ಶಿಕ್ಷಣದ ನೆಪಮಾತ್ರಕ್ಕೆ ಸೇರುವಳು ಕಾಲೇಜು
ಅಂತಿಮ ಹಂತದಲ್ಲಿತ್ತು ಅವಳ ಟೀನೇಜು
ಗುಣಕ್ಕೆ ಅಡ್ಡಗೋಡೆಯಾಯಿತು ಜ್ವಾಲಿಯ ಮೋಜು
ದಾಟಿ ಬಿಟ್ಟಳು ಅನೈತಿಕತೆಯ ಸ್ಟೇಜು
ನಿಮಿಷಾರ್ಧದಲ್ಲಿ ಚೂರಾಯಿತು ವಿದ್ಯಾರ್ಥಿ ಎಂಬ ಪವಿತ್ರ ಗಾಜು
ಹಾಕಲಾಗದು ಹೆತ್ತವರ ಮನದ ಗಾಯಕ್ಕೆ ಬ್ಯಾಂಡೇಜು
ಹೊರೆಯಿಳಿಸುವ ಅನಿವಾರ್ಯ ಲವ್ ಮ್ಯಾರೇಜು
ಹೆತ್ತವರ ಘನತೆಯಾಯಿತು ಗಲೀಜು
ಬದುಕಬೇಕೆಂಬ ಹವಣಿಕೆಗೆ ಕಲಿಯಬೇಕು ಈಜು
ಕಾರಣವೇನು ಇದಕ್ಕೆ ಏಜೋ, ಕಾಲೇಜೋ
ತಿಳಿಯದಾದರೂ ಈಗ ಅವರೆಲ್ಲರಿಗೂ ವಿಷಾದ.....
ಬೇಕಿತ್ತೇ ಅವಳನ್ನು ಕಾಲೇಜು ಹತ್ತಿಸುವ ಗೋಜು....???
ರಚನೆ:- ಅರ್ಪಿತಾ ಕುಂದರ್