಮ್ಮೆಲ್ಲರ ಹಾರೈಕೆ.
-ಅನರ್ಘ್ಯ ಭಟ್ ಕುಳಮರ್ವ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ