ಸಂಶೋಧನೆಯಲ್ಲಿ ಗುರುರಾಜ ಭಟ್ಟರ ಸಾಧನೆ ಮೀರುವುದು ಸುಲಭವಲ್ಲ: ಡಾ. ಸತೀಶ್ ಕುಮಾರ್ ಶೆಟ್ಟಿ

Upayuktha
0

ಮಂಗಳೂರು: ತುಳುನಾಡು ಮಾತ್ರವಲ್ಲದೆ, ರಾಜ್ಯ, ರಾಷ್ಟ್ರದ ಇತಿಹಾಸಕ್ಕೆ ಪಾದೆಕಲ್ಲು ಗುರುರಾಜ ಭಟ್ಟರ ಕೊಡುಗೆ ಅನನ್ಯ. ಅವರು ಜನರಿಗೆ ಇತಿಹಾಸದ ಬಗ್ಗೆ ಕುತೂಹಲ ಮೂಡಿಸುವ ಜೊತೆಗೆ ಐತಿಹಾಸಿಕ ಕುರುಹುಗಳನ್ನು ರಕ್ಷಿಸುವಂತೆ ಕರೆ ನೀಡಿದ್ದಾರೆ ಎಂದು ಬೆಸೆಂಟ್‌ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ ಕುಮಾರ್ ಶೆಟ್ಟಿ ಹೇಳಿದರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗ ಮತ್ತು 'ಮಾನುಷ' ಆಯೋಜಿಸುತ್ತಿರುವ ತುಳುನಾಡು ಮತ್ತು ಕೊಡಗಿನ ಇತಿಹಾಸ ಕುರಿತ ವೆಬಿನಾರ್ ಸರಣಿಯ 11 ನೇ ಭಾಗವಾಗಿ ತುಳುನಾಡ ಇತಿಹಾಸಕ್ಕೆ ಪಿ ಗುರುರಾಜ ಭಟ್ಟರ ಕೊಡುಗೆಗಳ ಬಗ್ಗೆ ಮಾತನಾಡಿದ ಅವರು, ಗುರುರಾಜ ಭಟ್ಟರು ಯಾವುದೇ ಆಕರ ಗ್ರಂಥಗಳು ಇಲ್ಲದಿದ್ದರೂ ತಳಮಟ್ಟದ ಸಂಶೋಧನೆಗೆ ಆಧ್ಯತೆ ನೀಡಿದರು. ದೃಕ್‌ ಶಿಲಾಯುಗ, ಸ್ಥಳನಾಮಗಳು, ದೇವಾಲಯಗಳ ಇತಿಹಾಸ, ವಿಗ್ರಹಗಳು, ಸಾಮಾಜಿಕ ಇತಿಹಾಸದ ಬಗ್ಗೆ ಅವರ ಸಂಶೋಧನೆ ಅನನ್ಯ. ಸ್ವಪ್ರಯತ್ನದಿಂದ ಸುಮಾರು 12,000 ಶಾಸನಗಳು ಹಾಗೂ 2000 ಸ್ಮಾರಕಗಳನ್ನು ಪತ್ತೆಹಚ್ಚಿರುವುದು ಅವರ ಸಂಶೋಧನೆಯ ಅಗಾಧತೆಗೆ ಸಾಕ್ಷಿ ಎಂದರು.


"ತುಳುನಾಡು, ಭಾಷೆ, ದೇವರು-ದೈವಗಳು, ಪಾಡ್ದನಗಳು, ಆಡಳಿತ, ಶಾಸನಗಳ ಕುರಿತ ಸಂಶೋಧನೆಗೆ ಗುರುರಾಜ ಭಟ್ಟರು ಆಧ್ಯತೆ ನೀಡಿದರು. ಅವರ ಸಾಧನೆಗೆ ಬಡತನ ಅಡ್ಡಿಯಾಗಲಿಲ್ಲ. ಪ್ರತಿಫಲಾಪೇಕ್ಷೆಯಿಲ್ಲದೆ, ಅಚಲ ಬದ್ಧತೆಯೊಂದಿಗೆ ಕೆಲಸ ಮಾಡಿದ ಗುರುರಾಜ ಭಟ್ಟರ ಸಾಧನೆಯನ್ನು ಮೀರುವುದು ಸುಲಭವಲ್ಲ" ಎಂದರು. ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯ ರೈ ಮಾತನಾಡಿ, ವೆಬಿನಾರ್‌ ಸರಣಿಯ ಮೂಲಕ ಜ್ಞಾನದ ಹಂಚಿಕೆಯಾಗುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.


ಕಾಲೇಜಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಡಾ. ಗಣಪತಿ ಗೌಡ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ಮೇಘಾ ಧನ್ಯವಾದ ಸಮರ್ಪಿಸಿದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top