ದೇಹ ಭಾರದ ಚಿಂತೆ ಬೇಡ, ಅನುಸರಿಸೋಣ ಸರಳ ಉಪಾಯ

Arpitha
0



ಆಧುನಿಕ ಜಗತ್ತು ತಂತ್ರಜ್ಞಾನದ ಮೊರೆ ಹೋಗುತ್ತಿದೆ. ಇದರಿಂದ ಮನುಷ್ಯ ಸೋಮಾರಿಯಾಗುತ್ತಿದ್ದಾನೆ. ಪ್ರತೀ ಕೆಲಸವನ್ನು ಸುಲಭದಲ್ಲಿಯೇ ಮಾಡಿ ಮುಗಿಸಬೇಕೆಂಬ ಹವಣಿಕೆಯು ಇಂದು ಆತ ದೇಹ ಭಾರವನ್ನು ಹೊರಲು ಕಾರಣವಾಗಿದೆ ಎನ್ನಬಹುದು. ಹೌದು‌...ವ್ಯಕ್ತಿ ದೇಹದ ಬೊಜ್ಜನ್ನು ಕರಗಿಸಲು ಇಂದು ಅನೇಕ ಮಾರ್ಗೋಪಾಯಗಳ ಮೊರೆ ಹೋಗಬೇಕಾಗಿದೆ.

ಹಾಗಾದರೆ ದೇಹದ ತೂಕವನ್ನು ಇಳಿಸಲು ಸರಳ ದಾರಿ ಯಾವುದು ಎಂದು ನೋಡುವುದಾದರೆ ಕ್ಯಾಲೋರಿ ಇಲ್ಲದ ಆಹಾರಗಳು ದೇಹಕ್ಕೆ ಹೆಚ್ಚಿನ ಪ್ರಮಾಣದ ಶಕ್ತಿ ನೀಡುವ ಆಹಾರವಾಗಿದೆ. ಇದರಿಂದ ಸರಿಯಾದ ಜೀರ್ಣಕ್ರಿಯೆ ಕೂಡ ಆಗುತ್ತದೆ. ಇನ್ನು ಮನೆಯಲ್ಲಿಯೇ ಖರ್ಚೇ ಇಲ್ಲದೆ ಸ್ಲಿಮ್ ಆಗುವುದು ಹೇಗೆ ಎಂಬ ಪ್ರಶ್ನೆ ಹಲವರಲ್ಲಿ ಕಾಡುತ್ತಿರಬಹುದು. ನೋಡೋಣ ಬನ್ನಿ....


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಟೊಮೆಟೊ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಉಪಯೋಗಿಸುವ ತರಕಾರಿ. ಇದು ಹೆಚ್ಚಿನ ನೀರಿನಾಂಶವನ್ನು ಕೂಡ ಹೊಂದಿದೆ. ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಸಹಕಾರಿ ಮಾತ್ರವಲ್ಲದೆ ಚರ್ಮದ ಕ್ಯಾನ್ಸರ್ ನಿಂದ ಕೂಡ ಇದು ರಕ್ಷಣೆ ನೀಡುತ್ತದೆ.

ಇನ್ನು ಕ್ಯಾರೆಟ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹಸಿ ಇರುವಾಗ ಜಗಿದು ತಿನ್ನುವುದರಿಂದ ಹಿಡಿದು ಕ್ಯಾರೆಟ್ ಹಲ್ವ ಮಾಡುವವರೆಗೂ ನಾವು ಕ್ಯಾರೆಟನ್ನು ಇಷ್ಟಪಡುತ್ತೇವೆ. ಇದರಲ್ಲಿರುವ ನಾರಿನಾಂಶವು ಹೊಟ್ಟೆಯನ್ನು ದೀರ್ಘಕಾಲ ಹಸಿವಾಗದಂತೆ ತಡೆದು ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ.

ಹೀರೆಕಾಯಿಯಲ್ಲೂ ಕೂಡ ನಾವು ನಾರಿನಂಶವನ್ನು ಗಮನಿಸಬಹುದು. ಈ ತರಕಾರಿ ದೇಹದ ತೂಕವನ್ನು ಇಳಿಸಲು ಪ್ರಮುಖ ಪಾತ್ರ ವಹಿಸುತ್ತದೆ.

ಕೇವಲ ಇದಿಷ್ಟೇ ತಿಂದರೆ ಸಾಲದು. ದೈಹಿಕ ಶ್ರಮ ಹಾಕಿ ಮಾಡುವ ಪ್ರತೀ ಕೆಲಸವೂ, ಕೆಲಸದ ನಂತರ ಬೆವರಿಳಿಸುವ ಪ್ರತೀ ಕಾರ್ಯವೂ ದೇಹದ ಬೊಜ್ಜನ್ನು ನಿಯಂತ್ರುಸುವ ಒಂದು ಮಾರ್ಗವಾಗಿದೆ. ವ್ಯಾಯಾಮ, ಯೋಗ ಮುಂತಾದವು ದೇಹದ ತೂಕದ ನಿಯಂತ್ರಣ ಮಾತ್ರವಲ್ಲದೆ ಮಾನಸಿಕ ನಿಯಂತ್ರಣವನ್ನು ಕೂಡ ಮಾಡುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತದೆ.

- ಅರ್ಪಿತಾ ಕುಂದರ್

Post a Comment

0 Comments
Post a Comment (0)
Mandovi Motors
Mandovi Motors
To Top