||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಿಯ್ಯಾರು: "ಲವ- ಕುಶ" ಜೋಡುಕರೆ ಕಂಬಳ ಕೂಟಕ್ಕೆ ತೆರೆ

ಮಿಯ್ಯಾರು: "ಲವ- ಕುಶ" ಜೋಡುಕರೆ ಕಂಬಳ ಕೂಟಕ್ಕೆ ತೆರೆ
ಕಾರ್ಕಳ: ಇಲ್ಲಿನ ಮಿಯ್ಯಾರಿನಲ್ಲಿ ನಡೆದ ಲವ - ಕುಶ ಜೋಡುಕರೆ ಕಂಬಳ ಕೂಟ ಸಂಪನ್ನವಾಗಿದೆ. ಶನಿವಾರ ಬೆಳಿಗ್ಗೆ ಇಂಧನ ಸಚಿವ ವಿ. ಸುನಿಲ್ ಕುಮಾರ್, ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ್ ಭಟ್ ಅವರಿಂದ ಉದ್ಘಾಟನೆಗೊಂಡ 18 ನೇ ವರ್ಷದ ಮಿಯ್ಯಾರು "ಲವ - ಕುಶ " ಜೋಡುಕರೆ ಕಂಬಳ ಭಾನುವಾರದ ಬೆಳಿಗ್ಗೆ ಕೊನೆಗೊಂಡಿತು.

ಈ ಬಾರಿಯ ಕಂಬಳ ಕೂಟದಲ್ಲಿ 177 ಜೊತೆ ಕೋಣಗಳು ಭಾಗವಹಿಸಿದ್ದವು. ಹಗ್ಗ ಕಿರಿಯ ವಿಭಾಗದಲ್ಲಿ 25 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 85 ಜೊತೆ ಕೋಣಗಳು, ಕನೆಹಲಗೆ ವಿಭಾಗದಲ್ಲಿ 5 ಜೊತೆ, ಅಡ್ಡಹಲಗೆ ವಿಭಾಗದಲ್ಲಿ 7 ಜೊತೆ , ಹಗ್ಗ ಹಿರಿಯ ವಿಭಾಗದಲ್ಲಿ 16 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 39 ಜೊತೆ ಕೋಣಗಳು ಭಾಗವಹಿಸಿದ್ದವು.

ಅನೇಕ ಸಂಖ್ಯೆಯಲ್ಲಿ ಕಂಬಳ ಪ್ರಿಯರು  ಆಗಮಿಸಿದ್ದು , ವಿಜೃಂಭಣೆಯಿಂದ ಈ ಕೂಟ ಮುಕ್ತಾಯಗೊಂಡಿತು.

0 Comments

Post a Comment

Post a Comment (0)

Previous Post Next Post