|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಎದೆ ತುಂಬಿ ಹಾಡುವೆನು: ಗಾಯಕ ಚಿನ್ಮಯ್ ವಿನ್ನರ್

ಎದೆ ತುಂಬಿ ಹಾಡುವೆನು: ಗಾಯಕ ಚಿನ್ಮಯ್ ವಿನ್ನರ್

ಬೆಂಗಳೂರು: ಹಲವು ವರ್ಷಗಳಿಂದ ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ " ಎದೆ ತುಂಬಿ ಹಾಡುವೆನು" ಜನಪ್ರಿಯ ಸಂಗೀತ ಸ್ಪರ್ಧಾ ಸರಣಿ ಕಲರ್ಸ್ ಕನ್ನಡದಲ್ಲಿ ಕಳೆದ ಆಗಸ್ಟ್ ತಿಂಗಳಿಂದ ಪ್ರಸಾರವಾಗಿದ್ದು ಗಾಯಕ ಚಿನ್ಮಯ್ ಜೋಷಿ ಕಾರ್ಯಕ್ರಮದ ವಿನ್ನರ್ ಆಗಿದ್ದಾರೆ.

ಶನಿವಾರ ಹಾಗೂ ಭಾನುವಾರ ನಡೆದ ಸ್ಪರ್ಧಾ ಸಮರದಲ್ಲಿ ಅಂತಿಮ  ಹಂತ ತಲುಪಿದ 6 ಸ್ಪರ್ಧಿಗಳ ಪೈಕಿ ನಾಲ್ವರು ಗಾಯಕರು ಅಂತಿಮ ಸುತ್ತು ಪ್ರವೇಶಿಸಿದರು.

ಕೊನೆಯದಾಗಿ ಕಠಿಣ ಹಾಡು ಹಾಡಿದ ಮಂಗಳೂರಿನ ಸಂದೇಶ್ ನೀರುಮಾರ್ಗ ಹಾಗೂ ಚಿನ್ಮಯ್ ಉಳಿದುಕೊಂಡರು. ಅಂತಿಮವಾಗಿ 2021 ರ ಎದೆ ತುಂಬಿ ಹಾಡುವೆನು ವಿನ್ನರ್ ಆಗಿ ಗಾಯಕ ಚಿನ್ಮಯ್ ಹತ್ತು ಲಕ್ಷ ರೂಪಾಯಿ ನಗದು ಬಹುಮಾನ ಪಡೆದುಕೊಂಡರು. ಹಾಗೂ ರನ್ನರ್ ಅಪ್ ಸ್ಥಾನ ಪಡೆದ ಸಂದೇಶ್ ಅವರಿಗೆ ರೂ. 5 ಲಕ್ಷ ನಗದು ಬಹುಮಾನ ದೊರೆಯಿತು.0 Comments

Post a Comment

Post a Comment (0)

Previous Post Next Post