ಗುರಿ ಸಾಧನೆಗೆ ಅವಿರತ ಶ್ರಮ ಅಗತ್ಯ: ಪ್ರೊ. ವಿಷ್ಣುಗಣಪತಿ ಭಟ್

Upayuktha
0

 

ಪುತ್ತೂರು ಡಿ.15: ಗುರಿಯನ್ನು ಮೊದಲೇ ನಿಶ್ಚಯ ಮಾಡಿರಬೇಕು. ಶಿಕ್ಷಣ ಎಲ್ಲಾ ಮುಗಿದ ಬಳಿಕ ಉದ್ಯೋಗದ ಬಗ್ಗೆ ಯೋಚನೆ ಮಾಡಿದರೆ ಪ್ರಯೋಜನ ಇಲ್ಲ. ಅದಕ್ಕಾಗಿ ಮೊದಲೇ ಗುರಿಯ ಬಗ್ಗೆ ಯೋಚನೆ ಮಾಡಿ ನಾವು ನಮ್ಮ ದಾರಿಯನ್ನು ಹುಡುಕಬೇಕು. ಗುರಿಯನ್ನು ತಲುಪಬೇಕಾದರೆ ಪ್ರತಿದಿನಲೂ ನಾವು ಶ್ರಮ ಪಡಬೇಕು. ಕಷ್ಟ ಪಟ್ಟರೆ ಗೆಲುವಿಗೆ ಖಂಡಿತ ದಾರಿ ಸಿಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್ ಹೇಳಿದರು.


ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗವು ‘ಸ್ವಯಂ' ಆಪ್ ಮೂಲಕ ಕೌಶಲ್ಯ ಅಭಿವೃದ್ಧಿ ಪಡಿಸಿಕೊಳ್ಳುವುದರ ಕುರಿತಾಗಿ ಆಯೋಜಿಸಿದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು.


ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ, ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಪದವಿ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ಲಕ್ಷ್ಮಿ ವಿ. ಭಟ್ ವಿದ್ಯಾರ್ಥಿಗಳು ಮೊದಲೇ ಉದ್ಯೋಗದ ಬಗ್ಗೆ ಯೋಚನೆ ಮಾಡಬೇಕು. ಡಿಗ್ರಿ ಆದಮೇಲೆ ಏನು ಮಾಡುವುದು, ಯಾವ ಉದ್ಯೋಗಕ್ಕೆ ಸೇರುವುದು ಎಂದು ಮೊದಲೇ ನಿರ್ಧಾರ ಮಾಡಬೇಕು. ಒಳ್ಳೆಯ ಗುರಿ ಎಂದರೆ ಶಿಕ್ಷಣ ಮುಗಿಯುವ ಮೊದಲೇ ಗುರಿಯ ಬಗ್ಗೆ ಯೋಚನೆ ಮಾಡುವುದು ಎಂದರು. 'ಸ್ವಯಂ ಪ್ರಭ' ಎಂಬ ಡಿಜಿಟಲ್ ಪ್ಲಾಟ್ ಫಾರಂನ ದೃಷ್ಟಿಕೋನ ಮತ್ತು ಇದರ ಆನ್ಲೈನ್ ಸರ್ಟಿಫಿಕೇಟ್ ನ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.


ಪ್ರಧಾನಿ ನರೇಂದ್ರ ಮೋದಿಯ ಮೂಲಕ ಬಿಡುಗಡೆಯಾದ 'ಸ್ವಯಂ ಪ್ರಭ' ಎಂಬ ಪ್ಲಾಟ್ ಫಾರಂ ನ ಕುರಿತು ವಿದ್ಯಾರ್ಥಿ ಗಳಿಗೆ ಮಾಹಿತಿ ಮತ್ತು ಭಾರತೀಯ ನಾಗರೀಕ ಯುವಜನತೆಗೆ ಈ ಡಿಜಿಟಲ್ ಆನ್ಲೈನ್ ಶಿಕ್ಷಣ ಹೇಗೆ ಉಪಾಯಕಾರಿ ಮತ್ತು ಆ ಆನ್ಲೈನ್ ತರಗತಿಗೆ ಹಾಜರಾಗುವುದು ಹೇಗೆ ಎಂದು ವಿವೇಕಾನಂದ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರವಿಕಲಾ ತಿಳಿಸಿದರು. ಈ ಆನ್ಲೈನ್ ತರಗತಿಯ ನೋಂದಣಿ ಪ್ರಕ್ರಿಯೆಯ ಕುರಿತು ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿಯರಾದ ವಿನುತ ಮತ್ತು ಜ್ಯೋತಿ ಎಂ. ಎಂ. ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಅಂಕಿತ, ಭಾಗ್ಯಶ್ರೀ, ಪುನೀತ್ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಶ್ವಿನಿ ಕಾರ್ಯಕ್ರಮವನ್ನು ಪ್ರಾರ್ಥಿಸಿ, ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ವಿನುತ ಸ್ವಾಗತಿಸಿ, ಜ್ಯೋತಿ ವಂದಿಸಿ, ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸ್ವಸ್ತಿ. ವಿ. ಹೆಚ್ ಕಾರ್ಯಕ್ರಮವನ್ನು ನಿರೂಪಿಸಿದರು.


ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಮೂರು ರೀತಿಯ ತರಬೇತಿ ವಿಭಾಗ ನಡೆಯಿತು. ಈ ಸಂದರ್ಭ ಮುಂದಿನ ದಿನಗಳಲ್ಲಿ ವಾಣಿಜ್ಯಶಾಸ್ತ್ರ ವಿಭಾಗವು ಕನ್ಸೂಮರ್ ಬಿಹೇವಿಯರ್ ಮತ್ತು ಫಂಡಮೆಂಟಲ್ಸ್ ಆಫ್ ಬ್ಯಾಂಕಿಂಗ್ ಆಂಡ್ ಇನ್ಶೂರೆನ್ಸ್ ಎಂಬ ವಿಷಯಗಳ ಬಗ್ಗೆ ಆನ್ಲೈನ್ ಸರ್ಟಿಫಿಕೇಟ್ ಕೋರ್ಸ್ಗಳನ್ನು ಕೂಡ ನಡೆಸಲಿದ್ದು ಈ ಕುರಿತಾದ ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲಾಯಿತು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top