|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೃಹರಕ್ಷಕ ದಳ ಉಳ್ಳಾಲ ಘಟಕದ ಗೃಹರಕ್ಷಕರಿಗೆ ಪದೋನ್ನತಿ

ಗೃಹರಕ್ಷಕ ದಳ ಉಳ್ಳಾಲ ಘಟಕದ ಗೃಹರಕ್ಷಕರಿಗೆ ಪದೋನ್ನತಿ

ಪದೋನ್ನತಿಯಿಂದ ಹುಮ್ಮಸ್ಸು ಹೆಚ್ಚುತ್ತದೆ: ಡಾ. ಚೂಂತಾರು


ಮೇರಿಹಿಲ್‌: ಡಿಸೆಂಬರ್ 17, ಶುಕ್ರವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ ಮೇರಿಹಿಲ್‌ನಲ್ಲಿ ಉಳ್ಳಾಲ ಘಟಕದ ಗೃಹರಕ್ಷಕರಿಗೆ ಪದೋನ್ನತಿ ಕಾರ್ಯಕ್ರಮವು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಈ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ಗೃಹರಕ್ಷಕದಳ ಇಲಾಖೆಯಲ್ಲಿ 1000 ಗೃಹರಕ್ಷಕರು ಕೆಲಸ ಮಾಡುತ್ತಿದ್ದಾರೆ, ಈ ಇಲಾಖೆಯಲ್ಲಿ ಕೆಲಸ ಮಾಡುವಾಗ ಅವರ ಸೇವೆಯನ್ನು ಗುರುತಿಸಿ ಕಾಲ ಕಾಲಕ್ಕೆ ಅವರಿಗೆ ಪದೋನ್ನತಿ ನೀಡುವುದು ನಮ್ಮ ಇಲಾಖೆಯ ಕರ್ತವ್ಯ. ಯಾವುದೇ ಫಲಾಪೇಕ್ಷೆ ಇಲ್ಲದೆ ನಿಷ್ಕಾಮ ಸೇವೆ ಸಲ್ಲಿಸುತ್ತಾ ಕನಿಷ್ಠ ಗೌರವಧನಕ್ಕೆ ಕೆಲಸ ಮಾಡುವ ಗೃಹರಕ್ಷಕರಿಗೆ ಕಾಲಕಾಲಕ್ಕೆ ಸಿಗಬೇಕಾದ ಪದೋನ್ನತಿಯನ್ನು ಕೊಟ್ಟರೆ ಅವರಿಗೆ ಇನ್ನಷ್ಟು ಹುರುಪಿನಿಂದ ಕೆಲಸ ಮಾಡಲು ಹುಮ್ಮಸ್ಸು, ಪ್ರೋತ್ಸಾಹ ಸಿಗುತ್ತದೆ. ಈ ನಿಟ್ಟಿನಲ್ಲಿ ಉಳ್ಳಾಲ ಘಟಕದ ಪದೋನ್ನತಿಯ ಅರ್ಹತೆ ಇರುವ ಗೃಹರಕ್ಷಕರಿಗೆ ಪದೋನ್ನತಿ ನೀಡಿ ಗೌರವಿಸುತ್ತಿದ್ದೇವೆ ಎಂದು ನುಡಿದರು.


ಈ ಕಾರ್ಯಕ್ರಮದಲ್ಲಿ ಉಳ್ಳಾಲ ಘಟಕದಲ್ಲಿ ಸುಮಾರು 25 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿರುವ ಗೃಹರಕ್ಷಕರಾದ ಸವೇರಾ ಡಿ’ಸೋಜಾ, ಮೆಟಲ್ ಸಂಖ್ಯೆ 18 ಇವರನ್ನು ಅಸಿಸ್ಟೆಂಟ್ ಸೆಕ್ಷನ್ ಲೀಡರ್ (ಎಎಸ್‌ಎಲ್) ನಿಂದ ಸೆಕ್ಷನ್ ಲೀಡರ್ (ಎಸ್‌ಎಲ್) ಹುದ್ದೆಗೆ ಹಾಗೂ ಗೃಹರಕ್ಷಕದಳದಲ್ಲಿ ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕರಾದ ಸೆಲೆಸ್ಟಿನ್ ಮೊಂತೇರೋ, ಮೆಟಲ್ ಸಂಖ್ಯೆ 154 ಮತ್ತು ಗೃಹರಕ್ಷಕದಳದಲ್ಲಿ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಧನಂಜಯ್, ಮೆಟಲ್ ಸಂಖ್ಯೆ 29, ಇವರುಗಳನ್ನು ಗೃಹರಕ್ಷಕ ಹುದ್ದೆಯಿಂದ ಅಸಿಸ್ಟೆಂಟ್ ಸೆಕ್ಷನ್ ಲೀಡರ್ (ಎಎಸ್‌ಎಲ್) ಹುದ್ದೆಗೆ ಪದೋನ್ನತ್ತಿ ನೀಡಿ ಆದೇಶ ಪತ್ರವನ್ನು ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಕಛೇರಿ ಅಧೀಕ್ಷಕರಾದ ಶ್ರೀ ರತ್ನಾಕರ, ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಭಾಸ್ಕರ್ ಎಂ., ಗೃಹರಕ್ಷಕರಾದ ಸುನೀಲ್, ಸಮದ್, ರಂಜಿತ್, ಪುಷ್ಪಲತಾ ಬಜಾಲ್, ವಿಟ್ಲ ಘಟಕದ ಪ್ರಭಾರ ಘಟಕಾಧಿಕಾರಿ ಸಂಜೀವ ಎಂ. ಹಾಗೂ ಮಂಗಳೂರು ಘಟಕದ ಸುನೀಲ್ ಕುಮಾರ್, ದಿವಾಕರ್, ದುಷ್ಯಂತ್, ರೇವತಿ, ಚಂಪಾ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم