ಅದರಂತೆ ಕನ್ನಡ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿ ಎಂದೇ ಫೇಮಸ್ ಆಗಿರುವ ನಟ ಸುದೀಪ್ ರವರಿಗೆ ಅಂತೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರ ಸಹಕಾರ ಮನೋಭಾವ ಮಾತ್ರ ಇನ್ನಷ್ಟು ಅಭಿಮಾನವನ್ನು ಸಂಪಾದಿಸಿದೆ.
ಇದೀಗ ಅವರ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಬಂದಿದೆ. ಬಹುನಿರೀಕ್ಷಿತ 'ವಿಕ್ರಾಂತ್ ರೋಣ' ಸಿನಿಮಾದ ರಿಲೀಸ್ ದಿನಾಂಕ ಇಂದೇ ನಿಗದಿಯಾಗಿದೆ. ಫೆಬ್ರವರಿ 24ರಂದು ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವುದಾಗಿ ಇಂದು ಬೆಳಿಗ್ಗೆ ಸುದೀಪ್ ಪ್ರಕಟಿಸಿದ್ದಾರೆ.
ಈ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಶೇಷವಾದ ಪಾತ್ರವನ್ನು ನಿರ್ವಹಿಸಲಿದ್ದು ' ರಂಗಿತರಂಗ' ಸಿನಿಮಾ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.